ಮೊಡವೆ ನಿವಾರಿಸಲು ಒಂದು ಸರಳ ಉಪಾಯ

Webdunia
ಶನಿವಾರ, 18 ಫೆಬ್ರವರಿ 2017 (05:37 IST)
ಬೆಂಗಳೂರು: ಹದಿ ಹರೆಯದ ಯುವತಿಯರಿಗೆ ಮೊಡವೆಯದ್ದೇ ದೊಡ್ಡ ಚಿಂತೆ. ಮುಖದ ಅಂದ ಹಾಳು ಮಾಡುವ ಮೊಡವೆ ನಿವಾರಿಸಲು ಹಲವು ಮನೆ ಮದ್ದುಗಳಿವೆ. ಅದರಲ್ಲೊಂದು ಅರಸಿನ ಪುಡಿ ಮತ್ತು ಜೇನು ತುಪ್ಪ ಬಳಸಿ ಮಾಡುವ ರೆಸಿಪಿ ಹೇಳುತ್ತೇವೆ ನೋಡಿ.

 
ಇದಕ್ಕೆ ಬೇಕಾಗಿರುವುದು ಒಂದು ಟೇಬಲ್ ಸ್ಪೂನ್ ಅರಸಿನ ಪುಡಿ ಮತ್ತು ಅದರ ಅರ್ಧದಷ್ಟು ಜೇನು ತುಪ್ಪ. ಜೇನು ತುಪ್ಪ ಮತ್ತು ಅರಸಿನ ಪುಡಿಯನ್ನು ಬೆರೆಸಿ ಚೆನ್ನಾಗಿ ಕದಡಿಕೊಳ್ಳಿ. ಇದು ದಪ್ಪ ಪೇಸ್ಟ್ ಆಗುವವರೆಗೆ ತಿರುವಿ. ನಂತರ ಇದನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ.

ಇದನ್ನು 10-15 ನಿಮಿಷ ಹಾಗೇ ಬಿಡಿ. ನಂತರ ಶುದ್ಧ ನೀರಿನಿಂದ ಮುಖ ತೊಳೆದುಕೊಳ್ಳಿ. ಹೀಗೇ ಮುಖದಿಂದ ಮೊಡವೆ ಸಂಪೂರ್ಣ ಮಾಸುವವರೆಗೂ ಪ್ರತಿ ನಿತ್ಯ ಮಾಡುತ್ತಿರಿ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಮೊಡವೆಗೆ ಮಾಡಬಹುದಾದ ಸುಲಭ ಉಪಾಯವಿದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ದೇಹದಲ್ಲಿ ನೀರಿನಂಶ ಹೆಚ್ಚಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಊಟ ಮಾಡುವಾಗ ಬಿಕ್ಕಳಿಕೆ ಬಂದ್ರೆ ಏನು ಮಾಡಬೇಕು

ಮುಂದಿನ ಸುದ್ದಿ
Show comments