Publish Date: Tue, 24 Sep 2019 (15:15 IST)
Updated Date: Tue, 24 Sep 2019 (15:18 IST)
ಪ್ರಶ್ನೆ: ನಾನು 28 ವರ್ಷದ ಮಹಿಳೆ. ನನ್ನ ಮದುವೆಯಾಗಿ ಒಂದೂವರೆ ವರ್ಷವಾಗಿದೆ. ನಾನು ನನ್ನ ಪತಿ ತುಂಬಾ ವಿರಳವಾಗಿ ಸಂಭೋಗ ನಡೆಸುತ್ತೇವೆ.
ನಾವು ಸಂಭೋಗದಲ್ಲಿ ತೊಡಗಿದ್ದಾಗಲೆಲ್ಲಾ ಅವರಿಗೆ ಆಗುವ ಮೊದಲು ನಾನು ಪರಾಕಾಷ್ಠೆ ಪಡೆಯುತ್ತೇನೆ. ತದನಂತರ ನನಗೆ ತುಂಬಾ ಸುಸ್ತಾಗುತ್ತದೆ, ಬೇಗ ಮುಗಿಸಬೇಕೆಂದುಕೊಳ್ಳುತ್ತೇನೆ. ಇದರಿಂದ ನನ್ನ ಪತಿಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲ. ನಾನು ಏನು ಮಾಡಬೇಕು?
ಉತ್ತರ: ಹೆಣ್ಣು ಮಕ್ಕಳು ಪ್ರತಿ ಹನ್ನೆರಡು ನಿಮಿಷಕ್ಕೊಮ್ಮೆ ಪರಾಕಾಷ್ಠೆಯನ್ನು ಅನುಭವಿಸುತ್ತಾರೆ. ಆದರೆ ಪುರುಷರು ಎರಡನೇ ಪರಾಕಾಷ್ಠೆಯನ್ನು ಆನಂದಿಸಲು ಸರಾಸರಿ ಅರ್ಧ ಗಂಟೆಯಿಂದ ಒಂದು ಗಂಟೆ ತೆಗೆದುಕೊಳ್ಳಬಹುದು.
ಆದ್ದರಿಂದ ನಿಮ್ಮ ದೇಹವನ್ನು ಮೊದಲು ಸ್ಪರ್ಶಿಸುವುದರ ಮೂಲಕ ನಿಮಗೆ ಪರಾಕಾಷ್ಠೆ ಹೊಂದಲು ನಿಮ್ಮ ಪತಿ ಸಹಾಯ ಮಾಡಬೇಕು. ನಂತರ ಸಂಭೋಗ ಪ್ರಾರಂಭಿಸಬಹುದು ಹಾಗೂ ನೀವಿಬ್ಬರೂ ತೃಪ್ತರಾಗುವವರೆಗೂ ಮುಂದುವರಿಸಬಹುದು.