ರೇಷ್ಮೆ ಸೀರೆ ಬಣ್ಣಗೆಡದಂತೆ ಕಾಪಾಡುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್!

Webdunia
ಶನಿವಾರ, 17 ಮಾರ್ಚ್ 2018 (11:59 IST)
ಬೆಂಗಳೂರು: ಹೆಣ್ಣುಮಕ್ಕಳಿಗೆ ಸೀರೆ ಎಂದರೆ ಬಲು ಇಷ್ಟ. ಹಾಗೋ ಹೀಗೂ ದುಡ್ಡು ಕೂಡಿಟ್ಟುಕೊಂಡು ದುಬಾರಿಯಾದ ರೇಷ್ಮೆ ಸೀರೆ ಕೊಂಡುಕೊಳ್ಳುತ್ತೇವೆ. ವರುಷವಾಗುವುದೊಳಗೆ ಅದು ತನ್ನ ಮೊದಲಿನ ಸೊಬಗು ಕಳೆದುಕೊಂಡರೆ ತುಂಬ ಬೇಸರವಾಗುತ್ತದೆ. ರೇಷ್ಮೆ ಸೀರೆಯನ್ನು ನಾಜೂಕಾಗಿ ಕಾಪಾಡಿಕೊಳ್ಳಬೇಕಾಗುತ್ತದೆ. ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್. ಇದನ್ನು ಅನುಸರಿಸಿ ನಿಮ್ಮಿಷ್ಟದ ಸೀರೆಯನ್ನು ಕಾಪಾಡಿಕೊಳ್ಳಿ.


ಹತ್ತಿ ಬಟ್ಟೆಯಲ್ಲಿ ಸುತ್ತಿಡಿ : ನಿಮ್ಮ ಸೀರೆಯನ್ನು ಹೊಸದರಂತೆ ಕಾಪಾಡಲು ಒಂದು ಅಗಲವಾದ ಹತ್ತಿ ಬಟ್ಟೆಯಲ್ಲಿ ಸೀರೆಯನ್ನು ಸುತ್ತಿ ಇಡಿ.

ಬಿಸಿಲಿಗೆ ಇಡಿ : ರೇಷ್ಮೆ ಸೀರೆಯನ್ನು ಅಗಾಗ ಬಿಸಿಲಿಗೆ ಹಾಕಿ ಒಣಗಿಸಬೇಕು. ಇದರಿಂದ ಸೀರೆಯ ಬಣ್ಣ ಹಾಗೆಯೇ ಉಳಿಯುತ್ತದೆ.

ಡ್ರೈ ಕ್ಲೀನ್‌ ಮಾಡಿಸಿ : ಸೀರೆಯನ್ನು ಎರಡು ಮೂರು ಬಾರಿ ಧರಿಸಿದ ನಂತರ ಡ್ರೈ ಕ್ಲೀನ್‌ ಮಾಡಿಸಿ. ಪ್ರತಿ ಬಾರಿ ಅದನ್ನು ಧರಿಸಿದ ನಂತರ ಅದನ್ನು ಡ್ರೈ ಕ್ಲೀನ್‌ ಮಾಡಿಸುವುದು ಸರಿಯಲ್ಲ.

ಸ್ಪ್ರೇಯನ್ನು ದೂರದಿಂದ ಬಳಸಿ : ಇನ್ನು ರೇಷ್ಮೆ ಸೀತೆಯ ಮೇಲೆ ಯಾವುದೇ ಬಾಡಿ ಸ್ಪ್ರೇ, ಪರ್‌ಫ್ಯೂಮ್‌ ಅಥವಾ ಡಿಯೋಡ್ರಂಟ್‌ ಬಳಕೆ ಮಾಡಬೇಡಿ.

ಶ್ಯಾಂಪೂವಿನಿಂದ ತೊಳೆಯಿರಿ : ಸೀರೆಯಲ್ಲಿ ಕಲೆಗಳಾದರೆ ಸಾಬೂನಿನಿಂದ ತೊಳೆಯಬೇಡಿ. ಶಾಂಪೂವಿನಿಂದ ತೊಳೆಯಿರಿ.

ಆಗಾಗ ಮಡಚಿ : ಒಂದೇ ಭಂಗಿಯಲ್ಲಿ ಸೀರೆಯನ್ನು ಮಡಚಿ ಇಡಬೇಡಿ. ಬದಲಾಗಿ ಅದನ್ನು ಆಗಾಗ ಬಿಡಿಸಿ ಬೇರೆ ರೀತಿಯಾಗಿ ಮಡಚಿ ಇದರಿಂದ ಸೀರೆ ಹಾಳಾಗದಂತೆ ಕಾಪಾಡಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments