ಕೈಕಾಲುಗಳಲ್ಲಿರುವ ಗಾಯದ ಕಲೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ

ಶುಕ್ರವಾರ, 15 ಮಾರ್ಚ್ 2019 (07:07 IST)
ಬೆಂಗಳೂರು : ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿ ಆಟವಾಡುವಾಗ ಆದ ಗಾಯಗಳು ಗುಣವಾದರೂ ಅದರ ಕಲೆ ಹಾಗೇ ಉಳಿದುಕೊಳ್ಳುತ್ತದೆ. ಇದು ಕೈ ಕಾಲಿನ ಅಂದವನ್ನು ಕೆಡಿಸುತ್ತದೆ. ಫ್ಯಾಶನ್ ಡ್ರೆಸ್ ಗಳನ್ನು ತೊಡುವಾಗ ಮುಜುಗರಕ್ಕೊಳಗಾಗುತ್ತಾರೆ. ಈ ಕಲೆಗಳನ್ನು ಕೆಲವು ಮನೆಮದ್ದಿನಿಂದ ನಿವಾರಿಸಿಕೊಳ್ಳಬಹುದು.


ಒಂದು ಲಿಂಬೆಹಣ್ಣಿನ ರಸವನ್ನು ಹತ್ತಿಯುಂಡೆಯ ಸಹಾಯದಿಂದ  ತೆಗೆದುಕೊಂಡು ಕಲೆ ಇರುವ ಭಾಗದ ಮೇಲೆ ನೇರವಾಗಿ ತಾಕುವಂತೆ ಹತ್ತು ನಿಮಿಷ ಇರಿಸಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಕಲೆ ಮಾಯವಾಗುವವರೆಗೂ ನಿತ್ಯವೂ ಈ ವಿಧಾನವನ್ನು ಅನುಸರಿಸಿ.


2 ಚಮಚ ಜೇನುತುಪ್ಪ ಹಾಗೂ 2 ಚಮಚ ಅಡುಗೆ ಸೋಡಾದೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಕಲೆಯಿರುವ ಜಾಗದ ಮೇಲೆ ಹಚ್ಚಿ ಮಸಾಜ್ ಮಾಡಿ ಮೂರು ನಿಮಿಷ ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಿಮಿರು ಸಮಸ್ಯೆ ಬರಬಾರದೆಂದರೆ ಈ ಆಹಾರ ಪದಾರ್ಥಗಳನ್ನು ಎಂದೂ ಸೇವಿಸಬೇಡಿ