Select Your Language

Notifications

webdunia
webdunia
webdunia
webdunia

ಬೆತ್ತಲೆ ಮಲಗುವುದರಿಂದ ಇವೆ ಹಲವು ಅದ್ವುತ ಪರಿಣಾಮಗಳು

ಬೆತ್ತಲೆ ಮಲಗುವುದರಿಂದ ಇವೆ ಹಲವು ಅದ್ವುತ ಪರಿಣಾಮಗಳು
ಬೆಂಗಳೂರು , ಮಂಗಳವಾರ, 25 ಏಪ್ರಿಲ್ 2017 (13:09 IST)
ಬೆತ್ತಲೆ ಮಲಗಿ.. ಯಾರ ಬಳಿಯಾದರೀ ಹೀಗೆ ಹೇಳಿದರೆ ನಿಮ್ಮ ಕಡೆ ನೋಡಿ ಮೂಗು ಮುರಿಯುತ್ತಾರೆ. ಆದರೆ, ಈ ಬೆತ್ತಲೆ ಮಲಗುವುದರಿಂದ ಹಲವು ಆರೋಗ್ಯದ ಅನುಕೂಲತೆಗಳಿವೆ ಅಂತಾರೆ ಸಂಶೋಧಕರು. ತನು-ಮನಕ್ಕೆ ಹಿತಕರವಾದ ನುಭವ ನೀಡುತ್ತಂತೆ. ಹಾಗಾದರೆ, ಬೆತ್ತಲೆ ಮಲಗುವುದರಿಂದ ಏನೇನು ಅನುಕೂಲವಿದೆ ನೋಡೋಣ
 

1. ವಯಸ್ಸಾಗುವುದನ್ನ ನಿಧಾನಗೊಳಿಸುತ್ತದೆ: ಬೆತ್ತಲೆ ,ಲಗುವುದರಿಂದ ದೇಹದಲ್ಲಿ ಆಂಟಿ ಏಜಿಂಗ್ ಹಾರ್ಮೋನ್ ಉತ್ಪಾದನೆಯಾಗುವುದರಿಂದ ವಯಸ್ಸಾಗುವ ಪ್ರಕ್ರಿಯೆಯನ್ನ ನಿಧಾನಗೊಳಿಸುತ್ತದೆಯಂತೆ. ಕೂದಲು ಮತ್ತು ಚರ್ಮದ ಆರೋಗ್ಯ ಸುಧಾರಿಸುತ್ತದೆಯಂತೆ. ಬೆತ್ತಲೆ ಮಲಗುವಾಗ ಕೊಠಡಿಯ ಶಾಖ ಹೆಚ್ಚಾಗಿ ಇರದಂತೆ ನೋಡಿಕೊಳ್ಳಬೇಕು.

2. ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ: ಬೆತ್ತಲೆ ಮಲಗುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆಯಂತೆ. ಜೊತೆಗೆ ರಕ್ತದೊತ್ತಡವೂ ಕಡಿಮೆ ಆಗುತ್ತಂತೆ. ದೇಹದ ಕೊಬ್ಬಿನಾಂಶದ ಮಟ್ಟದ ಮೇಲೂ ಪರಿಣಾಮ ಬಿರುತ್ತಂತೆ. ಹೃದಯ ಸಂಬಂಧಿ ತೊಂದರೆಗಳು ಕಡಿಮೆಯಾಗುತ್ತಂತೆ. ಸಂಗಾತಿ ಜೊತೆ ಮಲಗುವುದರಿಂದ ಲವ್ ಹಾರ್ಮೋನ್ `ಆಕ್ಸಿ ಟಾಕ್ಸಿನ್’ ಉತ್ಪತ್ತಿಯಾಗಿ ಸಂಬಂಧ ಉತ್ತಮಗೊಳ್ಳುತ್ತದೆ.

3. ಗಾಢ ನಿದ್ರೆ: ಹಲವು ಬಾರಿ ನೀವು ಹಾಕಿರುವ ಬಟ್ಟೆಯೇ ನಿದ್ದೆಗೆ ತೊಡಕಾಗುತ್ತೆ. ಇದು ನಿಮಗೆ ಇರುಸುಮುರುಸು ಉಂಟು ಮಾಡುತ್ತದೆ. ಇದರಿಂದ ನಿಮ್ಮದೇಹಕ್ಕೆ ಬೇಕಾದ ಸೂಕ್ತ ಶಾಕ ಸಿಗುವುದಿಲ್ಲ. ಬೆತ್ತಲೆ ನಿದ್ದೆಯಿಂದ ಈ ತೊಡಕುಗಳು ನಿವಾರಣೆಯಾಗಿ ಗಾಢನಿದ್ರೆಗೆ ಅನುಕೂಲವಾಗುತ್ತೆ.

4. ರೋಗ ನಿರೋಧಕ ಶಕ್ತಿ ವೃದ್ಧಿ: ಆಕ್ಸಿ ಟಾಕ್ಸಿನ್ ಹಾರ್ಮೋನ್ ಉತ್ಪಾದನೆಯಾಗುವುದರಿಂದ ನಿಮ್ಮ ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಬರುತ್ತೆ.

5. ಮರ್ಮಾಂಗ ರಕ್ಷಣೆ: ಬೆತ್ತಲೆ ಮಲಗುವುದರಿಂದ ಮಹಿಳೆಯರ ಮರ್ಮಾಂಗದಲ್ಲಿ ಬೆವರುವಿಕೆ ಕಡಿಮೆಯಾಗಿ ಒಣಗುತ್ತದೆ. ಇದರಿಂದ  ಬ್ಯಾಕ್ಟೀರಿಯಾ ಉತ್ಪಾದನೆ ತಗ್ಗುತ್ತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಊಟದ ಬಳಿಕ ನಿದ್ರೆ ಬರುವುದು ಯಾಕೆ?