ಮೊಡವೆ ಎರಡೇ ದಿನದಲ್ಲಿ ಮಾಯವಾಗಬೇಕೆಂದರೆ ಹೀಗೆ ಮಾಡಿ

ಶನಿವಾರ, 26 ಜನವರಿ 2019 (07:19 IST)
ಬೆಂಗಳೂರು :  ಹದಿಹರೆಯರಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ ಎಂದರೆ ಅದು ಮುಖದಲ್ಲಿ ಮೊಡವೆಗಳು ಮೂಡುವುದು. ಮುಖದಲ್ಲಿ ಮೊಡವೆಗಳು ಎದ್ದಾಗ ಅದು ಮುಖ ಅಂದವನ್ನು ಕೆಡಿಸುತ್ತದೆ. ಅಲ್ಲದೇ ನಂತರ ಉಳಿಯುವ ಅದರ ಕಲೆ ಮುಖದ ಸ್ಕೀನ್ ನ್ನು ಹಾಳುಮಾಡುತ್ತದೆ. ಕಲೆ ಉಳಿಯದಂತೆ ಈ ಮೊಡವೆಗಳನ್ನು ಎರಡೇ ದಿನದಲ್ಲಿ ಕಡಿಮೆಯಾಗಬೇಕೆಂದರೆ ಈ ಮನೆಮದ್ದನ್ನು ಬಳಸಿ.


ಟೊಮೆಟೊ ನ್ನು ಪೇಸ್ಟ್ ಮಾಡಿಕೊಂಡು ನಂತರ ಅದನ್ನು ಮುಖಕ್ಕೆ ಪ್ಯಾಕ್ ಹಚ್ಚಿಕೊಳ್ಳಿ. ನಂತರ 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಅಥವಾ ಬಾಳೆ ಹಣ್ಣಿನ ಸಿಪ್ಪೆಯಿಂದ ಮೊಡವೆ ಇದ್ದಲ್ಲಿ ಚೆನ್ನಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ  ಎರಡೇ ದಿನದಲ್ಲಿ ಮೊಡವೆ ಮಯಾವಾಗುತ್ತದೆ.


ಅಡುಗೆ ಸೋಡಾ ಕ್ಕೆ ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ಮಾಡಿಕೊಂಡು ಅದನ್ನು ಮೊಡವೆ ಇದ್ದ ಕಡೆ ಹಚ್ಚಿ. ನಂತರ 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಹಾಗೇ ಟೂತ್ ಪೇಸ್ಟ್ ನ್ನು ರಾತ್ರಿ ವೇಳೆ ಮೊಡವೆ ಮೇಲೆ ಹಚ್ಚಿ ಬೆಳಿಗ್ಗೆ ತಣ್ಣೀರಿನಲ್ಲಿ ತೊಳೆಯಿರಿ.   
ಬೆಳ್ಳುಳ್ಳಿ 1 ಎಸಳನ್ನು ಜಜ್ಜಿ ಅದಕ್ಕೆ ಲೋಳೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮೊಡವೆ ಮೇಲೆ ಹಚ್ಚಿ. ನಂತರ 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಿಮ್ಮ ಮಕ್ಕಳು ಹಾಸಿಗೆಯಲ್ಲೇ ಮೂತ್ರ ಮಾಡಿಕೊಳ್ಳುತ್ತಾರಾ? ಇಲ್ಲಿದೆ ನೋಡಿ ಇದಕ್ಕೊಂದು ಮನೆಮದ್ದು