Select Your Language

Notifications

webdunia
webdunia
webdunia
webdunia

ಕೊರೋನಾ ಗೌಜಿಯ ನಡುವೆ ಸಾಮಾನ್ಯ ಜ್ವರವನ್ನು ಮರೆಯಬೇಡಿ!

ಕೊರೋನಾ ಗೌಜಿಯ ನಡುವೆ ಸಾಮಾನ್ಯ ಜ್ವರವನ್ನು ಮರೆಯಬೇಡಿ!
ಬೆಂಗಳೂರು , ಶನಿವಾರ, 6 ಜೂನ್ 2020 (08:52 IST)
ಬೆಂಗಳೂರು: ಇನ್ನೇನು ಮಳೆಗಾಲ ಬಂತು. ಸಾಮಾನ್ಯ ಶೀತ, ಜ್ವರ ಎಲ್ಲಾ ಬರುವುದು ಕಾಮನ್. ಆದರೆ ಕೊರೋನಾ ಗದ್ದಲದ ನಡುವೆ ನಾವೀಗ ಬೇರೆ ರೋಗಗಳನ್ನು ಮರೆತೇ ಬಿಟ್ಟಿದ್ದೇವೆ.


ಹೀಗಾಗಿ ಮಳೆಗಾಲಕ್ಕೆ ಸಿದ್ಧರಾಗುವುದು ಉತ್ತಮ. ಹೇಗಿದ್ದರೂ ಶಾಲೆ ಇಲ್ಲ. ಮಕ್ಕಳಿಗೆ ಸಾಮಾನ್ಯ ಜ್ವರ, ಶೀತ ಹರಡುವ ಪ್ರಮಾಣ ಕಡಿಮೆಯಿರಬಹುದು. ಆದರೆ ಉಪೇಕ್ಷೆ ಮಾಡುವಂತಿಲ್ಲ.

ಆದಷ್ಟು ಮಳೆ ನೀರಿನಲ್ಲಿ ನೆನೆಯುವುದು, ತಂಪು ನೀರಿನ ಸೇವನೆ ಮಾಡುವುದನ್ನು ಅವಾಯ್ಡ್ ಮಾಡಿ. ಯಾಕೆಂದರೆ ಸಣ್ಣ ಜ್ವರಕ್ಕೂ ಈಗ ಆಸ್ಪತ್ರೆಗೆ ತೆರಳಲೂ ಭಯಪಡುವ ಪರಿಸ್ಥಿತಿ ಇದೆ. ಅದರಲ್ಲೂ ಮಕ್ಕಳ ವಿಚಾರದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಆದಷ್ಟು ಮನೆ ಮದ್ದು, ಕಷಾಯಗಳು, ಸಿ ವಿಟಮಿನ್ ಅಂಶವಿರುವ ಆಹಾರ ಸೇವನೆ ಮಾಡುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಮಳೆಗಾಲಕ್ಕೆ ಸಿದ್ಧರಾಗಿ.

Share this Story:

Follow Webdunia kannada

ಮುಂದಿನ ಸುದ್ದಿ

ಕುಕ್ಕರ್ ನಲ್ಲಿ ಬೇಳೆ ನೀರು ಹೊರಗೆ ಲೀಕ್ ಆಗಬಾರದಂತಿದ್ದರೆ ಹೀಗೆ ಮಾಡಿ