Select Your Language

Notifications

webdunia
webdunia
webdunia
webdunia

ಟೊಮೆಟೊ ದೋಸೆ ಮಾಡುವುದು ಹೇಗೆ ಗೊತ್ತಾ?

ಟೊಮೆಟೊ ದೋಸೆ ಮಾಡುವುದು ಹೇಗೆ ಗೊತ್ತಾ?
ಬೆಂಗಳೂರು , ಬುಧವಾರ, 1 ಜುಲೈ 2020 (09:32 IST)
ಬೆಂಗಳೂರು : ದೋಸೆ ಎಲ್ಲರೂ ಇಷ್ಟಪಡುತ್ತಾರೆ. ಹಲವು ಬಗೆಯ ದೋಸೆಗಳನ್ನು ಮಾಡಬಹುದು. ಅದರಲ್ಲಿ ಟೊಮೆಟೊ ದೋಸೆ ಕೂಡ ಒಂದು. ಅದು ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಬೇಕಾಗುವ ಸಾಮಾಗ್ರಿಗಳು : ದೋಸೆ ಹಿಟ್ಟು(1 ಗ್ಲಾಸ್ ಅಕ್ಕಿ ಮತ್ತು ¼ ಗ್ಲಾಸ್ ಉದ್ದಿನಬೇಳೆ, ಅವಲಕ್ಕಿ, ಕಡಲೆಬೇಳೆ) 2 ಕಪ್, ಹಸಿ ಮೆಣಸಿನ ಕಾಯಿ 3, ಟೊಮೆಟೊ 2, ಜೀರಿಗೆ 1 ಚಮಚ, ಹಸಿ ಶುಂಠಿ ಸ್ವಲ್ಪ, ಉಪ್ಪು, ಎಣ್ಣೆ.

ಮಾಡುವ ವಿಧಾನ : ರಾತ್ರಿಯ ವೇಳೆಯೇ ದೋಸೆ ಹಿಟ್ಟು ರೆಡಿಮಾಡಿಕೊಳ್ಳಿ. ಬೆಳಿಗ್ಗೆ ಹಸಿ ಮೆಣಸಿನ ಕಾಯಿ , ಟೊಮೆಟೊ, ಜೀರಿಗೆ, ಹಸಿ ಶುಂಠಿ ನೀರು ಹಾಕದೆ ಮಿಕ್ಸಿಯಲ್ಲಿ ರುಬ್ಬಿ ದೋಸೆ ಹಿಟ್ಟಿಗೆ ಮಿಕ್ಸ್ ಮಾಡಿ. ಅದಕ್ಕೆ ಉಪ್ಪು, ಸಕ್ಕರೆ ಮಿಕ್ಸ್ ಮಾಡಿ ತವಾ ಮೇಲೆ ದೋಸೆ ಹುಯ್ಯಿದರೆ ಟೊಮೆಟೊ ದೋಸೆ ರೆಡಿ.



Share this Story:

Follow Webdunia kannada

ಮುಂದಿನ ಸುದ್ದಿ

ಕೈಕಾಲಿನ ಮಂಡಿಗಳಲ್ಲಿರುವ ಕಪ್ಪು ಕಲೆ ನಿವಾರಣೆಯಾಗಲು ಇದನ್ನು ಹಚ್ಚಿ