ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

Krishnaveni K
ಬುಧವಾರ, 1 ಮೇ 2024 (10:42 IST)
WD
ಬೆಂಗಳೂರು: ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚು. ಆದರೆ ತಂಪಾಗಲೆಂದು ಇದನ್ನು ಫ್ರಿಡ್ಜ್ ನಲ್ಲಿಟ್ಟು ತಿನ್ನುತ್ತಿದ್ದೀರಾ? ಹಾಗಿದ್ದರೆ ಇದನ್ನು ತಪ್ಪದೇ ಓದಿ.

ಬೇಸಿಗೆಯ ದಾಹ ತೀರಲು ಕಲ್ಲಂಗಡಿ ಹಣ್ಣನ್ನು ಸೇವಿಸಲು ಎಲ್ಲರೂ ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲೂ ಕಲ್ಲಂಗಡಿ ಹಣ್ಣು ಈ ಸೀಸನ್ ನಲ್ಲಿ ಸಾಕಷ್ಟು ಲಭ್ಯವಿರುತ್ತದೆ. ಪ್ರತಿನಿತ್ಯ ಒಂದು ಕಲ್ಲಂಗಡಿ ಹಣ್ಣನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದಲೂ ಉತ್ತಮ.

ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ 2, ಆಂಟಿ ಆಕ್ಸಿಡೆಂಟ್ ಅಂಶ, ವಿಟಮಿನ್ ಸಿ, ಪೊಟ್ಯಾಶಿಯಂ ಅಂಶ ಹೇರಳವಾಗಿದೆ. ಇದನ್ನು  ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಉಪಯೋಗಗಳಿವೆ. ಆದರೆ ಅದನ್ನು ಫ್ರಿಡ್ಜ್ ನಲ್ಲಿರಿಸಿ ತಿನ್ನಬಾರದು ಎಂದು ಅಧ್ಯಯನಕಾರರೇ ಹೇಳುತ್ತಾರೆ.

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿರಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತದೆ. ಅದರಲ್ಲೂ ಕಟ್ ಮಾಡಿ ಫ್ರಿಡ್ಜ್ ನಲ್ಲಿಟ್ಟರೆ ಅದರ ಪೋಷಕಾಂಶ ನಷ್ಟವಾಗುತ್ತದೆ. ಅದರ ಬದಲು ಕೊಠಡಿ ಉಷ್ಣತೆಯಲ್ಲಿ ಸಂಗ್ರಹ ಮಾಡಿಡುವುದರಿಂದ ಅದರ ಪೂರ್ಣ ಪೋಷಕಾಂಶ ಲಾಭಗಳು ನಮಗೆ ಸಿಗುತ್ತದೆ. ಅಲ್ಲದೆ, ತುಂಬಾ ಸಮಯದವರೆಗೆ ಕಟ್ ಮಾಡಿ ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಡುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳವಣಿಗೆಯಾಗುತ್ತದೆ. ಒಂದು ವೇಳೆ ನಿಮಗೆ ತಂಪಾಗಿ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕೆಂದಿದ್ದರೆ ಅದನ್ನು ಪೇಸ್ಟ್ ಮಾಡಿ ಜ್ಯೂಸ್ ಮಾಡಿಕೊಂಡು ಫ್ರಿಡ್ಜ್ ನಲ್ಲಿಟ್ಟು ಸೇವಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಹಬ್ಬದ ಋತುವಿನಲ್ಲಿ ತೂಕ ಹೆಚ್ಚಾಗದಂತೆ ಕಾಪಾಡಿಕೊಳ್ಳಲು ಆಹಾರ ಕ್ರಮ ಹೀಗೇ ಅನುಸರಿಸಿ

ಕಾಲಿಫ್ಲವರ್ ನಿಂದ ಹುಳವೆಲ್ಲಾ ತೆಗೆದು ಕ್ಲೀನ್ ಮಾಡಲು ಇದು ಬೆಸ್ಟ್ ಉಪಾಯ

ಗ್ರಾಸ್ಟ್ರಿಕ್ ಸಮಸ್ಯೆಗೆ ಅಯುಷ್ಯ ಮಂಡಲಂನ ಅನುಷ್ಕಾರ ಈ ವಿಧಾನ ಅನುಸರಿಸಿ

ಮುಂದಿನ ಸುದ್ದಿ
Show comments