Select Your Language

Notifications

webdunia
webdunia
webdunia
webdunia

ವರ್ಷಧಾರೆಗೆ ಶೂಗಳ ರಕ್ಷಣೆ.. ವಿಡಿಯೋ

ವರ್ಷಧಾರೆಗೆ ಶೂಗಳ ರಕ್ಷಣೆ.. ವಿಡಿಯೋ
ಮುಂಬೈ , ಶನಿವಾರ, 2 ಜುಲೈ 2016 (10:45 IST)
ಮಳೆಗಾಲದಲ್ಲಿ ಶೂಗಳು ಒದ್ದೆಯಾಗುವುದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ. ಒದ್ದೆಯಾಗುವ ಶೂಗಳಿಂದ ನಾನಾ ರೀತಿಯ ಸಮಸ್ಯೆಗಳು ಕಾಡಬಹುದು. ಶೂಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಹಾಗೂ ಪಾದಗಳ ರಕ್ಷಣೆ ಆರೈಕೆ ಹೇಗೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.
 
 
ಕಾಲುಗಳಲ್ಲಿ ತುರಿಕೆ, ಚರ್ಮ ಕೆಂಪಗಾಗುವುದು,ಬೊಬ್ಬೆಗಳು ಏಳುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ನಿಮ್ಮ ಕಾಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಕಾಲಿನ ಬೆರಳುಗಳ ಮಧ್ಯೆ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. 
 
ಶೂ ಹಾಗೂ ಸಾಕ್ಸ್ ಅನ್ನು ನಿಯಮಿತವಾಗಿ ಬದಲಿಸಬೇಕು. ಶೂಗಳ ಮೇಲಿನ ಕೊಳಕು ತೆಗೆಯಲು ಮಾರ್ಜಕವನ್ನು (ಸಾಬೂನು) ಉಪಯೋಗಿಸಬೇಕು. ಅದರಿಂದ ನಿಮ್ಮ ಶೂಗಳ ಮೇಲೆ ಹರಡಿರುವ ಕಲೆಯನ್ನು ತೆಗೆದುಹಾಕಬಹುದು. 
 
ಮಡ್ಡಿ ಶೂ: ನಿಮ್ಮ ಶೂಗಳನ್ನು ಶುದ್ಧವಾಗಿಟ್ಟುಕೊಳ್ಳಲು ಲಾಂಡ್ರಿ ಅಥವಾ ಸ್ಪ್ರೈ ಸಿಂಪಡಿಸಬಹುದು. ನಿಮ್ಮ ಪಾದರಕ್ಷೆಗಳ ಕೊಳೆಯನ್ನು ತೆಗೆದು ಹಾಕಲು ಒದ್ದೆಯಾಗಿರುವಂತಹ ಬಟ್ಟೆಯಿಂದ ಶೂಗಳನ್ನು ಹಾಗೂ ಪಾದರಕ್ಷೆಗಳನ್ನು ಸ್ವಚ್ಛಗೊಳಿಸಿ. ಅಲ್ಲದೇ ಬಿಸಿಲು ವಾತಾವರಣದಲ್ಲಿ ನಿಮ್ಮ ಶೂಗಳು ಇಡದಂತೆ ನೋಡಿಕೊಳ್ಳಿ. 
 
ಲೆದರ್ ಶೂಗಳಿಗೆ ಎಂದಿಗೂ ನೀರನ್ನು ಉಪಯೋಗಿಸಬೇಡಿ. ಲೆದರ್ ಶೂಗಳಿಗೆ ಜಾಕೆಟ್ ಬಳಸುವುದು ಉತ್ತಮ.  ಇನ್ನೂ ಲೆದರ್ ಶೂಗಳನ್ನು ಶುದ್ಧವಾಗಿಟ್ಟುಕೊಳ್ಳಲು ದೀರ್ಘಕಾಲದವರೆಗೆ ಸಂರಕ್ಷಿಸಲು ಮಾರ್ಕೆಟ್‌ನಲ್ಲಿ ಕಂಡೀಷನರ್ ಸೀಗುತ್ತವೆ. ಕಂಡೀಷನರ್ ಅನ್ನು ಬಳಕೆ ಮಾಡಬಹುದು. ಇದರಿಂದ ಕೆಲ ದಿನಗಳಲ್ಲಿ ರಿಸಲ್ಟ್ ಪಡೆಯಬಹುದು. 
 
ಲೆದರ್ ಶೂಗಳು: ಲೆದರ್ ಶೂಗಳನ್ನು ನೀವೂ ನಿತ್ಯವು ಆಫೀಸ್‌ಗೆ ಶೂ ಬಳಸುತ್ತಿದ್ದರೆ ಮಳೆಗಾಲಲ್ಲಿ ನಿಮ್ಮ ಶೂಗಳು ಹಾಳಾಗೋದು ಗ್ಯಾರಂಟಿ. ಆದ್ದರಿಂದ ಮಾನ್ಸೂನ್‌ಗಾಗಿಯೋ ತಯಾರಾದ ಶೂಗಳು ಮಾರ್ಕೆಟ್‌ನಲ್ಲಿ ಲಭ್ಯ. ಈ ಶೂಗಳನ್ನು ತೇವವನ್ನು ತಡೆಯುತ್ತವೆ. 
 
ಆದ್ದರಿಂದ ಮಾನ್ಸೂನ್‌ಗೆ ಶೂಗಳ ರಕ್ಷಣೆ ಮಾಡಿ ಹ್ಯಾಪಿ ಆಗಿರಿ 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

 
 

Share this Story:

Follow Webdunia kannada

ಮುಂದಿನ ಸುದ್ದಿ

ತೂಕ ಇಳಿಸಿಕೊಳ್ಳುವುದು ಹೇಗೆ? ಈ ವಿಡಿಯೋ ನೋಡಿ