Publish Date: Thu, 07 Dec 2017 (07:43 IST)
Updated Date: Sat, 21 Jul 2018 (13:26 IST)
ಮದುವೆಯೊಂದು ನಡೆದಿದೆ. ಧಾರವಾಡಜಿಲ್ಲೆಯ ಸುಳ್ಳ ಗ್ರಾಮದ ಬಸವರಾಜ್ ದೇಸಾಯಿ ಎಂಬ (27) ವರ್ಷದಯುವಕ ಮಹಾರಾಷ್ಟ್ರ ಮೂಲದ ಮೋನಿಕಾ ಎಂಬ (24) ವರ್ಷದಯುವತಿಯನ್ನ ಪ್ರೀತಿಸಿ ಮದುವೆ ಮಾಡಿಕೊಂಡವನು. ಇವರಿಬ್ಬರೂ ಕಳೆದ 4 ವರ್ಷಗಳಿಂದ ಪ್ರೀತಿಸುತಿದ್ದರು.
ಜಾತಿ ಅಡ್ಡ ಬಂದ ಕಾರಣ ಇವರ ಮದುವೆಗೆ ಅಡಚಣೆಯಾಗಿತ್ತು. ಯುವಕ ಲಿಂಗಾಯತ ಜಾತಿಗೆ ಹಾಗೂ ಯುವತಿ ಪರಿಶಿಷ್ಟ ಜಾತಿಗೆ ಸೇರಿದ್ದ ಕಾರಣ, ಯುವತಿ ಮನೆಯವರು ಇದಕ್ಕೆ ವಿರೋಧ ಮಾಡುತಿದ್ದರು. ಈ ಹಿನ್ನೆಲೆ ಯುವಕ ತನ್ನ ಕುಟುಂಬ ಹಾಗೂ ದಲಿತಸಂಘಟನೆಯ ಮುಖೇನ ಅವರ ಸಮ್ಮುಖದಲ್ಲೇ ಧಾರವಾಡ ನಗರದ ದುರ್ಗಾದೇವಿ ದೇವಸ್ಥಾನದಲ್ಲಿ ಹೂವಿನ ಹಾರ ಬದಲಿಸುವಮೂಲಕ ನವ ಜೀವನಕ್ಕೆ ಕಾಲಿಟ್ಟರು. ಯುವತಿ ಸದ್ಯ ಪುಣೆಯಲ್ಲಿ ಎಂ.ಎಸ್.ಡಬ್ಲು ವಿದ್ಯಾಭ್ಯಾಸ ಮಾಡುತ್ತಿದ್ದು, ಯುವಕ ಸದ್ಯಪುಣೆಯಲ್ಲಿ ಖಾಸಗಿ ಸಂಸ್ಥೆಯಲ್ಲಿ ನೆಟವರ್ಕಿಂಗ್ ಕೆಲಸ ಮಾಡುತ್ತಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ