Publish Date: Fri, 06 Jul 2018 (09:01 IST)
Updated Date: Fri, 06 Jul 2018 (09:03 IST)
ಬೆಂಗಳೂರು: ಗಂಡ ಹೆಂಡಿರ ನಡುವಿನ ಸುಮಧುರ ದಾಂಪತ್ಯಕ್ಕೆ ಲೈಂಗಿಕ ಜೀವನ ಪ್ರಮುಖ ರಹದಾರಿ. ಹಾಗಾದರೆ ಲೈಂಗಿಕತೆ ಎನ್ನುವುದು ಗಂಡ-ಹೆಂಡಿರ ಸಂಬಂಧವನ್ನು ಹೇಗೆ ಗಟ್ಟಿಗೊಳಿಸುತ್ತದೆ?
ಏನೋ ಒಂಥರಾ ಖುಷಿ
ಇಂದು ಲೈಂಗಿಕ ಸುಖ ಅನುಭವಿಸುತ್ತೇವೆ ಎನ್ನುವ ಭಾವನೆ ಇಬ್ಬರಲ್ಲೂ ಏನೋ ಒಂಥರಾ ಖುಷಿ ತುಂಬುತ್ತದೆ. ಇದರಿಂದ ಲವ ಲವಿಕೆಯಿಂದಿರಬಹುದು.
ಸಮಯ ಕಳೆಯಲು
ನಿಯಮಿತವಾಗಿ ಲೈಂಗಿಕ ಸುಖ ಪಡೆಯುವುದರಿಂದ ಇಬ್ಬರೂ ಹೆಚ್ಚು ಸಮಯ ಜತೆಗೇ ಕಳೆಯುತ್ತೀರಿ. ಇದರಿಂದ ಹೊಂದಾಣಿಕೆ ಹೆಚ್ಚುತ್ತದೆ.
ಸೌಂದರ್ಯ
ಕಾಮದಾಟಕ್ಕಾಗಿ ಸಂಗಾತಿಯನ್ನು ಆಹ್ವಾನಿಸುವ ಭರದಲ್ಲಿ ಒಬ್ಬರಿಗೊಬ್ಬರು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಹುಚ್ಚು ಬಯಕೆಯಿರುತ್ತದೆ. ಇದು ನಿಮ್ಮೊಳಗೆ ಚೈತನ್ಯ ತುಂಬುತ್ತದೆ.
ಒತ್ತಡ ಮರೆಯುವಿರಿ
ಸಹಜವಾಗಿ ಲೈಂಗಿಕತೆ ಎನ್ನುವುದು ನಿಮ್ಮ ಒತ್ತಡ, ಬ್ಯುಸಿ ಜೀವನದಿಂದ ಕೊಂಚ ಹೊತ್ತು ರೆಸ್ಟ್ ಮಾಡುವ ಸಮಯ. ನಿಯಮಿತವಾಗಿ ಸರಸವಾಡುವುದರಿಂದ ಒತ್ತಡ ಮರೆಯುವಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.