ಬೆಂಗಳೂರು:ಕೆಲವೊಮ್ಮೆ ಬೆಳೆದ ಹವಾಗುಣದ ಪ್ರಭಾವವೋ, ಬಿಸಿಲಿನ ತಾಪವೋ ಸೌತೇಕಾಯಿ ಕಹಿ ರುಚಿ ಕೊಡುತ್ತದೆ. ಹಾಗಿದ್ದರೆ ಅದರ ಕಹಿ ರುಚಿ ಹೋಗಲಾಡಿಸುವುದು ಹೇಗೆ? ಇಲ್ಲಿದೆ ಉಪಾಯ!
ತುದಿ ಉಜ್ಜಿಕೊಳ್ಳಿ
ತುದಿಯನ್ನು ವೃತ್ತಾಕಾರದಲ್ಲಿ ಕತ್ತರಿಸಿಕೊಂಡು, ಪರಸ್ಪರ ಚೆನ್ನಾಗಿ ಉಜ್ಜಿಕೊಳ್ಳಿ. ಇದು ಕಹಿ ತೆಗೆಯಲು ಸಾಮಾನ್ಯ ಉಪಾಯ. ಈ ರೀತಿ ಸ್ವಲ್ಪ ಹೊತ್ತು ಮಾಡಿದಾಗ ಬಿಳಿ ಅಂಟಿನಂತಹ ಪದಾರ್ಥ ಹೊರಬರುವುದು. ನಂತರ ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು ಬಳಸಿ.
ಉಪ್ಪು ಬೆರೆಸಿಡಿ
ಈ ವಿಧಾನವನ್ನು ಕಹಿ ರುಚಿಯಿರುವ ಯಾವುದೇ ತರಕಾರಿಗೆ ಮಾಡಬಹುದು. ಸೌತೇಕಾಯಿಯನ್ನು ಕಟ್ ಮಾಡಿಕೊಂಡು ಉಪ್ಪು ಬೆರೆಸಿ ಸ್ವಲ್ಪ ಹೊತ್ತು ಇಡಿ. ಉಪ್ಪು ಕರಗಿ ನೀರಾದ ಮೇಲೆ ತೊಳೆದುಕೊಂಡು ಬಳಸಿ.
ಇವೆರಡೂ ಅಭ್ಯಾಸಗಳಿಂದ ಸೌತೇಕಾಯಿಯಲ್ಲಿರುವ ಕಹಿ ಅಂಶವನ್ನು ಸಂಪೂರ್ಣವಾಗಿ ಅಲ್ಲದಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಕಹಿ ತೆಗೆದು ತಿನ್ನಲು ಯೋಗ್ಯವಾಗಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ