Select Your Language

Notifications

webdunia
webdunia
webdunia
webdunia

ಪಪ್ಪಾಯ ಎಲೆ ತಿಂದರೆ ಏನಾಗುತ್ತದೆ ಗೊತ್ತಾ?!

ಪಪ್ಪಾಯ ಎಲೆ ತಿಂದರೆ ಏನಾಗುತ್ತದೆ ಗೊತ್ತಾ?!
Bangalore , ಶನಿವಾರ, 25 ಮಾರ್ಚ್ 2017 (14:41 IST)
ಬೆಂಗಳೂರು: ಪಪ್ಪಾಯ ಹಣ್ಣು ಇಷ್ಟಪಟ್ಟು ತಿನ್ನುತ್ತೇವೆ. ಅದೇ ರೀತಿ ಇದರ ಎಲೆಯಲ್ಲಿ ಆರೋಗ್ಯದ ನಿಧಿಯೇ ಇದೆ. ಡೆಂಗ್ಯೂ ಜ್ವರದಿಂದ ರಕ್ತ ಕಣಗಳು ಕಡಿಮೆಯಾದರೆ, ಇದರ ಎಲೆಯನ್ನು ಜ್ಯೂಸ್ ಮಾಡಿ ಕುಡಿಯಲು ವೈದ್ಯರು ಸಲಹೆ ಮಾಡುತ್ತಾರೆ.

 

ಇದಲ್ಲದೆ ಪಪ್ಪಾಯ ಎಲೆಯಲ್ಲಿ ಇನ್ನೂ ಹಲವು ಆರೋಗ್ಯಕರ ಗುಣಗಳಿವೆ. ಮಲೇರಿಯಾ ಜ್ವರ ಪೀಡಿತರೂ ಇದರ ರಸ ಕುಡಿದರೆ ಉತ್ತಮ. ಇದಲ್ಲದೆ, ಪಿತ್ತಕೋಶಕ್ಕೆ ಬರುವಂತಹ ಹಳದಿ ರೋಗ, ಲಿವರ್ ಸಿರೋಸಿಸ್ ನಂತಹ ರೋಗಗಳು ಬಾರದಂತೆ ತಡೆಯಲು ಇದರ ರಸ ಕುಡಿಯಬೇಕು.

 
ನಿಮಗೆ ಗೊತ್ತಾ? ಪಪ್ಪಾಯ ಎಲೆಯ ರಸ ನಮ್ಮ ಹೊಟ್ಟೆಯನ್ನು ಶುಚಿಗೊಳಿಸುವುದಲ್ಲದೆ, ಹೊಟ್ಟೆ ಹುಣ್ಣಿನಂತಹ ಸಮಸ್ಯೆಯನ್ನು ಗುಣಪಡಿಸುತ್ತದೆ. ಇದು ಕಹಿ ಗುಣವನ್ನು ಹೊಂದಿದ್ದು, ಮಧುಮೇಹಿಗಳಿಗೂ ಇದರ ರಸ ಸೇವನೆ ಉತ್ತಮ.

 
ಋತುಸ್ರಾವದ ದಿನಗಳಲ್ಲಿ ಹೊಟ್ಟೆ ನೋವಿನಿಂದ ಬಳಲುವವರು, ಪಪ್ಪಾಯ ರಸಕ್ಕೆ ಸ್ವಲ್ಪ ಉಪ್ಪು, ಹುಳಿ ಮತ್ತು ಅರಸಿನ ಸೇರಿಸಿ ಕುದಿಸಿ ಕುಡಿದರೆ ನೋವು ಕಡಿಮೆಯಾಗುತ್ತದೆ. ಇದಲ್ಲದೆ, ಚರ್ಮ, ಕೂದಲುಗಳ ಬೆಳವಣಿಗೆಗೂ ಸಹಕರಿಸುವ ಗುಣ ಹೊಂದಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಊಟವಾದ ತಕ್ಷಣ ನೀರು ಕುಡಿಯಬಾರದು ಯಾಕೆ ಗೊತ್ತಾ?