Select Your Language

Notifications

webdunia
webdunia
webdunia
webdunia

ಎಚ್.ಐ.ವಿ. ಬಾಧಿತರೇ ಧೂಮಪಾನ ಮಾಡಬೇಡಿ, ಜೀವತಾವಧಿ ಇನ್ನಷ್ಟೂ ಕ್ಷೀಣಿಸುತ್ತವೆ!

ಎಚ್.ಐ.ವಿ. ಬಾಧಿತರೇ ಧೂಮಪಾನ ಮಾಡಬೇಡಿ, ಜೀವತಾವಧಿ ಇನ್ನಷ್ಟೂ ಕ್ಷೀಣಿಸುತ್ತವೆ!
ಬೊಸ್ಟನ್ , ಶನಿವಾರ, 5 ನವೆಂಬರ್ 2016 (10:17 IST)
ಬೊಸ್ಟನ್: ಧೂಮಪಾನದಿಂದ ಹೃದಯ ಸಂಬಂಧಿತ ಕಾಯಿಲೆಗಳು ಬರುತ್ತವವೆ ಎನ್ನುವುದು ಹಳೆಯ ಮಾತಾಯಿತು. ಇತ್ತೀಚೆಗೆ ನಡೆದ ಸಂಶೋಧನೆಯೊಂದು ಅದರಿಂದ ವಂಶವಾಹಿನಿಯೇ ಬದಲಾಯಿಸುತ್ತದೆ ಎಂದು ತಿಳಿಸಿತ್ತು. ಇದರ ಬೆನ್ನಲ್ಲೇ ಈಗ ಎಚ್.ಐ.ವಿ. ಸೋಂಕಿತರು ಧೂಮಪಾನ ಮಾಡಿದರೆ ಅವರ ಜೀವತಾವಧಿ ಇನ್ನೂ ಕಡಿಮೆಯಾಗುತ್ತದೆ ಎನ್ನುವುದು ಸಂಶೋಧನೆಯಿಂದ ದೃಢಪಟ್ಟಿದೆ.
ಎಚ್.‌ಐ.ವಿ ವೈರಾಣು ದೇಹದ ಮೇಲೆ ಉಂಟುಮಾಡುವ ಪರಿಣಾಮಕ್ಕಿಂತ ಹೆಚ್ಚು ಕೆಟ್ಟ ಪರಿಣಾಮ ಎಚ್‌.ಐ.ವಿ ಪೀಡಿತರು ಧೂಮಪಾನ ಮಾಡುವುದರಿಂದ ಉಂಟಾಗುತ್ತದೆ. ಭಾರತೀಯ ಮೂಲದ ವೈದ್ಯರಾದ ಕೃಷ್ಣ ರೆಡ್ಡಿ ಸೇರಿದಂತೆ ಮ್ಯಾಸಚೋಸಟಸಸ್‌ ನ ಸರಕಾರಿ ಆಸ್ಪತ್ರೆಯ ವೈದ್ಯರು ಧೂಮಪಾನ ಎಚ್‌.ಐ.ವಿ ಪೀಡಿತರ ಮೇಲೆ ಹೇಗೆಲ್ಲ ಪರಿಣಾಗಳ ಬೀರುತ್ತದೆ ಎನ್ನುವ ಕುರಿತು ಸಂಶೋಧನೆ ನಡೆಸಿದ್ದರು. ಅದರಿಂದ ಸೋಂಕಿತರು ಧೂಮಪಾನ ಮಾಡುವುದರಿಂದ ಜೀವೀತಾವಧಿಯಲ್ಲಿ ಗಣನೀಯ ಇಳಿಕೆ ಆಗುತ್ತಿರುವುದು ಬೆಳಕಿಗೆ ಬಂದಿದೆ.
 
ಸಾಮಾನ್ಯ ಮನುಷ್ಯನೇ ಧೂಮಪಾನದಿಂದ ಸಾಕಷ್ಟು ಸಮಸ್ಯೆ ಅನುಭವಿಸುತ್ತಾನೆ. ಅದರಲ್ಲೂ ಎಚ್‌.ಐ.ವಿ ಪೀಡಿತರು ಧೂಮಪಾನ ಮಾಡುವುದು ಹೆಚ್ಚು ಅಪಾಯಕರವಾಗಿದೆ. ಅವರಲ್ಲಿ ಹೃದಯಾಘಾತ, ಕ್ಯಾನ್ಸರ್, ಶ್ವಾಸಕೋಶದ ತೊಂದರೆಗಳು ಮತ್ತು ಇನ್ನಿತರೆ ಸೋಂಕು ರೋಗಗಳು ಇನ್ಮಷ್ಟು ಹೆಚ್ಚಾಗುತ್ತದೆ. ಮತ್ತು ಬದುಕುವ ಸಾಧ್ಯತೆಗಳು ಕುಗ್ಗುತ್ತದೆ’ ಎಂದು ವೈದ್ಯ ಕೃಷ್ಣ ರೆಡ್ಡಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಟಾ ಪಟ್ ಚಿಕನ್ ಮಂಚೂರಿ