Select Your Language

Notifications

webdunia
webdunia
webdunia
webdunia

ಹುಣಸೆ ಹಣ‍್ಣು ದೇಹಕ್ಕೆ ಉತ್ತಮವೇ?

ಹುಣಸೆ ಹಣ‍್ಣು ದೇಹಕ್ಕೆ ಉತ್ತಮವೇ?
ಬೆಂಗಳೂರು , ಬುಧವಾರ, 7 ಏಪ್ರಿಲ್ 2021 (07:26 IST)
ಬೆಂಗಳೂರು : ಹುಣಸೆ ಹಣ‍್ಣನ್ನು ಅಡುಗೆಗೆ ಬಳಸುತ್ತಾರೆ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಶಿಯಂ, ಫೈಬರ್ ಮುಂತಾದ ಪೋಷಕಾಂಶಗಳಿವೆ. ಇದನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಹಾಗಾಗಿ ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳೋಣ.

*ಹುಣಸೆ ಹಣ್ಣಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿರುವುದರಿಂದ ಇದು ರಕ್ತದ ಕೊರತೆಯನ್ನು ನೀಗಿಸುತ್ತದೆ.

*ಇದು ತೂಕ ಇಳಿಸಿಕೊಳ್ಳಲು ಸಹಕಾರಿ. ಯಾಕೆಂದರೆ ಇದು ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ.

*ಹುಣಸೆ ಹಣ್ಣು ಯಕೃತ್ತಿಗೆ ತುಂಬಾ ಉತ್ತಮ. ಇದು ಕಾಮಾಲೆ ರೋಗವನ್ನು ನಿವಾರಿಸಲು ಸಹಕಾರಿಯಾಗಿದೆ.

*ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರಲ್ಲಿ ಫೈಬರ್ ಹೇರಳವಾಗಿರುವುದರಿಂದ ಜೀರ್ಣಕ್ರಿಯೆ ಆರೋಗ್ಯಯುತವಾಗಿರುತ್ತದೆ.

*ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಚರ್ಮದ ಕಾಯಿಲೆಗೆ ಪರಿಹಾರ ನೀಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಬ್ಬ ಸ್ಯಾಂಡಲ್ ವುಡ್ ನಟಿಗೆ ಕೊರೋನಾ ಪಾಸಿಟಿವ್