ಬೆಂಗಳೂರು : ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಎಲ್ಲರ ಕೈ ಪಾದಗಳು ಬೆವರುವುದು ಸಹಜ. ಆದರೆ ಕೆಲವರಿಗೆ ಎಲ್ಲಾ ಸಮಯದಲ್ಲೂ ಕೈ ಪಾದದಲ್ಲಿ ಬೆವರು ಕಾಣಿಸುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಇಲ್ಲಿದೆ ನೋಡಿ ಮನೆಮದ್ದು.
ದಾಳಿಂಬೆ ಮರದ ಚಿಗುರು ಎಲೆಯನ್ನು ಪ್ರತಿದಿನ ಮೂರು ಹೊತ್ತು ಊಟ ಆದ ಮೇಲೆ ತಿನ್ನಬೇಕು. ಇದರಿಂದ ಕೈ ಪಾದಗಳು ಬೆವರುವ ಸಮಸ್ಯೆ ಕಡಿಮೆಯಾಗುತ್ತದೆ. ಪ್ರತಿದಿನ 2 ಬಾರಿ ಬಿಸಿ ಹಾಲಿಗೆ 1 ಚಮಚ ಅಶ್ವಗಂಧ ಪುಡಿಯನ್ನು ಮಿಕ್ಸ್ ಮಾಡಿ ಊಟ ಆದ ಮೇಲೆ ಕುಡಿಯಿರಿ. ಇದರಿಂದಲೂ ಕೈ ಬೆವರುವುದು ಕಡಿಮೆಯಾಗುತ್ತದೆ.
ಓಂಕಾಳು ಪುಡಿ 1 ಚಮಚ ತೆಗೆದುಕೊಂಡು ಅದಕ್ಕೆ ಎಳ್ಳೆಣ್ಣೆ ಹಾಕಿ ಮಿಕ್ಸ್ ಮಾಡಿ ರಾತ್ರಿಯಿಡಿ ಹಾಗೇ ಇಡಿ. ಬೆಳಿಗ್ಗೆ ತಿಂಡಿ ತಿನ್ನವ 1 ಗಂಟೆ ಮೊದಲು ಅದನ್ನು ತಿನ್ನಬೇಕು. ಇದನ್ನು ಪ್ರತಿದಿನ ಮಾಡುವುದರಿಂದ 2 ತಿಂಗಳಲ್ಲೇ ನಿಮ್ಮ ಈ ಸಮಸ್ಯೆ ದೂರವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.