Select Your Language

Notifications

webdunia
webdunia
webdunia
webdunia

ಕೆಲಸದ ಒತ್ತಡವೂ ಕ್ಯಾನ್ಸರ್ ಗೆ ಕಾರಣವಾಗಬಹುದು, ಜೋಕೆ!

ಕೆಲಸದ ಒತ್ತಡವೂ ಕ್ಯಾನ್ಸರ್ ಗೆ ಕಾರಣವಾಗಬಹುದು, ಜೋಕೆ!
Bangalore , ಗುರುವಾರ, 19 ಜನವರಿ 2017 (10:38 IST)
ಬೆಂಗಳೂರು: ನಿಮ್ಮ ಕೆಲಸದಲ್ಲಿ ವಿಪರೀತ ಒತ್ತಡವೇ? ಕಚೇರಿಯಲ್ಲಿ ಒಂದು ನಿಮಿಷವೂ ರಿಲ್ಯಾಕ್ಸ್ ಆಗಲು ಸಮಯವಿಲ್ಲವೇ? ಹಾಗಿದ್ದರೆ ಎಚ್ಚರವಾಗಿರಿ. ಅಂತಹ ಕೆಲಸದ ಸಹವಾಸವೇ ಬೇಡ ಎನ್ನುವುದು ಒಳಿತು.
 

ಕಚೇರಿ ಕೆಲಸದ ಒತ್ತಡ ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಲ್ಲದು ಎಂದಿದೆ ನೂತನ ಅಧ್ಯಯನ. 15-30 ವರ್ಷ ಒಬ್ಬ ಪುರುಷ ಹೆಚ್ಚು ಒತ್ತಡದ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಆತನಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು ಎಂದು ಅಧ್ಯಯನಕಾರರು ಪತ್ತೆ ಮಾಡಿದ್ದಾರೆ.

ಕೆನಡಾದ ಮಾಂಟ್ರಿಯಲ್ ವಿವಿಯ ಸಂಶೋಧಕರು ಕ್ಯಾನ್ಸರ್ ಮತ್ತು ಪುರುಷರ ಒತ್ತಡದ ಕೆಲಸದ ನಡುವಿನ ಸಂಬಂಧವನ್ನು ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಅಧ್ಯಯನಕ್ಕೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಕೆಲಸಗಳನ್ನು ಒಂದೇ ಬಾರಿಗೆ ಮಾಡುವವರನ್ನು ಪರಿಗಣಿಸಲಾಗಿತ್ತು.

“ಇದುವರೆಗಿನ ಸಂಶೋಧನೆಗಳಲ್ಲಿ ಯಾರೂ ಕೆಲಸದ ವಿಷಯದಲ್ಲಿ ಬರುವ ಒತ್ತಡಗಳು ಹೇಗೆ ಕ್ಯಾನ್ಸರ್ ರೋಗ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಅಧ್ಯಯನ ನಡೆಸಿರಲಿಲ್ಲ. ನಮ್ಮ ಅಧ್ಯಯನದಿಂದ ಕ್ಯಾನ್ಸರ್ ಮತ್ತು ಕೆಲಸದ ಒತ್ತಡಕ್ಕೆ ಸಂಬಂಧವಿದೆ ಎನ್ನುವುದು ಗೊತ್ತಾಗಿದೆ” ಎಂದು ವಿವಿ ಸಂಶೋಧಕರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ