Select Your Language

Notifications

webdunia
webdunia
webdunia
webdunia

ಡೆಂಗ್ಯೂ ಜ್ವರಕ್ಕೆ ಪರಿಣಾಮಕಾರಿ ಮನೆ ಮದ್ದು

ಡೆಂಗ್ಯೂ ಜ್ವರಕ್ಕೆ ಪರಿಣಾಮಕಾರಿ ಮನೆ ಮದ್ದು
ದೆಹಲಿ , ಬುಧವಾರ, 24 ಆಗಸ್ಟ್ 2016 (10:20 IST)
ಡೆಂಗ್ಯೂ ಫಿವರ್ ಎಲ್ಲಾ ಕಾಲದಲ್ಲೂ ಎಲ್ಲೆಡೆ ಸಾಮಾನ್ಯವಾಗಿ ಕಾಡುವ ಕಾಯಿಲೆ. ಇದ್ದಕ್ಕಿದಂತೆ ದೇಹವನ್ನು ಪ್ರವೇಶಿಸುವ ಸಣ್ಣ ಜ್ವರ ದೊಡ್ಡ ಕಾಯಿಲೆಗೆ ಕಾರಣವಾಗಬಲ್ಲದ್ದು, ಪ್ರತಿ ವರ್ಷವು ಡೆಂಗ್ಯೂ ಫೀವರ್ ಕಾಣಿಸಿಕೊಳ್ಳುತ್ತದೆ. ದೀರ್ಘಕಾಲ ಹಾಗೆಯೇ ಬಿಟ್ಟರೆ ಆರೋಗ್ಯಕ್ಕೆ ಗಂಭೀರ ಸಮಸ್ಯೆಯಾಗಿ ಕಾಡಬಹುದು. 
ವೈರಲ್ ಇನ್‌ಫೆಕ್ಷನ್ ನಿಂದ ಬರುವ ಈ ಕಾಯಿಲೆ, ನಿರ್ಲಕ್ಷ ಮಾಡಿದ್ರೆ ಅಪಾಯ ತಂದೊಡ್ಡಬಲ್ಲದ್ದು, ಪ್ರಾಣಕ್ಕೆ ಅಪಾಯ ತರಬಹುದು. ಮನೆಯಲ್ಲೇ ಡೆಂಗ್ಯೂ ಸಮಸ್ಯೆಗೆ ಪರಿಹಾರ ನೀಡಬಹುದು. ಡೆಂಗ್ಯೂವಿನಿಂದ ದೂರವಿರಲು ಸೊಳ್ಳೆಯಿಂದ ರಕ್ಷಣೆ ಪಡೆದುಕೊಳ್ಳಬೇಕಾಗುತ್ತದೆ. 
 
ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಡೆಂಗ್ಯೂ ವಿರುದ್ಧ ಹೊರಾಡಬಹುದಾದರೂ, ಡೆಂಗ್ಯೂ ನಿಯಂತ್ರಣಕ್ಕೆ ಮನೆಯಲ್ಲೇ ಮಾಡಬಹುದಾದ ಪರಿಣಾಮಕಾರಿ ಔಷಧಿಗಳು ಇಲ್ಲಿವೆ
 
ಪಪಾಯ ಎಲೆಗಳು
ಪಪಾಯ ಎಲೆಗಳು ಚಚ್ಚಿ ಶುದ್ಧ ರಸ ಪಡೆದುಕೊಂಡು, ಒಂದು ಬಟ್ಟೆಯಿಂದ ಹಿಂಡು ತೆಗೆದು ಆ ಬಳಿಕ ಕುಡಿಯಬಹುದು. ಇದರಿಂದ ಶುದ್ಧ ಜ್ಯೂಸ್ ಪಡೆದುಕೊಳ್ಳಬಹುದು. 
 
ಬೇವಿನ ಎಲೆಗಳು
ಬೇವಿನ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿಕೊಳ್ಳಬೇಕು. ನಂತರ  ಬಿಳಿ ರಕ್ತ ಜೀವಕೋಶಗಳನ್ನು ಹಾಗೂ ಕೆಂಪು ರಕ್ತಕೋಶಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಡೆಂಗ್ಯೂ ಸಮಸ್ಯೆ ದೂರವಿರಲು ಇದು ಸಹ ಕಾರಣವಾಗಬಲ್ಲದ್ದು.
 
ತುಳಸಿ ಎಲೆಗಳು...
 ಬೇಯಿಸಿದ ತುಳಸಿ ಎಲೆಗಳ ನೀರನ್ನು ತೆಗೆದುಕೊಂಡು ಕುಡಿಯುವುದರಿಂದ ಡೆಂಗ್ಯೂ ಕಾಯಿಲೆ ನಿಯಂತ್ರಿಸಬಹುದು. ತುಳಸಿ ದೀರ್ಘ ಕಾಲದ ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಒದಗಿಸುತ್ತದೆ. ಆರ್ಯುವೇದ್ ಔಷಧಿಗೆ ಈ ಔಷಧಿಯನ್ನೇ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. 
 
ಮೆಂತ್ಯ ಸೊಪ್ಪು
ನೀರಿನಲ್ಲಿ ಮೆಂತ್ಯೆ ಸೊಪ್ಪಿನ ಎಲೆಗಳನ್ನು ನೆನೆಸಿಕೊಳ್ಳಬೇಕು. ಆ ಮೇಲೆ ಕುಡಿಯುಬೇಕು. ಅಲ್ಲದೇ ಮೆಂತ್ಯಾ ಪೌಡರನ್ನು ನೀರಿನಲ್ಲಿ ಮಿಕ್ಸ್ ಮಾಡಿಯೂ ಕುಡಿಯಬಹುದು. 
 
ಕಿತ್ತಳೆ ರಸ
ಕಿತ್ತಳೆ ರಸ ಡೆಂಗ್ಯೂ ಜ್ವರ ಲಕ್ಷಣಗಳಿಗೆ ಚಿಕಿತ್ಸೆಗೆ ಸಹಾಯ ಮಾಡಬಲ್ಲದ್ದು. ಜೀವಸತ್ವಗಳ ಕೊರತೆಯನ್ನು ಇದು ತಡೆಗಟ್ಟುತ್ತದೆ. ಅಲ್ಲದೇ ವೈರಸ್ ತೊಡೆದುಹಾಕಲು ಇದು ಸಹಾಯ ಮಾಡುತ್ತದೆ.
 
ಅರಶಿನ 
ನೀವು ಹಾಲು ಸೇವಿಸುತ್ತೀರಿ ಎಂದಾದರೆ, ಹಾಲಿನಲ್ಲಿ ಅರಶಿನ ಸೇರಿಸಿ ಬಳಸಿ.. ಅರಶಿನ ಚಯಾಪಚಯ ಅಲ್ಲದೇ ಡೆಂಗ್ಯೂಗೆ ವೇಗವಾಗಿ ನಿಯಂತ್ರಣದಲ್ಲಿಡಬಲ್ಲದ್ದು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನೈಸರ್ಗಿಕ ಔಷಧಿ. ಹಲವು ಸಮಸ್ಯೆಗಳ ರಾಮಬಾಣ ಈ ಔಷಧಿ.. ವಿಡಿಯೋ