ಮುಖದಲ್ಲಿರುವ ನೆರಿಗೆಯನ್ನು ನಿವಾರಿಸುವ ಸುಲಭ ಉಪಾಯ ಇಲ್ಲಿದೆ ನೋಡಿ!

Webdunia
ಸೋಮವಾರ, 19 ಮಾರ್ಚ್ 2018 (12:14 IST)
ಬೆಂಗಳೂರು: ಮೊದಲೆಲ್ಲಾ ವಯಸ್ಸಾದ ಮೇಲೆ ಮುಖದಲ್ಲಿ ನೆರಿಗೆ, ಹಣೆಯಲ್ಲಿ ನೆರಿಗೆ ಮೂಡುತ್ತಿತ್ತು. ಆದರೆ ಈಗ ವಯಸ್ಸಿಗೆ ಮೊದಲೇ ಈ ಸಮಸ್ಯೆಗಳು ಕಾಡುತ್ತವೆ. ಹದಿಹರೆಯದಲ್ಲಿಯೇ ಹಣೆಯಲ್ಲಿ ನೆರಿಗೆ ಮೂಡಿದರೆ ಒಂದು ರೀತಿ ಕೀಳರಿಮೆ ಕಾಡಲು ಶುರುವಾಗುತ್ತದೆ. ಇಂದಿನ ಒತ್ತಡದ ಬದುಕು ಕೂಡ ಇದಕ್ಕೆಲ್ಲಾ ಕಾರಣ. ಇದನ್ನು ನಿವಾರಿಸಲು ಮನೆಮದ್ದು ಇಲ್ಲಿದೆ ನೋಡಿ.


ಮಸಾಜ್: ಹಣೆಗೆ ಆಲಿವ್ ಎಣ್ಣೆ, ಅಥವಾ ತೆಂಗಿನ ಎಣ್ಣೆಯಿಂದ ನಿಧಾನವಾಗಿ ಹತ್ತು ನಿಮಿಷ ಮಸಾಜ್ ಮಾಡಿಕೊಳ್ಳಿ. ಇದರಿಂದ ನೆರಿಗೆ ಕಡಿಮೆಯಾಗುತ್ತದೆ.


ಒತ್ತಡ ಕಡಿಮೆಮಾಡಿಕೊಳ್ಳಿ: ಆರೋಗ್ಯಕರವಾದ ಜೀವನಶೈಲಿ ಪಾಲಿಸಿ. ಅತೀಯಾದ ಒತ್ತಡದಿಂದ ಮುಖದಲ್ಲಿ ನೆರಿಗೆ ಕಾಣಿಸಿಕೊಳ್ಳುತ್ತದೆ. ಹಣ್ಣು, ತರಕಾರಿ, ನೀರು ಸೇವನೆಯಿಂದ ಇದನ್ನು ಕಡಿಮೆ ಮಾಡಿಕೊಳ್ಳಿ.


ಜೇನುತುಪ್ಪ: ತಾಜಾ ಜೇನುತುಪ್ಪವನ್ನು ನೇರವಾಗಿ ಹಣೆಗೆ ಹಚ್ಚಿಕೊಳ್ಳಬಹುದು ಅಥವಾ ಅಕ್ಕಿ ಹಿಟ್ಟಿನ ಜತೆಗೆ ಸೇರಿಸಿ ಹಚ್ಚಿಕೊಂಡರೆ ಉತ್ತಮ ಫಲಿತಾಂಶ ಸಿಗುವುದು. ಅಕ್ಕಿಹಿಟ್ಟಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಚರ್ಮಕ್ಕೆ ತೇವಾಂಶ ನೀಡುವುದು. ಒಂದು ಚಮಚ ಅಕ್ಕಿಹಿಟ್ಟು ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿಕೊಳ್ಳಿ. ಇದನ್ನು ಹಣೆಗೆ ಹಚ್ಚಿಕೊಂಡು ಒಣಗಲು ಬಿಡಿ ಮತ್ತು ಬಳಿಕ ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡಿ.

ಅಲೋವೆರಾ: ಇದರ ಲೋಳೆಯಿಂದ ಹಣೆಗೆ ಮಸಾಜ್ ಮಾಡಿ. ಮಲಗುವ ಮೊದಲು ಹೀಗೆ ಮಾಡಿ. ಬೆಳಿಗ್ಗೆ ಎದ್ದ ಬಳಿಕ ಮುಖ ತೊಳೆಯಿರಿ. 15 ನಿಮಿಷ ಒಣಗಲು ಬಿಟ್ಟು ಉಗುರುಬೆಚ್ಚಗಿನ ನೀರಿನಿಂದಲೂ ತೊಳೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ದೇಹದಲ್ಲಿ ನೀರಿನಂಶ ಹೆಚ್ಚಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಮುಂದಿನ ಸುದ್ದಿ
Show comments