Select Your Language

Notifications

webdunia
webdunia
webdunia
webdunia

ಪುರುಷರ ಎದುರು ಪ್ರತಿಷ್ಟೆಗಾಗಿ ಮೇಕಪ್ ಮಾಡುವ ಹೆಣ್ಣುಮಕ್ಕಳು: ಅಧ್ಯಯನದಿಂದ ಬಹಿರಂಗ

ಪುರುಷರ ಎದುರು ಪ್ರತಿಷ್ಟೆಗಾಗಿ ಮೇಕಪ್ ಮಾಡುವ ಹೆಣ್ಣುಮಕ್ಕಳು: ಅಧ್ಯಯನದಿಂದ ಬಹಿರಂಗ
ಮುಂಬೈ , ಸೋಮವಾರ, 27 ಜೂನ್ 2016 (10:36 IST)
ಹೆಣ್ಣುಮಕ್ಕಳು ಮೇಕಪ್ ಮಾಡಿಕೊಳ್ಳುವುದು ಕಾಮನ್.. ಅಂದವಾಗಿ, ಚೆಂದವಾಗಿ ಕಾಣಲು ಹೆಣ್ಣುಮಕ್ಕಳು ಮೇಕಪ್ ಮಾಡಿಕೊಳ್ತಾರೆ. ಸೌಂದರ್ಯಕ್ಕಾಗಿ ಹೆಣ್ಣುಮಕ್ಕಳು ಮೇಕಪ್ ಮಾಡಿಕೊಳ್ಳುತ್ತಾರೆ ಎಂದು ಭಾವಿಸಲಾಗುತ್ತಿದ್ದು. ಆದ್ರೆ ಇವೆಲ್ಲ ಸುಳ್ಳು ಎನ್ನುತ್ತಿದೆ ಈ ವರದಿ. ನಿಜಕ್ಕೂ ಹೆಣ್ಣುಮಕ್ಕಳು ಮೇಕಪ್ ಯಾಕೆ ಮಾಡಿಕೊಳ್ತಾರೆ? ಅಂತ ಗೋತ್ತಿದೇಯಾ. ಮೇಕಪ್  ಹಿಂದೆ ಬಲವಾದ ಕಾರಣವಿದೆಯಂತೆ. ಹೀಗಂತ ಅಧ್ಯಯನ ವರದಿಯೊಂದು ಮಾಹಿತಿ ಹೊರಹಾಕಿದೆ. 
ಯೆಸ್, ಸೌಂದರ್ಯಕ್ಕಾಗಿ ಹೆಣ್ಣುಮಕ್ಕಳು ಮೇಕಪ್ ಮಾಡಿಕೊಳ್ಳುತ್ತಾರೆ ಎಂದು ಭಾವಿಸಲಾಗುತ್ತಿದ್ದು. ಆದ್ರೆ ಇವೆಲ್ಲ ಸುಳ್ಳು ಎನ್ನುತ್ತಿದೆ ಈ ವರದಿ. 
 
ಹೆಣ್ಣುಮಕ್ಕಳು ಮೇಕಪ್ ಮಾಡಿಕೊಳ್ಳುವುದು ಅವರಿಗೆ ಒಂದು ಪ್ರತಿಷ್ಟೆಯಂತೆ. ಗಂಡುಮಕ್ಕಳ ಎದುರು ಮೇಕಪ್ ಮಾಡಿಕೊಳ್ಳುವುದು ಅಂದ್ರೆ ಹೆಣ್ಣುಮಕ್ಕಳ ಒಂದು ಪ್ರತಿಷ್ಠೆಯ ವಿಷಯ ಎಂದು ಗಂಡುಮಕ್ಕಳು ಭಾವಿಸುತ್ತಾರೆ ಎಂದು ಅಧ್ಯಯನ ವರದಿಯಿಂದ ತಿಳಿದು ಬಂದಿದೆ. 
webdunia
ಮೊದಲ ಬಾರಿಗೆ ನಡೆಸಿದ ಅಧ್ಯಯನದಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳಲ್ಲಿ ಯಾರು ಹೆಚ್ಚು ಮೇಕಪ್ ಮಾಡಿಕೊಳ್ಳುವುದರ ಬಗ್ಗೆ ಅಧ್ಯಯನ ನಡೆಸಲಾಯ್ತು. ಅಲ್ಲದೇ ಹೆಣ್ಣುಮಕ್ಕಳ ಹೈ ಮೇಕಪ್ ಅವರ ಪ್ರತಿಷ್ಠೆಯನ್ನು ಹೆಚ್ಚಿಸಬಲ್ಲದು.. ಹಾಗೆಯೇ ಗಂಡಸರ ದೃಷ್ಟಿಯಲ್ಲಿ ಮೇಕಪ್ ಬದಲಾವಣೆಯನ್ನುಂಟು ಮಾಡಬಲ್ಲದಂತೆ. 
 
ಹೆಣ್ಣು ಹಾಗೂ ಗಂಡುಮಕ್ಕಳ ಮಧ್ಯೆ ನಡೆಸಲಾದ ಅಧ್ಯಯನದಲ್ಲಿ ತಿಳಿದು ಬಂದ ಅಂಶವೆಂದರೆ... ಮೇಕಪ್ ಮಾಡಿಕೊಳ್ಳುವ ವಿಷಯದಲ್ಲಿ ನಾರಿಯರು ಹೆಚ್ಚು ಆಕರ್ಷಣೆಯಾಗಿ ಕಾಣಿಸುತ್ತಾರಂತೆ. ಹೈ ಟೇಟಸ್ ಅಲ್ಲದೇ ಅವರವರ ದೃಷ್ಟಿಕೋನದ ಮೇಲೆ ಮೇಕಪ್ ಅವಲಂಬಿತವಾಗಿರುತ್ತದೆ ಎಂದು ಯುಕೆ ವಿಶ್ವವಿದ್ಯಾಲಯದ ಅಧ್ಯಯನದಿಂದ ತಿಳಿದು ಬಂದಿದೆ. 
 
ಅಲ್ಲದೇ ಹೈ ಸ್ಟೇಟಸ್‌ ಹೆಚ್ಚಿಸಿಕೊಳ್ಳುವುದರಿಂದ ಪ್ರೇಸ್ಟಿಸ್‌ನಲ್ಲೂ ಬದಲಾವಣೆ ಕಂಡು ಬರುತ್ತದೆ. ಹಾಗಾಗಿ ಜನರನ್ನು ಸೆಳೆಯಲು ಮುಖ್ಯವಾಗಿ ಪುರುಷರ ಎದುರು ತಮ್ಮ ಪ್ರಬಲತೆಯನ್ನು ತೋರ್ಪಡಿಸಿಕೊಳ್ಳಲು ಮಹಿಳೆಯರು ಮೇಕಪ್‌ಗೆ ಮೋರೆ ಹೋಗ್ತಾರೆ ಎನ್ನಲಾಗುತ್ತಿದೆ. 
 
ಅಲ್ಲದೇ ಒಬ್ಬ ಮಹಿಳೆ ಹೈ ಮೇಕಪ್ ಹಾಕಿಕೊಳ್ಳುವುದರಿಂದ ಅಂದವಾಗಿ ಕಾಣಿಸುವುದರಿಂದ ಮತ್ತೊಬ್ಬ ಮಹಿಳೆ ಆಕೆಯ ಮೇಲೆ ಹೊಟ್ಟೆಕಿಚ್ಚು ಪಡುತ್ತಾಳೆ ಎಂದು ಅಧ್ಯಯನ ವರದಿಯಿಂದ ತಿಳಿದು ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 


 
 

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ಉದುರುವುದನ್ನು ತಡೆಯಲು ಸರಳ ಉಪಾಯಗಳು