Select Your Language

Notifications

webdunia
webdunia
webdunia
webdunia

ಓಮಿಕ್ರಾನ್ ಆತಂಕ: ಯಾವ ರೀತಿಯ ಮಾಸ್ಕ್ಗಳು ಉತ್ತಮ

ಓಮಿಕ್ರಾನ್ ಆತಂಕ: ಯಾವ ರೀತಿಯ ಮಾಸ್ಕ್ಗಳು ಉತ್ತಮ
ಬೆಂಗಳೂರು , ಭಾನುವಾರ, 23 ಜನವರಿ 2022 (11:04 IST)
ಕಳೆದ ಕೆಲವು ದಿನಗಳಿಂದ ಕೊರೋನಾಗಿಂತ 10 ಪಟ್ಟು ವೇಗವಾಗಿ  ಹರಡುವ ಓಮಿಕ್ರಾನ್ ಆತಂಕ ಹೆಚ್ಚಿಸಿದೆ. ಹೀಗಾಗಿ  ಮಾಸ್ಕ್ಅನ್ನು ಸರಿಯಾದ ವಿಧಾನದಲ್ಲಿ ಧರಿಸುವುದು,

ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ  ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವ ಅಭ್ಯಾಸವನ್ನು ಮರೆಯುವಂತಿಲ್ಲ.

ಕೊರೋನಾ ಆರಂಭವಾದಾಗಿನಿಂದ ತಜ್ಞರು ನೀಡಿರುವ ಸಲಹೆ ಮಾಸ್ಕ್ ಧರಿಸಿವುದು. ಈ ಕಾರಣದಿಂದ ಅಂಗಡಿಗಳಲ್ಲಿ ಮಾಸ್ಕ್ಗೆ ಬೇಡಿಕೆ ಹೆಚ್ಚಿತ್ತು. ದರವೂ ದುಬಾರಿಯಾಗಿತ್ತು. ಹೀಗಾಗಿ  ಮನೆಗಳಲ್ಲೇ ಬಟ್ಟೆಯ ಮಾಸ್ಕ್ಅನ್ನು ತಯಾರಿಸಿ ಉಪಯೋಗಿಸುವ ಕ್ರಮ ಜಾರಿಗೆ ಬಂದಿತು.  ಆದರೆ ಈಗ ಓಮಿಕ್ರಾನ್ ಎಲ್ಲೆಡೆ ವೇಗವಾಗಿ ಹರಡುತ್ತಿದೆ.

ಬಟ್ಟೆಯ ಮಾಸ್ಕ್ ಯಾಕೆ ಬಳಸಬಾರದು?

ಕೊರೋನಾ ಅಥವಾ ಓಮಿಕ್ರಾನ್ ಸೋಂಕು ಉಸಿರು ಮತ್ತು ಮೂಗಿನ ದ್ರವದಿಂದ ಬರುತ್ತಿದೆ, ಹೀಗಾಗಿ ಮೂಗು ಮತ್ತು ಬಾಯಿಯನ್ನು ಸರಿಯಾದ ಕ್ರಮದಲ್ಲಿ ಮುಚ್ಚಿಕೊಳ್ಳುವುದು ಅಗತ್ಯವಾಗಿದೆ. ಬಟ್ಟೆಯ  ಮಾಸ್ಕ್ನಲ್ಲಿ ಒಂದೇ ಪದರವಿರುವ ಕಾರಣ  ಸೋಂಕು ಸುಲಭವಾಗಿ ಹರಡುತ್ತದೆ.

ಅಲ್ಲದೆ ಒಂದು ಬಾರಿ ಬಳಸಿದ ಬಟ್ಟೆಯ ಮಾಸ್ಕ್ಅನ್ನು ಬಿಸಿನೀರಿನಿಂದ ಶುದ್ಧಗೊಳಿಸಿದರೆ ಮಾತ್ರ ಉಪಯೋಗಕ್ಕೆ ಯೋಗ್ಯವಾಗಿರುತ್ತದೆ. ಒಂದೇ ಪದರದ ಬಟ್ಟೆಯ ಮಾಸ್ಕ್ ಹಾಕಿಕೊಂಡು ಸೀನಿದಾಗ ಅಥವಾ ಕೆಮ್ಮಿದಾಗ ಸುಲಭವಾಗಿ ಹನಿಗಳು ಎದುರಿಗುರುವವರಿಗೆ ತಗುಲುತ್ತದೆ. ಹೀಗಾಗಿ ಬಟ್ಟೆಯ ಮಾಸ್ಕ್ಗಳನ್ನು ಬಳಸುವುದನ್ನು ನಿಲ್ಲಿಸಿ ಎನ್ನುತ್ತಾರೆ ತಜ್ಞರು.

ಸುಲಭವಾಗಿ ಸ್ವಚ್ಛಗೊಳಿಸಿ, ಮರುಬಳಕೆ ಮಾಡಬಹುದಾದ ಮಾಸ್ಕ್ ಎಂದರೆ ಅದು ಬಟ್ಟೆಯ ಮಾಸ್ಕ್. ನೀವು ಒಂದು ಬಾರಿ ಬಳಸಿ ಸ್ವಚ್ಛಗೊಳಿಸಿ ಮತ್ತೆ ಬಳಸಬಹುದು, ನೀವು ಜನಜಂಗುಳಿಯೆಡೆಗೆ, ಧೂಳಿರುವ ಪ್ರದೇಶಗಳಿಗೆ ಹೋಗುವಾಗ ಪ್ರಾಥಮಿಕ ಹಂತದ ಮುನ್ನೆಚ್ಚರಿಕ ಕ್ರಮವಾಗಿ ಬಟ್ಟೆಯ ಮಾಸ್ಕ್ಅನ್ನು ಧರಿಸಿ. ಆದರೆ ನೆನಪಿಡಿ ಸೋಂಕಿನ ಲಕ್ಷಣಗಳು ಕಂಡುಬಂದರೆ ಬಟ್ಟೆಯ ಮಾಸ್ಕ್ ಅನ್ನು ನಿರ್ಬಂಧಿಸಿ.

ಸರ್ಜಿಕಲ್ ಮಾಸ್ಕ್

ಒಂದು ಬಾರಿ ಮಾತ್ರ ಬಳಸಲು ಯೋಗ್ಯವಾದ ಮಾಸ್ಕ್ ಎಂದರೆ ಸರ್ಜಿಕಲ್  ಮಾಸ್ಕ್. ಸರ್ಜಿಕಲ್ ಮಾಸ್ಕ್ ಅನ್ನು ಒಂದು ಬಾರಿ ತೊಳೆದರೆ ಅದರ ದಾರಗಳು ಸಡಿಲಗೊಂಡು ಬಳಕೆಗೆ ಯೋಗ್ಯವಾಗದ ರೀತಿಯಾಗುತ್ತದೆ. ಅಲ್ಲದೆ  ಸರ್ಜಕಲ್ ಮಾಸ್ಕ್ಗಳನ್ನು ಒಂದು ಬಾರಿ ನೀರಿಗೆ ಹಾಕಿದ ಮೇಲೆ ಅದರ ಪದರಗಳು ತೆಳ್ಳಗಾಗುತ್ತವೆ. ಇದರಿಂದ ಸೋಂಕು ಹರಡುವ ಅಪಾಯ ಹೆಚ್ಚಿರುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಯಾಮ : ಉತ್ತಮ ಆರೋಗ್ಯಕ್ಕಾಗಿ ಈ ಸರಳ ಮಾರ್ಗ