Publish Date: Wed, 17 Jan 2018 (08:19 IST)
Updated Date: Wed, 17 Jan 2018 (08:20 IST)
ಬೆಂಗಳೂರು: ಕ್ಯಾಲ್ಶಿಯಂ ಅಂಶ ಕಡಿಮೆ ಎಂದು ಕ್ಯಾಲ್ಶಿಯಂ ಮಾತ್ರೆ ನಿಯಮಿತವಾಗಿ ತೆಗೆದುಕೊಳ್ಳುತ್ತೀರಾ? ಹಾಗಿದ್ದರೆ ಎಚ್ಚರ! ಕ್ಯಾಲ್ಶಿಯಂ ಅಂಶದ ಮಾತ್ರೆಗಳನ್ನು ಹೆಚ್ಚು ತೆಗೆದುಕೊಳ್ಳುವುದರಿಂದ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ!
ಮಾಂಸಖಂಡಗಳ ಸೆಳೆತ
ಕ್ಯಾಲ್ಶಿಯಂ ಔಷಧಗಳ ಸೇವನೆಯಿಂದ ಮಾಂಸಖಂಡಗಳ ಸೆಳೆತ ಉಂಟಾಗುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ ಅವುಗಳನ್ನು ತಕ್ಷಣ ನಿಲ್ಲಿಸುವುದು ಒಳ್ಳೆಯದು.
ಮಲಬದ್ಧತೆ
ಕ್ಯಾಲ್ಶಿಯಂ ಔಷಧವನ್ನು ಸೇವಿಸುವುದರಿಂದ ಮಲಬದ್ಧತೆ ಉಂಟಾಗಬಹುದು. ಕ್ಯಾಲ್ಶಿಯಂ ಔಷಧಗಳ ಅತಿಯಾದ ಬಳಕೆ ಹೊಟ್ಟೆಯಲ್ಲಿ ಕಿರಿ ಕಿರಿ, ಕೆಳಹೊಟ್ಟೆ ನೋವು ಮುಂತಾದ ಸಮಸ್ಯೆ ಬರಬಹುದು.
ಕಿಡ್ನಿ ಕಲ್ಲು
1000 ಎಂಜಿ ಅಥವಾ ಅದಕ್ಕಿಂತ ಅಧಿಕ ಪವರ್ ಇರುವ ಕ್ಯಾಲ್ಶಿಯಂ ಔಷಧ ಸೇವಿಸುವುದರಿಂದ ಕಿಡ್ನಿ ಕಲ್ಲು ಉಂಟಾಗುವ ಸಂಭವವಿರುತ್ತದೆ.
ಒತ್ತಡ
ಸೂಕ್ತ ವೈದ್ಯರ ಸಲಹೆಯಿಲ್ಲದೇ ಬೇಕಾಬಿಟ್ಟಿ ಕ್ಯಾಲ್ಶಿಯಂ ಔಷಧ ಸೇವಿಸುವುದರಿಂದ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಇದು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ