Publish Date: Sun, 01 Jul 2018 (09:03 IST)
Updated Date: Sun, 01 Jul 2018 (09:05 IST)
ಬೆಂಗಳೂರು: ಕೆಲವೊಂದು ವಿಚಾರಗಳು, ವಸ್ತುಗಳು ನಮ್ಮ ಲೈಂಗಿಕ ಬಯಕೆಯನ್ನು ಬಡಿದೆಬ್ಬಿಸಲು ಕಾರಣವಾಗುತ್ತವೆ. ಅವು ಯಾವುವು ನೋಡೋಣ.
ಡಾರ್ಕ್ ಲಿಪ್ ಸ್ಟಿಕ್
ಮಹಿಳೆಯರು ಸುಂದರವಾಗಿ ಅಲಂಕರಿಸಿಕೊಂಡರೆ ಯಾವ ಪುರುಷ ತಾನೇ ಬಲೆಗೆ ಬೀಳದೇ ಇರುತ್ತಾನೆ. ಅದೇ ರೀತಿ ಮಹಿಳೆಯರ ಗಾಢವಾದ ಲಿಪ್ ಸ್ಟಿಕ್ ಪುರುಷ ಅಟ್ರಾಕ್ಟ್ ಆಗಲು ಕಾರಣವಾಗಬಹುದು.
ಸೀರೆಯುಟ್ಟ ನಾರಿ
ಸೀರೆ ಭಾರತೀಯ ನಾರಿಯ ಪ್ರತೀಕ ಹೌದು. ಹಾಗೆಯೇ ಪುರುಷನ ಗಮನ ಸೆಳೆಯುವುದು ಸೀರೆಯೇ. ಸೀರೆಯುಟ್ಟ ನಾರಿಯ ಲುಕ್ ಗೆ ಮರುಳಾಗದ ಪುರುಷನಿರಲ್ಲ.
ಪರ್ಫ್ಯೂಮ್
ಕೆಲವೊಂದು ವಿಶೇಷ ಸುಗಂಧ ಕೊಡುವ ಪರ್ಫ್ಯೂಮ್ ಲೈಂಗಿಕ ಕಾಮನೆ ಹೆಚ್ಚಿಸಬಹುದು. ಹಾಗೆಯೇ ಮಲ್ಲಿಗೆ, ಕನಕಾಂಬರ ಹೂಗಳೂ ಲೈಂಗಿಕಾಸಕ್ತಿ ಹೆಚ್ಚು ಮಾಡಬಹುದು.
ಸಂಗೀತ
ಬೆಡ್ ರೂಂನಲ್ಲಿ ರೊಮ್ಯಾಂಟಿಕ್ ಆಗಿರುವ ಸುಮಧುರ ಸಂಗೀತ ಮೂಡಿಬರುತ್ತಿದ್ದರೆ ಬೇರೊಂದು ಲೋಕಕ್ಕೆ ಹೋಗುವುದು ಖಂಡಿತಾ. ಈ ಮೂಡ್ ಲೈಂಗಿಕಾಸಕ್ತಿ ಕೆರಳಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.