Select Your Language

Notifications

webdunia
webdunia
webdunia
webdunia

ಏಳೇ ದಿನದೊಳಗೆ ತೂಕ ಇಳಿಸುವ ಮಂತ್ರ ತಿಳಿಯಬೇಕೇ?!

ಏಳೇ ದಿನದೊಳಗೆ ತೂಕ ಇಳಿಸುವ ಮಂತ್ರ ತಿಳಿಯಬೇಕೇ?!
Bangalore , ಗುರುವಾರ, 20 ಏಪ್ರಿಲ್ 2017 (07:04 IST)
ಬೆಂಗಳೂರು: ಡುಮ್ಮಿಯಾಗಿ ಬಿಟ್ಟೆನಲ್ಲಾ? ಹೇಗಪ್ಪಾ ಸಣ್ಣವಾಗೋದು ಎಂಬ ಚಿಂತೆ ಹಲವರದ್ದು. ಸುಲಭವಾಗಿ ಏಳೇ ದಿನಗಳೊಳಗೆ ತೂಕ ಇಳಿಸುವ ಐಡಿಯಾ ಬೇಕಾರೆ ಹೀಗೆ ಮಾಡಿ.

 
ದಿನ 1
ಆದಷ್ಟು ನೀರಿನಂಶವಿರುವ ಹಣ್ಣುಗಳನ್ನು ಸೇವಿಸಿ. ಕಲ್ಲಂಗಡಿ ಹಣ್ಣು,  ಸೌತೆಕಾಯಿ, ಕರಬೂಜ ಹಾಗೂ ಅದರ ಜತೆಗೆ ಬಾಳೆ ಹಣ್ಣು ಸೇವನೆಗೆ ಅಡ್ಡಿಯಿಲ್ಲ.

ದಿನ 2
ಎರಡನೇ ದಿನ ನಿಮ್ಮ ತಟ್ಟೆಯಲ್ಲಿ ಆದಷ್ಟು ತರಕಾರಿಗಳು ಇರುವಂತೆ ನೋಡಿಕೊಳ್ಳಿ. ಅದರಲ್ಲೂ ವಿಶೇಷವಾಗಿ ಹಸಿ ತರಕಾರಿ ಸೇವಿಸಿ. ಇದರ ಜತೆಗೆ ಬೇಯಿಸಿ ಆಲೂಗಡ್ಡೆ, ಜತೆಗೆ ಸಾಕಷ್ಟು ನೀರು ಕುಡಿಯಿರಿ. ಆದರೆ ಈ ದಿನ ಮೊಟ್ಟೆ, ಮಶ್ರೂಮ್ ನಂತಹ ಆಹಾರ ಸೇವನೆ ಮಾಡಬೇಡಿ.

ದಿನ 3
ಮೊದಲೆರಡು ದಿನ ತಿಂದ ಆಹಾರಗಳನ್ನೇ ಸೇವಿಸಬೇಕು. ಆದರೆ ಆಲೂಗಡ್ಡೆ, ಮಾಂಸ, ಡೈರಿ ಉತ್ಪನ್ನಗಳು, ಬಾಳೆಹಣ್ಣಿನ ಸೇವನೆ ಬೇಡ. ಆದರೆ ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ.

ದಿನ 4
ನಾಲ್ಕನೇ ದಿನ ಬಾಳೆ ಹಣ್ಣಿನ ಜ್ಯೂಸ್ ಅಥವಾ ಸೂಪ್ ಮಾಡಿಕೊಂಡು ಯಥೇಚ್ಛವಾಗಿ ಸೇವಿಸಿ. ಸುಮಾರು 8 ಬಾಳೆ ಹಣ್ಣಿನ ಜತೆಗೆ, ಹಾಲು, ನೀರು ಸಾಕಷ್ಟ ಪ್ರಮಾಣದಲ್ಲಿ ಹೊಟ್ಟೆಗೆ ಇಳಿಯಲಿ.

ದಿನ 5
ಈಗ ನೀವು ಗುರಿ ಸನಿಹ ಮುಟ್ಟಿದ್ದೀರಿ. ಇಂದು ಧಾನ್ಯದ ರೂಪದಲ್ಲಿ ಬ್ರೌನ್ ರೈಸ್ ಸೇವಿಸಬಹುದು. ಜತೆಗೆ ರೆಡ್ ಮೀಟ್, ಮೀನು, ಚಿಕನ್,  ಚೀಸ್, ಸೌತೆಕಾಯಿ, ಟೊಮೆಟೊ, ಕ್ಯಾಬೇಜ್,  ಮೊಸರು ಸೇವಿಸಬಹುದು.

ದಿನ 6
ಈವತ್ತು ನಿಮ್ಮನ್ನು ನೋಡಿ ನೀವೇ ಖುಷಿಪಟ್ಟುಕೊಳ್ಳುತ್ತೀರಿ. ಬ್ರೌನ್ ರೈಸ್, ಬೇಯಿಸಿದ ತರಕಾರಿ, ಕಡಲೆ ಬೇಳೆ, ಚಿಕನ್, ಮೀನು ಸೇವಿಸಬಹುದು. ಆದರೆ ಡೈರಿ ಉತ್ಪನ್ನ, ಬೀಫ್, ಮಾವಿನ ಹಣ್ಣು, ಬಾಳೆಹಣ್ಣನ್ನು ಪಕ್ಕಕ್ಕೂ ಸೇರಿಸಬೇಡಿ.

ದಿನ 7
ಕೊನೆಯ ದಿನ ಆದಷ್ಟು, ಹಣ್ಣಿನ ರಸ, ಜ್ಯೂಸ್,  ತರಕಾರಿ,  ಬ್ರೌನ್ ರೈಸ್ ತಿಂದರೆ ಸಾಕು. ಇಂದೂ ಕೂಡಾ ಡೈರಿ ಉತ್ಪನ್ನ, ಬೀಫ್, ಮಾವಿನ ಹಣ್ಣು, ಬಾಳೆಹಣ್ಣನ್ನು ತಿನ್ನಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಿನ ಉಪಾಹಾರಕ್ಕೆ ಯಾವ ತಿಂಡಿ ಉತ್ತಮ?