Select Your Language

Notifications

webdunia
webdunia
webdunia
webdunia

ಅಡ್ಡ ಪರಿಣಾಮಗಳಿಲ್ಲದ ನೋವು ನಿವಾರಕ ಪತ್ತೆ

ಅಡ್ಡ ಪರಿಣಾಮಗಳಿಲ್ಲದ ನೋವು ನಿವಾರಕ ಪತ್ತೆ
NewDelhi , ಶನಿವಾರ, 4 ಮಾರ್ಚ್ 2017 (10:32 IST)
ನವದೆಹಲಿ: ನೋವು ನಿವಾರಕ ತಿನ್ನುವುದರಿಂದ ಅಡ್ಡ ಪರಿಣಾಮಗಳಾಗುವ ಭಯವೇ? ಹಾಗಿದ್ದರೆ ಇನ್ನು ಚಿಂತೆ ಬೇಡ. ಅಡ್ಡ ಪರಿಣಾಮಗಳಿಲ್ಲದ ನೋವು ನಿವಾರಕ ಗುಳಿಗೆಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.


ಬರ್ಲಿನ್ ವಿವಿಯ ಸಂಶೋಧಕರು ಇಂತಹದ್ದೊಂದು ಔಷಧ ಕಂಡುಕೊಂಡಿದ್ದಾರೆ. ಸಂಶೋಧಕರು ಅಭಿವೃದ್ಧಿಪಡಿಸಿದ ಹೊಸ ಔಷಧಗಳನ್ನು ಸೇವಿಸಿದಾಗ ಆರೋಗ್ಯಕರ ಅಂಗಾಂಶಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಹೀಗಾಗಿ ಇದರಿಂದ ಯಾವುದೇ ಅಡ್ಡ ಪರಿಣಾಮಗಳಾಗಲ್ಲ ಎನ್ನುವ ತೀರ್ಮಾನಕ್ಕೆ ಸಂಶೋಧಕರು ಬಂದಿದ್ದಾರೆ.

ಸಾಮಾನ್ಯವಾಗಿ ನೋವು ನಿವಾರಕಗಳನ್ನು ಸೇವಿಸಿದಾಗ, ತಲೆ ಸುತ್ತು, ವಾಂತಿ, ಮಲಬದ್ಧತೆ, ಉಸಿರಾಟದ ತೊಂದರೆಯಂತಹ ಸಮಸ್ಯೆಗಳು ಬರುತ್ತವೆ. ಇದು ಆರೋಗ್ಯಕರ ಅಂಗಾಂಶಗಳ ಮೇಲೆ ಅಂತಹ ನೋವು ನಿವಾರಕಗಳು ಪರಿಣಾಮ ಬೀರುವುದರಿಂದ ಇಂತಹ ಅಡ್ಡ ಪರಿಣಾಮಗಳಾಗುತ್ತವೆ. ಸದ್ಯದಲ್ಲೇ ಇಂತಹ ಆರೋಗ್ಯಕರ ಔಷಧಗಳು ಮಾರುಕಟ್ಟೆಗೆ ಬರಲೂಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಣಾಕ್ಯನ 5 ನುಡಿಮುತ್ತುಗಳು