Select Your Language

Notifications

webdunia
webdunia
webdunia
webdunia

ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಒಳ್ಳೆಯದಾ?

ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಒಳ್ಳೆಯದಾ?
ಮೈಸೂರು , ಶನಿವಾರ, 23 ಅಕ್ಟೋಬರ್ 2021 (07:10 IST)
ನೀವು ಚಹಾ ಪ್ರಿಯರಾದರೆ ಈಗಂತೂ ಶುಂಠಿ ಚಹಾ, ಏಲಕ್ಕಿ ಟೀ, ಲೈಮ್ ಟೀ, ಗ್ರೀನ್ ಟೀ, ಬ್ಲಾಕ್ ಟೀ ಹೀಗೆ ಏನೇನೋ ಆಯ್ಕೆಗಳಿವೆ. ಅದರಲ್ಲೂ ಡಯಟ್ ಮಾಡುವವರು ಗ್ರೀನ್ ಟೀಯನ್ನು ಹೆಚ್ಚಾಘಿ ಕುಡಿಯುತ್ತಾರೆ.

ತೂಕ ಇಳಿಸುವುದರಿಂದ ಹಿಡಿದು ಒತ್ತಡದಲ್ಲಿದ್ದಾಗ ನಮ್ಮ ದೇಹದ ನರಗಳಿಗೆ ವಿಶ್ರಾಂತಿ ನೀಡುವವರೆಗೆ ಗ್ರೀನ್ ಟೀಯಿಂದ ಹಲವು ಉಪಯೋಗಗಳಿವೆ. ಇದೇ ಕಾರಣಕ್ಕೆ ಕೆಲವರು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿದರೆ ಇನ್ನು ಕೆಲವರು ಮಲಗುವ ಮುನ್ನ ಒಂದು ಕಪ್ ಗ್ರೀನ್ ಟೀ ಕುಡಿಯಲು ಬಯಸುತ್ತಾರೆ. ಆದರೆ, ಮಲಗುವ ಮುನ್ನ ಪ್ರತಿದಿನ ಗ್ರೀನ್ ಟೀ ಕುಡಿಯುವುದು ಸುರಕ್ಷಿತವೇ? ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಏನಿದು ಹಸಿರು ಚಹಾ?
ಹಸಿರು ಚಹಾ ಅಥವಾ ಗ್ರೀನ್ ಟೀ ಎಲೆಗಳನ್ನು ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದಿಂದ ಹೊರತೆಗೆಯಲಾಗುತ್ತದೆ. ಒಂದು ಕಪ್ ಹಸಿರು ಚಹಾವು ನರಗಳನ್ನು ಸಡಿಲಗೊಳಿಸುವುದಲ್ಲದೆ, ಮೆದುಳಿನ ಕಾರ್ಯ ನಿರ್ವಹಣೆಯನ್ನು ಹೆಚ್ಚಿಸುತ್ತದೆ. ಹಾಗೇ, ಇದು ನಿಮ್ಮ ಜೀವಕೋಶದ ಹಾನಿಯನ್ನು ಕಡಿಮೆ ಮಾಡುತ್ತದೆ.
webdunia

ಗ್ರೀನ್ ಟೀಯನ್ನು ಕುಡಿಯಲು ಸರಿಯಾದ ಸಮಯ ಯಾವುದು? ಹಸಿರು ಚಹಾವನ್ನು ಕುಡಿಯಲು ಸರಿಯಾದ ಸಮಯದ ಬಗ್ಗೆ ನಿಖರವಾಗಿ ಹೇಳಲಾಗದಿದ್ದರೂ ಕೆಫೀನ್ ಇರುವ ಈ ಗ್ರೀನ್ ಟೀಯನ್ನು ಮಲಗುವ ವೇಳೆಗೆ ಕುಡಿಯುವುದು ಒಳ್ಳೆಯದಲ್ಲ.
ದಿನವಿಡೀ 2ರಿಂದ 3 ಕಪ್ ಹಸಿರು ಚಹಾವನ್ನು ಸೇವಿಸಿದರೆ ಸಾಕಷ್ಟು ಲಾಭಗಳನ್ನು ಪಡೆಯಬಹುದು. ಆದರೆ, 3 ಕಪ್ಗಿಂತ ಹೆಚ್ಚು ಗ್ರೀನ್ ಟೀ ಕುಡಿದರೆ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಇದರಿಂದ ರಕ್ತಹೀನತೆ, ವಾಕರಿಕೆ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಎದುರಾಗಬಹುದು.
ಗ್ರೀನ್ ಟೀ ಕುಡಿಯಲು ಉತ್ತಮ ಸಮಯ ಯಾವುದು?
ನೀವು ದಿನನಿತ್ಯ ವ್ಯಾಯಾಮ ಮಾಡುವುದಾದರೆ ಆ ವ್ಯಾಯಾಮ ಮಾಡುವುದಕ್ಕೂ ಮುಂಚೆ ಗ್ರೀನ್ ಟೀಯನ್ನು ಸೇವಿಸಿ. ಗ್ರೀನ್ ಟೀಯನ್ನು ರಾತ್ರಿ ಮಲಗುವ ಎರಡು ಗಂಟೆಗಳ ಮುನ್ನ ಸೇವಿಸಿ. ಗ್ರೀನ್ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಬೆಳಗ್ಗೆ ಎದ್ದ ಕೂಡಲೇ ಸೇವಿಸಬಾರದು. ಇದರಲ್ಲಿರುವ ಹೆಚ್ಚಿನ ಕೆಫೇನ್ ಯಕೃತ್ ಗೆ ಅಪಾಯಕಾರಿಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಲ್ತಾನಿ ಮಿಟ್ಟಿ ಇದ್ರೆ ಸಾಕು ತ್ವಚೆಯ ಸಮಸ್ಯೆ ಮಾಯವಾಗುತ್ತೆ!