Select Your Language

Notifications

webdunia
webdunia
webdunia
webdunia

ಬೇಡದ ಕೂದಲು ತೆಗೆಯಲು ಹೀಗೊಂದು ಮನೆ ಮಂತ್ರ

ಕೂದಲು
ಬೆಂಗಳೂರು: ಕೆಲವರಿಗೆ ಬೇಡದ ಕೂದಲು ತೆಗೆಯುವ ಚಿಂತೆ. ರೇಜರ್ ಬಳಸಿದರೆ ಮತ್ತಷ್ಟು ಬರುವ ಚಿಂತೆ. ಅಂಗಡಿಯಲ್ಲಿ ಸಿಗುವ ಕ್ರೀಂ ಹಚ್ಚಿಕೊಂಡರೆ ಇನ್ನೇನೋ ಅಡ್ಡ ಪರಿಣಾಮಗಳ ಚಿಂತೆ. ಹಾಗಾಗಿ ಮನೆಯಲ್ಲೇ ಮಾಡಬಹುದಾದ ಒಂದು ಹೇರ್ ರಿಮೂವಲ್ ತಂತ್ರ ಹೇಳುತ್ತೇವೆ ನೋಡಿ.

 
ಇದಕ್ಕೆ ಬೇಕಾಗಿರುವುದು ಹಸಿ ಪಪ್ಪಾಯ. ಪಪ್ಪಾಯದ ಸಿಪ್ಪೆ ತೆಗೆದು ಕತ್ತರಿಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಅರಸಿನದ ತುಂಡು ತೆಗೆದುಕೊಂಡು ತುರಿದುಕೊಳ್ಳಿ. ಪಪ್ಪಾಯ ಪೇಸ್ಟ್ ಗೆ ತುರಿದ ಅರಸಿನ ಚೂರುಗಳನ್ನು ಮಿಕ್ಸ್ ಮಾಡಿಕೊಂಡು ಕೂದಲಿರುವ ಭಾಗಕ್ಕೆ ಮಸಾಜ್ ಮಾಡಿ.

ಇದನ್ನು ಹಾಗೇ 20 ನಿಮಿಷಗಳ ಕಾಲ ಬಿಡಿ. ನಂತರ ಹದ ಬಿಸಿ ನೀರು ಬಳಸಿಕೊಂಡು ಪೇಸ್ಟ್ ಹಚ್ಚಿದ ಭಾಗವನ್ನು ಚೆನ್ನಾಗಿ ತೊಳೆದುಕೊಳ್ಳಿ. ಈ ರೀತಿ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಾಡುತ್ತಿದ್ದರೆ ಬೇಡದ ಕೂದಲುಗಳಿಂದ ಮುಕ್ತಿ ಪಡೆಯಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ಸುತ್ತ ಕಪ್ಪು ವರ್ತುಲವೇ? ಹೀಗೆ ಮಾಡಿ