Publish Date: Fri, 15 Mar 2019 (10:56 IST)
Updated Date: Fri, 15 Mar 2019 (10:57 IST)
ಬೆಂಗಳೂರು: ಹೀಗೂ ಇರುತ್ತಾರಾ ಎಂದು ನೀವು ಸಂಶಯಪಡಬಹುದು. ಆದರೆ ಕೆಲವರು ಹೀಗೂ ಇರುತ್ತಾರೆ. ಲೈಂಗಿಕ ಜೀವನದಲ್ಲಿ ಅಷ್ಟೊಂದು ಆಸಕ್ತಿಯಿರದ ಪತಿ ಕೆಲಸವನ್ನೇ ತಲೆಮೇಲೆ ಹೊತ್ತುಕೊಂಡು ತಿರುಗುತ್ತಾ ಮನೆಯನ್ನೇ ಮರೆಯುವ ಪ್ರವೃತ್ತಿ ಬೆಳೆಸುತ್ತಾನೆ.
ಇದಕ್ಕೆ ಎರಡು ವಿಚಾರಗಳು ಕಾರಣಗಳಾಗಿರಬಹುದು. ಒಂದು ಒಲ್ಲದ ಮದುವೆ. ಇನ್ನೊಂದು ಲೈಂಗಿಕ ನಿರಾಸಕ್ತಿ. ಇಂತಹ ಸಂದರ್ಭದಲ್ಲಿ ಪತ್ನಿ ಪತಿಯ ಜತೆ ಮಾತನಾಡಿ ನಿಜ ಕಾರಣ ತಿಳಿದುಕೊಂಡು ತಾಳ್ಮೆಯಿಂದ ತಿದ್ದುವುದು ಮುಖ್ಯ.
ಪತ್ನಿ ತನ್ನ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಂಡು, ತನಗೇನು ಬೇಕು ಎನ್ನುವುದನ್ನು ನಿಸ್ಸಂಕೋಚವಾಗಿ ಹೇಳಿಕೊಳ್ಳಬೇಕು. ಆದರೆ ರೊಮ್ಯಾನ್ಸ್ ಗಾಗಿ ಪೀಡಿಸುವುದು ಬೇಡ. ಇದರಿಂದ ಆತ ಮತ್ತಷ್ಟು ತಪ್ಪಿಸಿಕೊಳ್ಳಲು ನೋಡಬಹುದು. ಬದಲಾಗಿ ಭಾವನಾತ್ಮಕವಾಗಿಯೇ ಆತನ ಮನಸ್ಸನ್ನು ಗೆಲ್ಲಬೇಕು.
ಲೈಂಗಿಕ ನಿರಾಸಕ್ತಿಗೆ ಮೂಲ ಕಾರಣ ತಿಳಿದುಕೊಳ್ಳಬೇಕು. ಬಳಿಕ ಮನೆಯಲ್ಲಿ ಆತನಿಗೆ ಒಂದು ಹೋಮ್ಲೀ ವಾತಾವರಣ ಸೃಷ್ಟಿಸಬೇಕು. ಮೊದಲು ಸ್ನೇಹಿತರಾಗಿ. ಮುಕ್ತವಾಗಿ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವ ಆತ್ಮೀಯತೆ ಬೆಳೆಸಿಕೊಳ್ಳಿ. ಬಳಿಕ ನಿಧಾನವಾಗಿ ಆತನ ಮನಸ್ಸನ್ನು ಸೆಳೆದುಕೊಳ್ಳುವುದು ಉತ್ತಮ ದಾರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.