ತಕ್ಷಣ ತಲೆನೋವು ಕಡಿಮೆಯಾಗಲು ಇದನ್ನು ಬಳಸಿ

ಶುಕ್ರವಾರ, 4 ಜನವರಿ 2019 (11:43 IST)
ಬೆಂಗಳೂರು : ನಿದ್ರೆ ಸರಿಯಾಗಿ ಮಾಡದಿದ್ದಾಗ, ತುಂಬಾ ಟೆನ್ಷನ್ ಮಾಡಿಕೊಂಡಾಗ, ದೂರ ಪ್ರಯಾಣ ಬೆಳೆಸಿದಾಗ ಕೆಲವರಿಗೆ ತಲೆನೋವು ಕಂಡುಬರುತ್ತದೆ. ಇದನ್ನು ಕ್ಷಣ ಮಾತ್ರದಲ್ಲಿ ನಿವಾರಿಸಿಕೊಳ್ಳಲು ಈ ಮನೆಮದ್ದನ್ನು ಬಳಸಿ.


ಏಲಕ್ಕಿಯನ್ನು ಪುಡಿಮಾಡಿಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಅದನ್ನು ತಲೆನೋವು ಇರುವ ಭಾಗದಲ್ಲಿ ಹಚ್ಚಿದರೆ 10 ನಿಮಿಷದಲ್ಲಿ ತಲೆನೋವು ಮಾಯವಾಗುತ್ತದೆ.


ಹಾಗೇ ಒಣಶುಂಠಿಯನ್ನು ಕೂಡ ಪುಡಿಮಾಡಿಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಅದನ್ನು ತಲೆನೋವು ಇರುವ ಭಾಗದಲ್ಲಿ ಹಚ್ಚಿದರೆ 10 ನಿಮಿಷದಲ್ಲಿ ತಲೆನೋವು ಮಾಯವಾಗುತ್ತದೆ.


ತುಳಸಿ ಎಲೆಯನ್ನು  ಪೇಸ್ಟ್ ಮಾಡಿ ತಲೆನೋವು ಇರುವ ಭಾಗದಲ್ಲಿ ಹಚ್ಚುವುದರಿಂದ ಕೂಡ ತಲೆನೋವು ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲೋ ಬಿಪಿ ಒಂದೇ ದಿನದಲ್ಲಿ ನಾರ್ಮಲ್ ಗೆ ಬರಲು ಈ ಮನೆಮದ್ದು ಸೇವಿಸಿ