Publish Date: Sun, 14 Jul 2019 (06:43 IST)
Updated Date: Sun, 14 Jul 2019 (06:44 IST)
ಬೆಂಗಳೂರು : ಸೂರ್ಯನ ಬಿಸಿಲಿನಲ್ಲಿ ಹೆಚ್ಚಾಗಿ ಕೆಲಸ ಮಾಡುವವರಿಗೆ ಮೈಮೇಲೆ ಬೊಕ್ಕೆಗಳು ಮೂಡುತ್ತದೆ. ಇದರಿಂದ ತುಂಬಾ ನೋವು ಉಂಟಾಗುತ್ತದೆ. ಈ ಬೊಕ್ಕೆಗಳು ಬೇಗ ವಾಸಿಯಾಗಲು ಈ ಮನೆಮದ್ದನ್ನು ಬಳಸಿ.
ಸೌತೆಕಾಯಿ ಈ ಬೊಕ್ಕೆಗಳನ್ನು ಬೇಗ ನಿವಾರಿಸಿಕೊಳ್ಳಲು ಉತ್ತಮ ಮನೆಮದ್ದು. ಇದು ಆಂಟಿಆಕ್ಸಿಡೆಂಟ್ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿದೆ. ಮೊದಲು ಒಂದು ಗಂಟೆ ಕಾಲ ಸೌತೆಕಾಯಿಯನ್ನು ಫ್ರಿಡ್ಜ್ನಲ್ಲಿಡಿ. ಹೀಗೆ ತಣ್ಣಗಿರುವ ಸೌತೆಕಾಯಿಯನ್ನು ಪೇಸ್ಟ್ ಮಾಡಿ ಸನ್ಬರ್ನ್ ಆದ ಜಾಗದಲ್ಲಿ ಹಚ್ಚುವುದರಿಂದ ನೋವಿನ ಜೊತೆಗೆ ಸನ್ಬರ್ನ್ಗಳು ನಿವಾರಣೆಯಾಗುತ್ತದೆ.
ಒಂದು ಸೌತೆಕಾಯಿ ಪೇಸ್ಟ್ ತಯಾರಿಸಲು ಸಮಯವಿಲ್ಲದವರು ಸೌತೆಕಾಯಿಯನ್ನು ಹಾಗೆಯೇ ಕತ್ತರಿಸಿ ಬೊಕ್ಕೆಗಳಿರುವ ಭಾಗದಲ್ಲಿ ಇಟ್ಟುಕೊಳ್ಳಬಹುದು.