Webdunia - Bharat's app for daily news and videos

Install App

ಭಾರತೀಯ ಮಹಿಳೆಯರಿಗು ಹೆಚ್ಚಿದೆ ಸೆಕ್ಸ್‌ನ ಸಂತೃಪ್ತಿಯ ಬಯಕೆ

Webdunia
ಸೋಮವಾರ, 25 ಆಗಸ್ಟ್ 2014 (19:34 IST)
ಭಾರತೀಯ ಮಹಿಳೆಯರಿಗೆ ಸೆಕ್ಸ್‌ ಈಗ ಮದುವೆಯ ನಂತರ ಕೇವಲ ಒಂದು ಡ್ಯುಟಿ ಮಾತ್ರವಲ್ಲ. ಭಾರತೀಯ ಮಹಿಳೆಯರ ಪ್ರಕಾರ ಸೆಕ್ಸ್‌ ಖಾಸಗೀ ಜೀವನಕ್ಕಾಗಿ ಮಹತ್ವಪೂರ್ಣವಾಗುವುದರ ಜೊತೆಗೆ ಇವರಿಗಾಗಿಯೂ ಕೂಡ ಸೆಕ್ಸ್ ಅವಶ್ಯಕವಾಗಿದೆ. ದೇಶದ ಯಾವುದೇ ಪ್ರಸಿದ್ದ ಲೈಂಗಿಕ ವಿಜ್ಞಾನಿ‌ಗಳ ಹತ್ತಿರ ಬರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಸೆಕ್ಸ್‌‌‌ನಲ್ಲಿ ಸಂತೃಪ್ತಿ ಹೊಂದುವುದು ನಮ್ಮಅಧಿಕಾರ ಕೂಡ ಇದೆ ಎಂದು ಮಹಿಳೆಯರು ಹೇಳುತ್ತಾರೆ.  
 
ಮಹಿಳೆಯರು ಈಗ ತಮ್ಮ ಅವಶ್ಯಕತೆಯನ್ನು ಅರಿತುಕೊಳ್ಳುತ್ತಿದ್ದಾರೆ ಮತ್ತು ತಮ್ಮ ಹಾಗು ತಮ್ಮಪತಿಯ ಸೆಕ್ಸ್‌‌‌‌ ಸಮಸ್ಯೆಗಳ ಪರಿಹಾರಕ್ಕೆ ವೈದ್ಯರ ಹತ್ತಿರ ಬರುತ್ತಿದ್ದಾರೆ ಎಂದು ಸೆಕ್ಸೊಲಾಜಿ ಕುರಿತಂತೆ ಮುಂಬೈನಲ್ಲಿ ಆಯೋಜಿಸಲಾದ ನ್ಯಾಶನಲ್‌ ಕಾನ್ಪ್‌ರೆನ್ಸ್‌ನಲ್ಲಿ ಲೈಂಗಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 
 
" ಮೊದಲು ಮಹಿಳೆಯರು ಸೆಕ್ಸ್‌‌‌ ಅನ್ನು ಮದುವೆ ನಂತರದ ಡ್ಯುಟಿ ಎಂದು ಭಾವಿಸುತ್ತಿದ್ದರು. ಆದರೆ, ಈಗ ಭಾರತೀಯ ಮಹಿಳೆಯರು ಸೆಕ್ಸ್‌‌‌ನಲ್ಲಿ ತಮ್ಮ ಅವಶ್ಯಕಕತೆಗಳಿಂದ ಬೇಡಿಕೆಯನ್ನಿಡುತ್ತಿದ್ದಾರೆ.ಲೈಂಗಿಕ ಸಂತೃಪ್ತಿಯನ್ನು ತಮ್ಮ ಅಧಿಕಾರ ಎಂದು ಭಾವಿಸುತ್ತಿದ್ದಾರೆ ಮತ್ತು ಇದು ವ್ಯಾಪಕ ಬದಲಾವಣೆಯಾಗಿದೆ" ಎಂದು ಕೌನ್ಸಿಲ್‌‌‌ ಆಫ್‌ ಸೆಕ್ಸ್‌‌ ಎಜುಕೇಶನ್‌‌‌ ಆಂಡ್‌ ಪೇರೆಂಟ್‌ಹುಡ್‌ ಇಂಟರ್‌‌ನ್ಯಾಶನಲ್‌‌ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಹಿಳಾ ಲೈಂಗಿಕ ತಜ್ಞೆ ಡಾ.ಇಶಿತಾ ತಿಳಿಸಿದ್ದಾರೆ. 
 
" ನನಗೆ ಪ್ರತಿ ನಿತ್ಯ ಸುಮಾರು 200 ಇ-ಮೇಲ್‌ ಬರುತ್ತವೆ. ಇದರಲ್ಲಿ ಮಹಿಳೆಯರು ಮತ್ತು ದಂಪತಿಗಳು ಸೆಕ್ಸ್‌‌‌ ಲೈಫ್‌‌ ಕುರಿತು ಸಹಾಯ ಕೇಳುತ್ತಾರೆ. ಮೊದಲು ಮಹಿಳೆಯರು ಸೆಕ್ಸ್‌ ಕುರಿತು ಹೆಚ್ಚು ಮಾತನಾಡುತ್ತಿರಲಿಲ್ಲ, ಆದರೆ ಈಗ ಮಹಿಳೆಯರು ಬೋಲ್ಡ್‌ ಆಗಿದ್ದಾರೆ. ಮಹಿಳೆಯರಿಗೆ ಸೆಕ್ಸ್‌ ಈಗ ಬೆಡ್‌‌‌ರೂಮ್‌‌ವರೆಗೆ ಮಾತ್ರ ಸೀಮಿತವಲ್ಲ ಎಂದು ಭಾವಿಸತೊಡಗಿದ್ದಾರೆ' ಎಂಬ  ಹೈದ್ರಾಬಾದ‌್‌ನ ಲೈಂಗಿಕ ತಜ್ಞೆ‌ ಡಾ.ಶರ್ಮಿಳಾ ಮಜುಮ್‌ದಾರ್‌ ಹೇಳಿಕೆಯನ್ನು ಆಂಗ್ಲ ಪತ್ರಿಕೆ ಪ್ರಕಟಿಸಿದೆ. 
 
ಮಹಿಳೆಯರು ಸೆಕ್ಸ್‌‌‌ನಲ್ಲಿ ಪಾಲ್ಗೊಂಡಾಗ ಕಾಣುವ ನೋವು, ಇಂತಹ ಅನೇಕ ಸಮಸ್ಯೆಗಳನ್ನು ತೆಗೆದುಕೊಂಡು ಬರುತ್ತಾರೆ. ಆದರೆ, ಈಗ ಅವರು ಬದಲಾಗಿದ್ದಾರೆ. ಸೆಕ್ಸ್‌‌‌ನಲ್ಲಿ ಉತ್ಸಾಹದ ವೃದ್ದಿಯ ಬಗ್ಗೆ ಮಾತನಾಡುತ್ತಾರೆ. ಉತ್ತಮ ಸೆಕ್ಸ್‌‌ಗಾಗಿ ವೈದ್ಯಕೀಯ‌‌ ಸಹಾಯ ಪಡೆಯಲು ಇಚ್ಛಿಸುತ್ತಾರೆ ಎಂದು ಡಾ.ಮುಜುಂದಾರ್‌ ತಿಳಿಸುತ್ತಾರೆ. 
 
ಮಾಧ್ಯಮಗಳು ಮಹಿಳೆಯರಿಗೆ ಮತ್ತು ದಂಪತಿಗಳಿಗೆ ಸೆಕ್ಸ್‌‌‌ನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿವೆ. ಸೆಕ್ಸ್‌ ಕುರಿತು ಮುಕ್ತವಾಗಿ ಮಾತನಾಡುವಂತಹ ಮತ್ತು ಸಮಸ್ಯೆಗಳನ್ನು ಹೇಳುವಂತಹ ಮಹಿಳೆಯರನ್ನು ತಿಂಗಳಲ್ಲಿ ಒಂದು ಬಾರಿಯಾದರೂ ನಾನು ಭೇಟಿಯಾಗುತ್ತೇನೆ ಎಂದು ನವಿ ಮುಂಬೈನಲ್ಲಿರುವ ಲೈಂಗಿಕ ತಜ್ಞೆ ಡಾ.ಜೆಕೆ ಹೇಳುತ್ತಾರೆ. 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ