ಹಲವು ಸಮಸ್ಯೆಗೆ ರಾಮಬಾಣ ಈ ಗರಿಕೆ ಹುಲ್ಲು

Webdunia
ಮಂಗಳವಾರ, 15 ಮೇ 2018 (06:00 IST)
ಬೆಂಗಳೂರು : ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಹಾಗೆಂದು ಹಸಿ ಹುಲ್ಲನ್ನೇ ತಿನ್ನಬೇಕಾಗಿಲ್ಲ. ಏನು ಮಾಡಬಹುದು ನೋಡೋಣ.

*ಬೇರೆ ಬೇರೆ ತೊಂದರೆಗಳಿಗೆ ನಾವು ಡಾಕ್ಟರ್ ಹೇಳಿದ ಮಾತ್ರೆಯನ್ನು ತೆಗೆದುಕೊಂಡಿರುತ್ತೇವೆ. ಖಾಯಿಲೆ ವಾಸಿಯಾದರೂ ಮಾತ್ರೆಯ ಅಡ್ಡ ಪರಿಣಾಮ ಸ್ವಲ್ಪವಾದರೂ ಕಂಡುಬರುತ್ತದೆ. ಇಂತಹ ಸಮಯದಲ್ಲಿ ಒಂದು ಹಿಡಿ ಗರಿಕೆಯನ್ನು ಎರಡು ಲೋಟ ನೀರಿನಲ್ಲಿ ಹಾಕಿ, ಆ ನೀರು ಸ್ವಲ್ಪ ಬತ್ತುವವರೆಗೆ ಕುದಿಸಿ ನಂತರ ಆ ನೀರನ್ನು ಕುಡಿದರೆ ಹಳೆಯ ಔಷಧಿಗಳ ಅವಶೇಷಗಳೆಲ್ಲ ಶರೀರದಿಂದ ಮಾಯವಾಗುತ್ತದೆ. ಒಂದು ತಿಂಗಳವರೆಗೆ ಈ ಕಷಾಯವನ್ನು ಕುಡಿಯಬೇಕಾಗುತ್ತದೆ.

 

*ಗರಿಕೆ ಮತ್ತು ಸ್ವಲ್ಪ ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಆ ಕಷಾಯವನ್ನು ಕುಡಿದರೆ ವಾಯುವಿನಿಂದಾಗುವ ಬೆನ್ನು ಮತ್ತು ಸೊಂಟನೋವು ಕಡಿಮೆಯಾಗುತ್ತದೆ . ಈ ಕಷಾಯವನ್ನು ಸುಮಾರು ಒಂದು ತಿಂಗಳ ಕಾಲ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಜೀರ್ಣದ ಸಮಸ್ಯೆಗಳು , ಹಸಿವಿಲ್ಲದಿರುವುದು ಎಲ್ಲದಕ್ಕೂ ಒಳ್ಳೆಯದು. ಅನಗತ್ಯ ಕೊಲೆಸ್ಟರಾಲ್ ಕೂಡಾ ಕಡಿಮೆಯಾಗುತ್ತದೆ .

 

*ತೆಂಗಿನ ಎಣ್ಣೆಯಲ್ಲಿ ಗರಿಕೆಯನ್ನು ಕುದಿಸಿ ಆರಿಸಿ ತಲೆಗೆ ಹಚ್ಚಿದರೆ, ಶರೀರದ ಉಷ್ಣದಿಂದಾಗುವ ತಲೆಹೊಟ್ಟು ಕಡಿಮೆಯಾಗುವುದು.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments