Webdunia - Bharat's app for daily news and videos

Install App

ಈ ಆಯುರ್ವೇದ ಗಿಡಮೂಲಿಕೆಯ ಆರೋಗ್ಯ ಪ್ರಯೋಜನಗಳು ಒಂದೆರೆಡಲ್ಲ..

Webdunia
ಗುರುವಾರ, 2 ಸೆಪ್ಟಂಬರ್ 2021 (08:29 IST)
ಆಯುರ್ವೇದದಲ್ಲಿ ವಿಥಾನಿಯಾ ಸೊಮ್ನಿಫೆರಾ ಅಂದರೆ ಅಶ್ವಗಂಧ ಒಂದು ಅದ್ಭುತ ಮೂಲಿಕೆಯಾಗಿದ್ದು ಇದನ್ನು ವಿವಿಧ ಔಷಧೀಯ ಉದ್ದೇಶಗಳಿಗಾಗಿ ಬಳಕೆ ಮಾಡಲಾಗುತ್ತದೆ. ಇದು ಭಾರತ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಜನಪ್ರಿಯವಾಗಿ ಬೆಳೆಯುವ ಮಸಾಲೆ. ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತದೆ. ಒತ್ತಡ, ಆತಂಕ, ಖಿನ್ನತೆ, ಆಯಾಸ ಮತ್ತು ನಿದ್ರಾಹೀನತೆಯಿಂದ ಚೇತರಿಸಿಕೊಳ್ಳಲು ಸಹಾಯ ಮಾಡುವಂತಹ ಗುಣಗಳನ್ನು ಹೊಂದಿರುವ ವಿಥನೊಲೈಡ್ಸ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಈ ಮೂಲಿಕೆ ಆರೋಗ್ಯವನ್ನು ವೃದ್ದಿಸುವ ಜೊತೆಗೇ ತಾರುಣ್ಯವನ್ನೂ ಕಾಪಾಡುತ್ತದೆ  ನೀವು ನಿದ್ರಾಹೀನತೆ ಸಮಸ್ಯೆಯಿಂದ  ಬಳಲುತ್ತಿದ್ದರೆ, ನಿಮ್ಮ ಆಹಾರದಲ್ಲಿ ಅಶ್ವಗಂಧವನ್ನು ಸೇವನೆ ಮಾಡುವುದು ಉತ್ತಮವಾದ ಆಯ್ಕೆ. ಅಶ್ವಗಂಧವು ಆಳವಾದ, ಪ್ರಶಾಂತವಾದ ನಿದ್ರೆ ಬರಲು ಸಹಾಯ ಮಾಡುತ್ತದೆ ಮತ್ತು ನಿದ್ರೆಯನ್ನು ಸುಧಾರಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ. ಇದು ನಿಮಗೆ ವಿಶ್ರಾಂತಿ ಮತ್ತು ಚೈತನ್ಯವನ್ನು ನೀಡುತ್ತದೆ.
ಅಷ್ಟೇ ಅಲ್ಲ, ಇದು  ನಿಮ್ಮ ನೆನಪಿನ ಶಕ್ತಿಯನ್ನು ಕೂಡ ಸುಧಾರಿಸುತ್ತದೆ. ಅಶ್ವಗಂಧವು ಮೆದುಳಿನಲ್ಲಿನ ಅಸಿಟೈಲ್ಕೋಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನೆನಪಿನ ಶಕ್ತಿ, ಮೆದುಳಿನ ಕಾರ್ಯ ಮತ್ತು ಬುದ್ಧಿವಂತಿಕೆಯೊಂದಿಗೆ ಸಂಬಂಧ ಹೊಂದಿರುವುದರಿಂದ ಸಹಾಯವಾಗುತ್ತದೆ.
ಅಶ್ವಗಂಧ ಮಾನಸಿಕ ಒತ್ತಡವನ್ನು ನಿವಾರಿಸುವ ಅದ್ಭುತ ಮೂಲಿಕೆ. ಇದು ಖಿನ್ನತೆಯ ವಿರುದ್ದ ಹೊರಾಡಲು ಸಹಾಯ ಮಾಡುತ್ತದೆ. ಮಾನಸಿಕ ಒತ್ತಡಕ್ಕೆ ಪ್ರಮುಖ ಕಾರಣ ಮೆದುಳಿನಲ್ಲಿ ಉತ್ಪತ್ತಿಯಾಗುವ ’ಕಾರ್ಟಿಸೋಲ್’ಎಂಬ  ರಾಸಾಯನಿಕ.  ಅಶ್ವಗಂಧ ಈ ರಾಸಾಯನಿಕ ಉತ್ಪಾದನೆಯನ್ನು ಆದಷ್ಟೂ ಮಟ್ಟಿಗೆ ನಿಗ್ರಹಿಸಿ ಇದರಿಂದ ಎದುರಾಗುವ ಮಾನಸಿಕ ಒತ್ತಡದಿಂದ ರಕ್ಷಣೆ ನೀಡುತ್ತದೆ. ಖಿನ್ನತೆ ಇರುವ ವ್ಯಕ್ತಿಗಳು ಅಶ್ವಗಂಧವನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯ ಪರಿಹಾರ ನೀಡುತ್ತದೆ.

ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಯಾಗಿದ್ದು ನೂರಾರು ವರ್ಷಗಳಿಂದ ಅಶ್ವಗಂಧವನ್ನು ಇದೇ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿದೆ. . ರೋಗ ನಿರೋಧಕ ಶಕ್ತಿ  ಹೆಚ್ಚಾದಷ್ಟೂ ಹಲವಾರು ರೋಗಗಳಿಂದ ರಕ್ಷಣೆ ಪಡೆಯುವುದು ಸಾಧ್ಯವಾಗುತ್ತದೆ., ಒಂದು ವೇಳೆ ಈಗಾಗಲೇ ಕ್ಯಾನ್ಸರ್ ಪೀಡಿತ ಜೀವಕೋಶಗಳ ಬೆಳವಣಿಗೆ ಪ್ರಾರಂಭವಾಗಿದ್ದರೆ  ಸರಿಯಾದ ಸಮಯದಲ್ಲಿ ಅಶ್ವಗಂಧ ಸೇವಿಸಿದರೆ ಈ ಜೀವಕೋಶಗಳನ್ನು ಸಾಯಿಸಬಹುದು.
ಅಶ್ವಗಂಧದ ನಿಯಮಿತ ಸೇವನೆ ಮಾಡುವುದರಿಂದ ಚರ್ಮದಲ್ಲಿ ಸುಕ್ಕು, ನೆರಿಗೆಗಳು, ಮುಂತಾದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಜೀವಕೋಶಗಳಿಗೆ ಹಾನಿ ಎಸಗುವ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುವ ಮೂಲಕ ಅಶ್ವಗಂಧ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಹಾಗೂ ಚರ್ಮದ ಕಾಂತಿಯನ್ನು ಹೆಚ್ಚು ಮಾಡುತ್ತದೆ.
ಅಶ್ವಗಂಧದ ಸೇವನೆಯಿಂದ ಚರ್ಮದ ಕೆಳಭಾಗದಲ್ಲಿ ಉತ್ತಮ ಪ್ರಮಾಣದ ರಕ್ತಪರಿಚಲನೆಯಾಗುತ್ತದೆ ಇದು ಕೂದಲ ಬುಡಗಳಿಗೆ ಉತ್ತಮ ಪ್ರಮಾಣದ ಪೋಷಕಾಂಶಗಳೂ ದೊರಕುವಂತೆ ಮಾಡುತ್ತದೆ. ಅಲ್ಲದೇ ಚರ್ಮದಲ್ಲಿ ಮೆಲನಿನ್ ಅಂಶವನ್ನು ಹೆಚ್ಚಿಸಲೂ ಅಶ್ವಗಂಧ ಸಹಾಯ ಮಾಡುತ್ತದೆ. ಕೂದಲ ಆರೋಗ್ಯಕ್ಕೆ ಈ ಮೆಲನಿನ್ ಅಗತ್ಯವಾದ ಪ್ರೋಟೀನ್ ಅನ್ನು ಒದಗಿಸುತ್ತದೆ.
ಅಶ್ವಗಂಧದ ಸೇವನೆಯಿಂದ ಚರ್ಮದ ಒಳಪದರದಲ್ಲಿ ನೈಸರ್ಗಿಕ ತೈಲಗಳು, ಕೊಲ್ಯಾಜೆನ್ ಮತ್ತು ಎಲಾಸ್ಟಿನ್ ಗಳ ಉತ್ಪತ್ತಿ ಹೆಚ್ಚುತ್ತದೆ. ಇವೆಲ್ಲವೂ ಮೃದು, ಕಾಂತಿಯುಕ್ತ ಹಾಗೂ ಆರೋಗ್ಯಕರ ತ್ವಚೆಗೆ ಅಗತ್ಯ ಎಂಬುದನ್ನ ಮರೆಯಬಾರದು. ಅಶ್ವಗಂಧದ ಸೇವನೆಯಿಂದ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಹಾಗಾಗಿ ಅಶ್ವಗಂಧವನ್ನು ಕಾಮೋತ್ತೇಜಕವಾಗಿಯೂ ಬಳಸಲಾಗುತ್ತಿದೆ.
ಅಶ್ವಗಂಧದ ಸೇವನೆಯಿಂದ ದೇಹದಲ್ಲಿ ರಸದೂತಗಳ ಸಮತೋಲನ ಸಾಧಿಸುವ ಮೂಲಕ ಎಂಡೋಕ್ರೈನ್ ವ್ಯವಸ್ಥೆಯನ್ನು ಸರಿಪಡಿಸುತ್ತದೆ. ಅಷ್ಟೇ ಅಲ್ಲದೇ ಅಶ್ವಗಂಧ ಮಹಿಳೆಯರಲ್ಲಿ  ಋತುಸ್ರಾವದ ಸಮಯದಲ್ಲಿ ಎದುರಾಗುವ ರಸದೂತಗಳ ಅಸಮತೋಲನವನ್ನು ಸರಿಪಡಿಸಲು ನೆರವಾಗುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ