Select Your Language

Notifications

webdunia
webdunia
webdunia
webdunia

ಪುರುಷರೇ ಈ ಐದು ಆಹಾರಗಳು ಸೇವಿಸುವ ಮುನ್ನ ಒಮ್ಮೆ ಯೋಚಿಸಿ!

ಆಹಾರಗಳು ಯಾವುವು ಮತ್ತು ಏಕೆ ಇದನ್ನು ಸೇವಿಸಬಾರದು

ಪುರುಷರೇ ಈ ಐದು ಆಹಾರಗಳು ಸೇವಿಸುವ ಮುನ್ನ ಒಮ್ಮೆ ಯೋಚಿಸಿ!
Bangalore , ಭಾನುವಾರ, 11 ಜುಲೈ 2021 (10:49 IST)
ಪುರುಷರು ಈ ಆಹಾರ ಸೇವಿಸಿದರೆ, ಅವರ ವೀರ್ಯಾಣು ಸಂಖ್ಯೆ ಕುಂಠಿತವಾಗುವ ಸಾಧ್ಯತೆ ಅತಿ ಹೆಚ್ಚಿದೆ.



ಪುರುಷ ಮತ್ತು ಮಹಿಳೆಯರಿಗೆ ಆರೋಗ್ಯಕರವಾದ ಜೀವನ ನಡೆಸಲು ಆಹಾರದ ಆಯ್ಕೆ ಬಹುಮುಖ್ಯವಾಗಿದೆ. ಅದರಲ್ಲೂ ಪುರುಷರು ಕೆಲವೊಂದು ಆಹಾರಗಳನ್ನು ತ್ಯಜಿಸಬೇಕಾಗಿದ್ದು ನೀವು ಮಾಹಿತಿ ನೀಡಿದ್ದೇವೆ.
webdunia

ಸೋಯಾ ಉತ್ಪನ್ನಗಳು
ಸೋಯಾ ಉತ್ಪನ್ನಗಳಲ್ಲಿ ಫೈಟೋ ಈಸ್ಟ್ರೋಜನ್ಗಳಿವೆ. ಇವುಗಳಿಂದ ಮೂಲತಃ ಸಸ್ಯಗಳಿಂದ ಬರುವ ಸಂಯುಕ್ತಗಳಾಗಿದ್ದು ದೇಹದ ಹಾರ್ಮೋನ್ಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ ಎಂಬುದಾಗಿ ಇತ್ತೀಚಿನ ಅಧ್ಯಯನವು ತಿಳಿಸಿದೆ. ಇತ್ತೀಚೆಗೆ ಬೋಸ್ಟನ್ನಲ್ಲಿ 99 ಪುರುಷರ ಮೇಲೆ ನಡೆಸಿದ ಅಧ್ಯಯನದ ಪ್ರಕಾರ ಸೋಯಾ ಉತ್ಪನ್ನಗಳ ಅತಿಯಾದ ಸೇವನೆಯು ಪುರುಷರಲ್ಲಿ ವೀರ್ಯಾಣು ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ ಎಂಬ ವಿವರ ದೊರಕಿದೆ. ಇದಲ್ಲದೆ, ಸೊಸೈಟಿ ಫಾರ್ ಎಂಡೋಕ್ರೈನಾಲಜಿಯಲ್ಲಿ ಪ್ರಕಟವಾದ ಅಧ್ಯಯನವು ಸೋಯಾವನ್ನು ಹೆಚ್ಚು ಸೇವಿಸುವುದರಿಂದ ಟೆಸ್ಟೋಸ್ಟೆರಾನ್ ಮಟ್ಟಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.
ಫಾಸ್ಟ್ ಫುಡ್ಗಳು
webdunia



ಈ ಆಹಾರಗಳು ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಅನಾರೋಗ್ಯವನ್ನುಂಟು ಮಾಡಲಿದೆ. ಇವುಗಳಲ್ಲಿ ಕೊಬ್ಬಿನಂಶ ಅಧಿಕವಾಗಿದ್ದು ಅನಾರೋಗ್ಯಕ್ಕೆ ಕಾರಣವಾಗಬಹುದು. ವಿಜ್ಞಾನಿಗಳು ಹೇಳುವ ಪ್ರಕಾರ ಫಾಸ್ಟ್ ಫುಡ್ಗಳಿಂದ ಹೃದಯ ಸಂಬಂಧಿ ಕಾಯಿಲೆಗಳು ಸಂಭವಿಸಬಹುದು. ಅದೇ ರೀತಿ ಪುರುಷರಲ್ಲಿ ವೀರ್ಯಾಣುಗಳನ್ನು ಇಳಿಮುಖಗೊಳಿಸಬಹುದು ಎಂದಾಗಿದೆ.
ಸಂಸ್ಕರಿಸಿದ ಮಾಂಸಾಹಾರ
ಸಂಸ್ಕರಿಸಿದ ಮಾಂಸವು ಹಲವಾರು ರೀತಿಯ ಕಾಯಿಲೆಗಳನ್ನುಂಟು ಮಾಡುತ್ತದೆ ಎಂಬುದು ಅಚ್ಚರಿಯ ಸಂಗತಿಯಾದರೂ ಸತ್ಯವಾಗಿದೆ. ಹಾಟ್ ಡಾಗ್ಸ್, ಬೇಕನ್ ಸಲಾಮಿ ಇತ್ಯಾದಿಗಳನ್ನು ಈ ಮಾಂಸಾಹಾರಗಳು ಒಳಗೊಂಡಿವೆ. ಇನ್ನು ಹೆಚ್ಚಿನ ಅಧ್ಯಯನಗಳಿಂದ ತಿಳಿದು ಬಂದಿರುವ ಮಾಹಿತಿ ಎಂದರೆ ಅತಿಯಾದ ಮಾಂಸಾಹಾರವು ವೀರ್ಯಾಣುಗಳನ್ನು ಕುಂಠಿತಗೊಳಿಸಬಹುದು ಎಂದಾಗಿದೆ. ಕೋಳಿ ಮಾಂಸದ ಸೇವನೆಯಿಂದ ವೀರ್ಯಾಣುಗಳು ಇಳಿಮುಖಗೊಳ್ಳಬಹುದೇ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ.
ಕೀಟನಾಶಕಗಳು ಮತ್ತು ಬಿಸ್ಫೆನಾಲ್-ಎ (ಃPಂ)
ಇವುಗಳು ಆಹಾರ ಪದಾರ್ಥಗಳಲ್ಲದಿದ್ದರೂ ಕೀಟನಾಶಕಗಳನ್ನು ಸಿಂಪಡಿಸಿ ಬೆಳೆಯಲಾದ ಹಣ್ಣುಗಳು ಮತ್ತು ತರಕಾರಿಗಳಿಂದ ನಮ್ಮ ಆರೋಗ್ಯಕ್ಕೆ ಆಪತ್ತಿದೆ. ಇನ್ನು ತರಕಾರಿ ಹಣ್ಣುಗಳಿಗೆ ಸಿಂಪಡಿಸಲಾಗುವ ಕೀಟನಾಶಕಗಳು ನಾನ್-ಸ್ಟಿಕ್ ಕುಕ್ವೇರ್ನಲ್ಲಿ ಕೂಡ ಇರುತ್ತವೆ ಎಂಬುದು ನಿಮಗೆ ಗೊತ್ತೇ? ಇನ್ನು ಃPಂ ಹೆಚ್ಚಿನ ಫುಡ್ ಪ್ಯಾಕೇಜ್ ಮತ್ತು ಕ್ಯಾನ್ಗಳಲ್ಲಿ ಕಂಡುಬರುತ್ತವೆ. ಇವುಗಳು ಕೂಡ ವೀರ್ಯಾಣು ಅಭಿವೃದ್ಧಿಯನ್ನು ಕುಗ್ಗಿಸುತ್ತವೆ
ಹೆಚ್ಚಿನ ಕೊಬ್ಬಿರುವ ಹೈನು ಉತ್ಪನ್ನಗಳು
ಹೆಚ್ಚಿನ ಕೊಬ್ಬಿನಂಶಗಳನ್ನು ಹೊಂದಿರುವ ಹೈನು ಉತ್ಪನ್ನಗಳು ಕೂಡ ವೀರ್ಯಾಣುಗಳ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತವೆ ಮತ್ತು ಅನಾರೋಗ್ಯಕ್ಕೆ ಕಾರಣವಾಗಿವೆ. 18-22 ವರ್ಷಗಳ 189 ಪುರುಷರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಹೆಚ್ಚಿನ ಕೊಬ್ಬಿನಂಶಗಳಿರುವ ಹೈನು ಉತ್ಪನ್ನಗಳು ವೀರ್ಯಾಣುಗಳನ್ನು ಕುಂಠಿತಗೊಳಿಸುತ್ತವೆ ಎಂಬುದು ತಿಳಿದು ಬಂದಿದೆ. ಹೆಚ್ಚುವರಿ ಹಾಲಿನ ಉತ್ಪನ್ನಕ್ಕಾಗಿ ಹಸುಗಳಿಗೆ ನೀಡಲಾಗುವ ಸೆಕ್ಸ್ ಸ್ಟಿರಾಯ್ಡ್ಗಳಿಂದಾಗಿ ಹೈನು ಉತ್ಪನ್ನಗಳು ಅತ್ಯಧಿಕ ಕೊಬ್ಬಿನಂಶಗಳನ್ನು ಒಳಗೊಂಡಿರುತ್ತವೆ. ಇವುಗಳು ಪುರುಷರ ದೈಹಿಕ ಆರೋಗ್ಯವನ್ನು ನಾಶ ಮಾಡುತ್ತವೆ ಮತ್ತು ವೀರ್ಯಾಣುಗಳನ್ನು ಕುಂಠಿತಗೊಳಿಸಿ ಬಂಜೆತನಕ್ಕೆ ಕಾರಣವಾಗಬಹುದು


Share this Story:

Follow Webdunia kannada

ಮುಂದಿನ ಸುದ್ದಿ

ಪದೇ ಪದೇ ಮೈ ಕೈ ನೋವಿನಿಂದ ಬಳಲುತ್ತಿದ್ದೀರಾ?