Select Your Language

Notifications

webdunia
webdunia
webdunia
webdunia

ಸುಸ್ತಾಗಿದೆಯೇ ಹಾಗಿದ್ದರೆ ಈ ಆಹಾರ ಸೇವಿಸಿ

ಸುಸ್ತಾಗಿದೆಯೇ ಹಾಗಿದ್ದರೆ ಈ ಆಹಾರ ಸೇವಿಸಿ
Bangalore , ಸೋಮವಾರ, 12 ಜೂನ್ 2017 (10:44 IST)
ಬೆಂಗಳೂರು: ಕಚೇರಿ ಕೆಲಸ, ಮನೆ ಕೆಲಸ ಅಥವಾ ಹೊರಗಡೆ ಓಡಾಡಿ ಸುಸ್ತಾಗಿದ್ದೀರಾ? ಹಾಗಿದ್ದರೆ ಹೊಟ್ಟೆಗೆ ಒಂಚೂರು ಹಾಕಿಕೊಳ್ಳಲೇಬೇಕು ಎಂದಾದರೆ ಈ ಆಹಾರ ಸೇವಿಸಿ.

 
ಬಾಳೆ ಹಣ್ಣು
ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿದ್ದು, ದೇಹಕ್ಕೆ ಶಕ್ತಿ ಒದಗಿಸುತ್ತದೆ. ಹೆಚ್ಚಾಗಿ ಕ್ರೀಡಾ ತಾರೆಗಳು ಪಂದ್ಯದ ನಡುವೆ ಡ್ರಿಂಕ್ಸ್ ಬ್ರೇಕ್ ನಲ್ಲಿ ಬಾಳೆ ಹಣ್ಣು ಸೇವಿಸುವುದನ್ನು ನೀವು ಗಮನಿಸಿರಬಹುದು.

ಒಣ ಹಣ್ಣುಗಳು
ಒಣ ಹಣ್ಣುಗಳಲ್ಲಿ ಕೊಬ್ಬು ಮತ್ತು ಪೋಷಕಾಂಶಗಳು ಸಮಪ್ರಮಾಣದಲ್ಲಿರುತ್ತವೆ. ಇದು ನಮ್ಮ ದೇಹದಲ್ಲಿ ಸಕ್ಕರೆ ಅಂಶ ಸಮತೋಲನದಲ್ಲಿರಿಸುತ್ತದೆ. ಇದರಿಂದ ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ.

ಸೊಪ್ಪು ತರಕಾರಿಗಳು
ಸೊಪ್ಪು ತರಕಾರಿಗಳಲ್ಲಿ ಫೈಬರ್, ಆಂಟಿ ಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಹೇರಳವಾಗಿರುತ್ತದೆ. ಇವು ಮೂರೂ ನಮ್ಮ ದೇಹಕ್ಕೆ ಶಕ್ತಿ ನೀಡಲು ಸಹಾಯಕ.

ಮೊಟ್ಟೆ
ಮೊಟ್ಟೆ ಶಕ್ತಿದಾಯಕ ಆಹಾರ. ಇದು ಪೋಷಕಾಂಶಗಳ ಆಗರ. ಇದರಲ್ಲಿರುವ ವಿಟಮಿನ್ ಬಿ ಅಂಶ ನಮ್ಮ ದೇಹಕ್ಕೆ ಮಾತ್ರವಲ್ಲ, ಮಾನಸಿಕವಾಗಿಯೂ ಗಟ್ಟಿ ಮಾಡುತ್ತದೆ.

ನೀರು
ಎಲ್ಲಕ್ಕಿಂತ ಹೆಚ್ಚು ನಮಗೆ ಉಪಯುಕ್ತವಾದುದು ನೀರು. ಶ್ರಮದ ಕೆಲಸ ಮಾಡಿದಾಗ ದೇಹ ಡಿಹೈಡ್ರೇಟ್ ಆಗುವುದು ಸಹಜ. ಅಂತಹ ಸಂದರ್ಭದಲ್ಲಿ ಸಾಕಷ್ಟು ನೀರು ಕುಡಿದರೆ ಮತ್ತೆ ಉತ್ಸಾಹ ಮರಳುತ್ತದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫಟಾ ಪಟ್ ಚಾಕಲೇಟ್ ಕೇಕ್ ರೆಸಿಪಿ