Select Your Language

Notifications

webdunia
webdunia
webdunia
webdunia

ಎಳ್ಳಿನ ಉಪಯೋಗ ಎಳ್ಳಿನಷ್ಟು ಮಾತ್ರವಲ್ಲ!

ಎಳ್ಳಿನ ಉಪಯೋಗ ಎಳ್ಳಿನಷ್ಟು ಮಾತ್ರವಲ್ಲ!
Bangalore , ಶನಿವಾರ, 31 ಡಿಸೆಂಬರ್ 2016 (08:31 IST)
ಬೆಂಗಳೂರು: ಹಳೇ ಕಾಲದಿಂದಲೂ ಎಳ್ಳನ್ನು ಹಲವು ಆರೋಗ್ಯ ಸಮಸ್ಯೆಗಳಿಗೆ ಬಳಕೆ ಮಾಡುತ್ತಾರೆ. ಇದು ಆರೋಗ್ಯಕ್ಕೆ ಉತ್ತಮವಾದ ಅಗ್ಗದ ವಸ್ತು. ಇದು ದೇಹಕ್ಕೆ ತಂಪು ನೀಡುವುದಲ್ಲದೆ, ಕಬ್ಬಿಣದಂಶ ಹೊಂದಿದೆ.


ಹೆಣ್ಣು ಮಕ್ಕಳಿಗಂತೂ ಇದು ಅತ್ಯುತ್ತಮ ಆಹಾರ. ಎಳ್ಳಿನಿಂದ ಮಾಡುವ ಬೆಲ್ಲದ ಉಂಡೆ ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ. ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವಿನ ಸಮಸ್ಯೆ ಇರುವವರು ಮುಟ್ಟಾಗುವ ಕೆಲವು ದಿನಗಳ ಮುಂಚಿತವಾಗಿ ದಿನಾ ಖಾಲಿ ಹೊಟ್ಟೆಯಲ್ಲಿ ಎಳ್ಳು ನೆನೆಸಿದ ನೀರು ಕುಡಿಯುವುದು ಉತ್ತಮ.

ಹೊಟ್ಟೆ ಉರಿ, ಅಸಿಡಿಟಿ ಸಮಸ್ಯೆ ಇರುವವರು, ಎಳ್ಳಿನ ಜ್ಯೂಸ್ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಇದಕ್ಕೆ ಮಧುಮೇಹ ನಿಯಂತ್ರಿಸುವ ಗುಣವೂ ಇದೆಯಂತೆ.  ಎಳ್ಳಿನಲ್ಲಿರುವ ಮ್ಯಾಗ್ನಿಷಿಯಂ ಅಂಶ ರಕ್ತದೊತ್ತಡವನ್ನು ನಿಯಂತ್ರಿಸುತ್ತದಂತೆ.

ಮಲ ಬದ್ಧತೆ ಅಥವಾ ಇನ್ನಿತರ ಬಹಿರ್ದೆಶೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಎಳ್ಳಿನ ನೀರು ಉತ್ತಮ ಔಷಧ. ಇದರಲ್ಲಿರುವ ನಾರಿನಂಶ, ಜೀರ್ಣಕ್ರಿಯೆಗೆ ಸಹಕಾರಿ. ಇನ್ನು ಚರ್ಮದ ಕಾಂತಿಗೆ, ಚರ್ಮ ಸುಕ್ಕುಗಟ್ಟುವುದಕ್ಕೆ ಹಾಗೂ ತಲೆಗೂದಲಿನ ಸಮಸ್ಯೆಗೂ ಎಳ್ಳು ಸುಲಭ ಮನೆ ಔಷಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಉರಿ ಮೂತ್ರವೇ? ಮೂತ್ರ ಸರಾಗವಾಗಲು ಮನೆ ಮದ್ದು ಏನೆಲ್ಲಾ ಇದೆ ಗೊತ್ತಾ?