Select Your Language

Notifications

webdunia
webdunia
webdunia
webdunia

ಸಂಕೋಚ ಪಟ್ಟರೆ ಸಂಕಷ್ಟ ಹೆಚ್ಚು: ಮಹಿಳೆಯರ ಆ ಅಂಗದಲ್ಲಿನ ಸಮಸ್ಯೆ ಹಾಗೂ ಪರಿಹಾರ

ಸಂಕೋಚ ಪಟ್ಟರೆ ಸಂಕಷ್ಟ ಹೆಚ್ಚು: ಮಹಿಳೆಯರ ಆ ಅಂಗದಲ್ಲಿನ ಸಮಸ್ಯೆ ಹಾಗೂ ಪರಿಹಾರ
ಬೆಂಗಳೂರು , ಭಾನುವಾರ, 23 ಜುಲೈ 2017 (12:36 IST)
ಮಹಿಳೆಯರ ದೇಹದಲ್ಲಿ ಅತೀ ಸೂಕ್ಷ್ಮವಾದ ಹಾಗೂ ಪ್ರಮುಖವಾದ ಭಾಗ ಜನನಾಂಗ. ಈ ಅಂಗದ ಆರೋಗ್ಯವು ಮಹಿಳೆಯರ ಆರೋಗ್ಯದಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತದೆ.  ಜನಾಂಗದ ಆರೋಗ್ಯದ ಬಗ್ಗೆ ಮಹಿಳೆಯರು ಹೆಚ್ಚು ಕಾಳಜಿಯಿಂದಿರುವುದು ಅಗತ್ಯ. ಅದೆಷ್ಟೊ ಮಹಿಳೆಯರು ನಾಚಿಕೆಯಿಂದ- ಸಂಕೋಚಕ್ಕೊಳಗಾಗಿ ಇಂತಹ ಜಾಗದಲ್ಲಿನ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳದೇ ಅಥವಾ ಸ್ತ್ರೀ ರೋಗ ತಜ್ನರನ್ನು ಕಾಣದೇ ಸಂಕಷ್ಟಪಡುತ್ತಿರುತ್ತಾರೆ. ಜನನಾಂಗದಲ್ಲಿ ಬ್ಯಾಕ್ಟೀರಿ, ಸೋಂಕುಗಳಿಗೆ ತುತ್ತಾದದಲ್ಲಿ ಸಂಕೋಚ ಪದದೇ ಸ್ತ್ರೀ ರೋಗ ತಜ್ನರಿಂದ ಸಲಹೆ, ಪರಿಹಾರ ಪಡೆಯುವುದು ಅತ್ಯವಶ್ಯಕ.

ಮೂತ್ರ ಮಾಡುವಾಗ ಉರಿ, ತುರಿಕೆ, ನೋವು:
 
ಇದು ಉರಿ ಮೂತ್ರ ಅಥವಾ ಯುರಿನರಿ ಟ್ರಾಕ್ ಇನ್ ಫೆಕ್ಷನ್. ಇದು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾದರೂ ಈ ಬಗ್ಗೆ ಹೆಚ್ಚು ಎಚ್ಚರ ವಹಿಸುವ ಅಗತ್ಯವಿದೆ. ಕಡಿಮೆ ನೀರು ಸೇವನೆ, ಹೆಚ್ಚು ಖಾರದ ಪದಾರ್ಥಗಳ ಸೇವನೆ, ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಹೀಗೆ ನಾನಾ ಕಾರಣಗಳಿಂದ ಮಹಿಳೆಯರಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
 
ಈ ಸಮಸ್ಯೆಗೆ ಮನೆಯಲ್ಲೇ ಮಾಡುವ ಔಷಧಿ ಎಂದರೆ 
* ದಿನಕ್ಕೆ 3-4 ಲೀಟರ್ ನೀರು ಸೇವಿಸುವುದು, 
* ಒಂದು ವಾರ ಪ್ರತಿದಿನ ಎಳ ನೀರು ಸೇವನೆ. 
* ಹಣ್ಣಿನ ಜ್ಯೂಸ್ ಹಾಗೂ ಹೆಚ್ಚು ಲಿಕ್ವಿಡ್ ಪದಾರ್ಥಗಳ ಸೇವನೆ
* ಖಾರದ, ಖಾರಿದ ಪದಾರ್ಥಗಳಿಂದ ದೂರವಿರುವುದು.  
*ಉಗುರು ಬೆಚ್ಚಗಿನ ನೀರಿನಿಂದ ಆ ಭಾಗವನ್ನು ತೊಳೆದು ಸ್ವಚ್ಛವಾಗಿಟ್ಟುಕೊಳ್ಳುವುದು. 
*ನಿಮ್ಮ ಶೌಚಾಲಯವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಹಾಗೂ ಬಹಳ ಸಾರ್ವಜನಿಕ ಶೌಚಾಲಯ ಅಥವ ಹೆಚ್ಚು ಜನರು ಉಪಯೋಗಿಸುವ ಶೌಚಾಲಯವನ್ನು ಉಪಯೋಗಿಸದೇ ಇರುವುದು.
 
ಜನನಾಂಗದಲ್ಲಿ ಅಸಹನೀಯ ತುರಿಕೆ :
 
ಇದು ಯೋನಿ ಸೊಂಕಿನಿಂದ (ವೆಜೆನೈಟಿಸ್) ಉಂಟಾಗುವ ಸಾಧ್ಯತೆಗಳಿವೆ. ಇದಕ್ಕೆ ಕಾರಣವಾದ ಸೂಕ್ಷ್ಮಾಣುಜೀವಿಗಳು ಟೈಕೋಮೊನಾಸ್ ಅಥವಾ ಕ್ಯಾಂಡಿಡಾ ಕ್ರಿಮಿ ಅಥವಾ ಗಾರ್ಡಿನೆಲಾ ಹಾಗೂ ಇನ್ನಿತರ ಬ್ಯಾಕ್ಟೀರಿಯಾಗಳಿರಬಹುದು. ಇಂತಹ ಸಮಸ್ಯೆಗಳು ಕಂಡುಬಂದಲ್ಲಿ ಮೊದಲು ವೈದ್ಯರ ಬಳಿ ಸಲಹೆ ಪಡೆಯುವುದು ಅಗತ್ಯ.
 
* ಯೋನಿ ಭಾಗದಲ್ಲಿ ತೇವಾಂಶವಿರದ ಹಾಗೆ ನೋಡಿಕೊಳ್ಳಿ. 
* ಆ ಭಾಗದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ
 
ಯೋನಿಯ ದುರ್ವಾಸನೆ:
 
ಸ್ತ್ರೀಯರಲ್ಲಿ ಕ೦ಡುಬರುವ ಒ೦ದು ಸಾಮಾನ್ಯವಾದ ಸಮಸ್ಯೆ. ಮೂತ್ರನಾಳ ಅಥವಾ ಯೋನಿಯಿ೦ದ ಉ೦ಟಾಗುವ ಉರಿಯುಕ್ತ ಸ್ರಾವ, ಅತಿಯಾಗಿ ಸಿಹಿ ಪದಾರ್ಥಗಳ ಸೇವನೆ. ಯೋನಿಯ ಬಿಳಿಸ್ರಾವ ಅಥವಾ ಸೂಕ್ಷ್ಮಾಣು ಜೀವಿಯಿ೦ದಾದ ಯೋನಿಯ ಸೋ೦ಕು ಗಳಿಂದಲೂ ಈ ಸಮಸ್ಯೆ ಉಂಟಾಗುತ್ತದೆ.
 
* ಶುಚಿತ್ವದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ.
* ಸುಗಂಧಯುಕ್ತ ಅಥವಾ ಬಿರುಸಾದ ಸಾಬೂನುಗಳ ಉಪಯೋಗದಿಂದ ದೂರವಿರಿ.
* ಬಿಗಿಯಾದ ಒಳೌಡುಪಿನ ಬದಲು ಸಡಿಲವಾದ ಒಳ ಉಡುಪು ಧರಿಸಿ
* ಅತಿ ಹೆಚ್ಚು ನೀರನ್ನು ಕುಡಿಯುವುದು ಒ೦ದು ಅತ್ಯುತ್ತಮ ಉಪಾಯ
* ಮೊಸರಿನ ಸೇವನೆ. ಇದು ಯೋನಿಯ ದುರ್ವಾಸನೆಯನ್ನು ನಿಯ೦ತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ.
* ಟೀ ಟ್ರೀ ಎಣ್ಣೆ. ಇದು ಯೋನಿಯ ದುರ್ವಾಸನೆಯನ್ನು ನಿಲ್ಲಿಸಲು ಅತ್ಯುತ್ತಮವಾದ ಫ೦ಗಸ್ ಪ್ರತಿಬ೦ಧಕ ಹಾಗೂ ಸೂಕ್ಷ್ಮಾಣು ಪ್ರತಿಬ೦ಧಕವಾಗಿದ್ದು, ಒ೦ದು ಆಯುರ್ವೇದೀಯ ಪರಿಹಾರ. ಸುಮಾರು 2 ಚಮಚಗಳಷ್ಟು ಎಣ್ಣೆಗೆ ಸ್ವಲ್ಪ ನೀರನ್ನು ಬೆರೆಸಿ ತೆಳುಗೊಳಿಸಿರಿ. ಈ ದ್ರಾವಣದಲ್ಲಿ ಹತ್ತಿಯನ್ನು ಅದ್ದಿ ತೆಗೆದು, ನ೦ತರ ಅದನ್ನು ನಿಮ್ಮ ಯೋನಿಯೊಳಗೆ ಕೆಲ ಕ್ಷಣಗಳ ಕಾಲ ಇರಗೊಳಿಸಿರಿ. ನೀವು ಸ್ನಾನಕ್ಕೆ ತೆರಳುವ ಒ೦ದು ಘ೦ಟೆ ಮೊದಲು ಹೀಗೆ ಮಾಡುವುದರಿಂದ ದುರ್ವಾಸನೆ ನಿವಾರಣೆಯಾಗುತ್ತದೆ. ಈ ಪ್ರಕ್ರಿಯೆಯನ್ನು ಪ್ರತಿದಿನ ಒ೦ದು ವಾರದ ಕಾಲ ಮು೦ದುವರಿಸಿರಿ. 
 

Share this Story:

Follow Webdunia kannada

ಮುಂದಿನ ಸುದ್ದಿ

ನಿಂತುಕೊಂಡು ನೀರು ಕುಡಿಯುವುದೂ ತಪ್ಪೇ?!