Select Your Language

Notifications

webdunia
webdunia
webdunia
webdunia

ಶ್… ! ಮಗು ಮಲಗಿದೆ.. ಸದ್ದು ಮಾಡಬೇಡಿ!

ಶ್… ! ಮಗು ಮಲಗಿದೆ.. ಸದ್ದು ಮಾಡಬೇಡಿ!
Bangalore , ಬುಧವಾರ, 1 ಫೆಬ್ರವರಿ 2017 (09:13 IST)
ಬೆಂಗಳೂರು: ಮನೆಗೊಂದು ಪುಟ್ಟ ಪಾಪು ಬಂದ ಮೇಲೆ ಅದನ್ನು ಎತ್ತಿ ಆಡಿಸೋದಕ್ಕೆ ಪೈಪೋಟಿ. ಅದರ ನಗು, ಅಳು ನೋಡಲು ಚೆಂದ. ಆದರೆ ನಿದ್ರೆ ಮಾಡಿದರೆ ಆಡಲು ಆಗೋದಿಲ್ವಲ್ಲಾ.. ಹಾಗಂತ ಮಗುವಿನ ನಿದ್ರೆಗೆ ಭಂಗ ತರಬೇಡಿ.

 
ಮಕ್ಕಳು ನಿದ್ರೆ ಮಾಡಿದಷ್ಟು ಒಳ್ಳೆಯದು. ಅದಕ್ಕೆ ಹಲವು ಕಾರಣಗಳಿವೆ. ನಾವು ಆಡುವುದಕ್ಕೆಂದು ಮಗುವಿನ ನಿದ್ರೆ ಹಾಳು ಮಾಡುವುದು ತಪ್ಪು. ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ನಿದ್ರೆ ಅತೀ ಅಗತ್ಯ. ನವಜಾತ ಶಿಶುವಿನ ಬೆಳವಣಿಗೆಯಾಗುವುದು ಅದರ ನಿದ್ರಾವಸ್ಥೆಯಲ್ಲೇ.

ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಆಡುವುದರಲ್ಲೇ ಕಾಲ ಕಳೆಯುತ್ತವೆ. ನಿದ್ರೆ ಬಂದರೂ ಮಲಗುವ ಮನಸ್ಸು ಮಾಡುವುದಿಲ್ಲ. ಹಾಗಂತ ಪೋಷಕರು ಅವರಷ್ಟಕ್ಕೇ ಬಿಡುವುದು ಒಳ್ಳೆಯದಲ್ಲ. ಸಾಕಷ್ಟು ನಿದ್ರೆಯಿಲ್ಲದ ಮಕ್ಕಳು ಏಕಾಗ್ರತೆ ಕೊರತೆಯಿಂದ ಬಳಲುವ ಸಾಧ್ಯತೆ ಇದೆ.

ನವಜಾತ ಶಿಶುವಿಗೆ ಒಂದು ದಿನದಲ್ಲಿ ಕನಿಷ್ಠ 14 ಗಂಟೆ ನಿದ್ರೆಯ ಅಗತ್ಯವಿದೆ. ದಿನ ಕಳೆದಂತೆ ಈ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ. 3 ರಿಂದ 5 ವರ್ಷದೊಳಗಿನ ಮಕ್ಕಳು ಕನಿಷ್ಠ 10 ಗಂಟೆ ನಿದ್ರೆ ಮಾಡಬೇಕು.  ಹಾಗಾಗಿ ನಿಮ್ಮ ಮಕ್ಕಳು ಸರಿಯಾಗಿ ನಿದ್ರೆ ಮಾಡುತ್ತಿಲ್ಲವಾದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವುದು ಅತೀ ಮುಖ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಗು ನಗುತಾ ನಲಿ ಏನೇ ಆಗಲಿ.. ನಗುವಿನಲ್ಲಿದೆ ಆರೋಗ್ಯದ ಗುಟ್ಟು