Select Your Language

Notifications

webdunia
webdunia
webdunia
webdunia

ಲೈಂಗಿಕ ಸಮಸ್ಯೆ ನಿವಾರಿಸಿ, ಆಸಕ್ತಿ ಹೆಚ್ಚಿಸುತ್ತೆ ಈ ಆಹಾರ

ಲೈಂಗಿಕ ಸಮಸ್ಯೆ ನಿವಾರಿಸಿ, ಆಸಕ್ತಿ ಹೆಚ್ಚಿಸುತ್ತೆ ಈ ಆಹಾರ
ಬೆಂಗಳೂರು , ಶುಕ್ರವಾರ, 21 ಜುಲೈ 2017 (19:55 IST)
ಇಂದಿನ ಅಧುನಿಕ ಜೀವನದಲ್ಲಿ ಯಂತ್ರದಂತೆ ದುಡಿಯುವ ದಂಪತಿಗಳು ತಮ್ಮ ವೈಯಕ್ತಿಕ ಸುಖದತ್ತ ಹೆಚ್ಚು ಗಮನಗಳನ್ನು ನೀಡುವುದಿಲ್ಲ. ಕಾರಣ ಈಗಿನ ಬ್ಯುಸಿ ಜೀವನ. ಯಾವುದಕ್ಕೂ ಸಮಯವೇ ಇಲ್ಲದಿರುವುದು. ಇಂದಿನ ಆಧುನಿಕ ಭರಾಟೆ, ಒತ್ತಡದ ಜೀವನ ಶೈಲಿಯಿಂದಾಗಿ ಶೇ.40ರಿಂದ ಶೇ.45ರಷ್ಟು ವ್ಯಕ್ತಿಗಳು ಲೈಂಗಿಕ ಆಸಕ್ತಿಯನ್ನೆ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಲೈಂಗಿಕ ಆಸಕ್ತಿಗಳನ್ನು ಹೆಚ್ಚಿಸುವ ಕೆಲವು ಮನೆ ಮದ್ದುಗಳ ಕುರಿತು ಇಲ್ಲಿದೆ ಮಾಹಿತಿ.

 
ಬಾದಾಮಿ ಮತ್ತು ವಾಲ್ನಟ್:
 
ಬಾದಾಮಿ ಮತ್ತು ವಾಲ್ನಟ್ ಗಳಲ್ಲಿ ಸೆಕ್ಸ್ ಹಾರ್ಮೋನ್ ಉತ್ಪಾದನೆಗೆ ಬೇಕಾದ  ಮೆಲಟೋನಿನ್ ಮತ್ತು ಗುಡ್ ಕೊಲೆಸ್ಟ್ರಾಲ್, ಪೋಷಕಾಂಶಗಳ ಪ್ರಮಾಣ ಹೆಚ್ಚಿರುತ್ತದೆ. ಬಾದಾಮಿ ನಪುಂಸಕತೆ ಹಾಗೂ ಗರ್ಭಪಾತವನ್ನು ತಡೆಯುತ್ತದೆ. ಅಧಿಕ ಪ್ರಮಾನದ ವಿಟಮಿನ್ ಇ ಒದಗಿಸುತ್ತದೆ.
 
ನಿಂಬೆ, ಕಿತ್ತಳೆ, ದ್ರಾಕ್ಷಿ:
ನಿಂಬೆ, ಕಿತ್ತಳೆ ಹಾಗೂ ದ್ರಾಕ್ಷಿಗಳಂತಹ ಸಿಟ್ರಸ್ ಫ್ರೂಟ್ ಗಳನ್ನು ಹೆಚ್ಚು ಸೇವಿಸುವುದರಿಂದ ಆತ್ಮಸ್ಥೈರ್ಯ ಹೆಚ್ಚುವುದರ ಜತೆಗೆ ಲೈಂಗಿಕಾಸಕ್ತಿ ಹೆಚ್ಚಲು ಸಹಕಾರಿಯಾಗಿದೆ.
 
ಕೀವಿ ಹಣ್ಣು:
 
ಇದು ಮೆದುಳು, ಹೃದಯ,ಹಾಗೂ ರಕ್ತದ ನಾಳಗಳಿಗೆ ಸುಪರ್ ಫೂಡ್. ಇದು ಹಾರ್ಮೋನ್ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ಇದರಿಂದ ಲೈಮ್ಗಿಕ ಜೀವನ ಉತ್ತಮಗೊಳ್ಳುತ್ತದೆ. 
 
ಡಾರ್ಕ್ ಚಾಕೋಲೆಟ್:
 
ಡಾರ್ಕ್ ಚಾಕೋಲೆಟ್ ತಿನ್ನುವುದರಿಂದ ಮನಸ್ಸು ಉಲ್ಲಸಿತವಾಗಿರುತ್ತದೆ. ಸಂತಸ ಭಾವ ಮೂಡುತ್ತದೆ. ಮೆದುಳಿನಲ್ಲಿ ಸೆಕ್ಸ್ ಗೆ ಬೇಕಾದ ಕೆಮಿಕಲ್ ಉತ್ಪಾದನೆ ಹೆಚ್ಚಿಸುತ್ತೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ಬದನೆಕಾಯಿ ತಿನ್ನಲೇಬೇಕು ಯಾಕೆ ಗೊತ್ತಾ?