Publish Date: Sun, 28 Jan 2018 (10:50 IST)
Updated Date: Sun, 28 Jan 2018 (10:53 IST)
ಬೆಂಗಳೂರು: ಧನಿಯಾ ಅಥವಾ ಕೊತ್ತಂಬರಿ ಬೀಜ ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭ ತಂದುಕೊಡುತ್ತದೆ. ಇದು ತೂಕ ಇಳಿಕೆಗೂ ಸಹಕಾರಿ. ಹೇಗೆ ಎಂದು ತಿಳಿಯಬೇಕಾ? ಇದನ್ನು ಓದಿ.
ಒಂದು ಟೇಬಲರ್ ಸ್ಪೂನ್ ಧನಿಯಾ ಕಾಳುಗಳನ್ನು ತೆಗೆದುಕೊಂಡು ಸ್ವಲ್ಪ ನೀರಿನ ಜತೆಗೆ ಸೇರಿಸಿ ಕುದಿಸಿ. ಇದನ್ನು ಕೆಲವು ಕ್ಷಣಗಳ ಕಾಲ ಕುದಿಯಲು ಬಿಡಿ. ನಂತರ ಗ್ಯಾಸ್ ಆರಿಸಿ ಆರಲು ಬಿಡಿ.
ಇದನ್ನು ಒಂದು ರಾತ್ರಿ ನೆನೆಯಲು ಬಿಡಿ. ಬೆಳಗ್ಗೆ ಇದನ್ನು ಸೋಸಿ ಬಾಟಲಿಗೆ ಹಾಕಿಡಿ. ದಿನವಿಡೀ ಆಗಾಗ ಸ್ವಲ್ಪ ಸ್ವಲ್ಪವೇ ಸಿಪ್ ಮಾಡುತ್ತಿರಿ. ಈ ರೀತಿ ಮಾಡುವುದರಿಂದ ದೇಹದಲ್ಲಿರುವ ಅನಗತ್ಯ ಬೊಜ್ಜಿನಂಶ ಕಡಿಮೆಯಾಗುತ್ತದೆ. ಇದು ಬೊಜ್ಜು ಕರಗಿಸಿ ತೂಕ ಇಳಿಸಲು ಆರೋಗ್ಯಕರ ಮತ್ತು ಸುರಕ್ಷಿತ ದಾರಿಯಾಗಿದೆ. ಮಾಡಿ ನೋಡಿ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ