Publish Date: Sat, 18 Feb 2017 (05:37 IST)
Updated Date: Sat, 18 Feb 2017 (05:59 IST)
ಬೆಂಗಳೂರು: ಹದಿ ಹರೆಯದ ಯುವತಿಯರಿಗೆ ಮೊಡವೆಯದ್ದೇ ದೊಡ್ಡ ಚಿಂತೆ. ಮುಖದ ಅಂದ ಹಾಳು ಮಾಡುವ ಮೊಡವೆ ನಿವಾರಿಸಲು ಹಲವು ಮನೆ ಮದ್ದುಗಳಿವೆ. ಅದರಲ್ಲೊಂದು ಅರಸಿನ ಪುಡಿ ಮತ್ತು ಜೇನು ತುಪ್ಪ ಬಳಸಿ ಮಾಡುವ ರೆಸಿಪಿ ಹೇಳುತ್ತೇವೆ ನೋಡಿ.
ಇದಕ್ಕೆ ಬೇಕಾಗಿರುವುದು ಒಂದು ಟೇಬಲ್ ಸ್ಪೂನ್ ಅರಸಿನ ಪುಡಿ ಮತ್ತು ಅದರ ಅರ್ಧದಷ್ಟು ಜೇನು ತುಪ್ಪ. ಜೇನು ತುಪ್ಪ ಮತ್ತು ಅರಸಿನ ಪುಡಿಯನ್ನು ಬೆರೆಸಿ ಚೆನ್ನಾಗಿ ಕದಡಿಕೊಳ್ಳಿ. ಇದು ದಪ್ಪ ಪೇಸ್ಟ್ ಆಗುವವರೆಗೆ ತಿರುವಿ. ನಂತರ ಇದನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ.
ಇದನ್ನು 10-15 ನಿಮಿಷ ಹಾಗೇ ಬಿಡಿ. ನಂತರ ಶುದ್ಧ ನೀರಿನಿಂದ ಮುಖ ತೊಳೆದುಕೊಳ್ಳಿ. ಹೀಗೇ ಮುಖದಿಂದ ಮೊಡವೆ ಸಂಪೂರ್ಣ ಮಾಸುವವರೆಗೂ ಪ್ರತಿ ನಿತ್ಯ ಮಾಡುತ್ತಿರಿ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಮೊಡವೆಗೆ ಮಾಡಬಹುದಾದ ಸುಲಭ ಉಪಾಯವಿದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ