Select Your Language

Notifications

webdunia
webdunia
webdunia
webdunia

ನೈಸರ್ಗಿಕ ಔಷಧಿ. ಹಲವು ಸಮಸ್ಯೆಗಳ ರಾಮಬಾಣ ಆಪಲ್.. ವಿಡಿಯೋ

ನೈಸರ್ಗಿಕ ಔಷಧಿ. ಹಲವು ಸಮಸ್ಯೆಗಳ ರಾಮಬಾಣ ಆಪಲ್.. ವಿಡಿಯೋ
ದೆಹಲಿ , ಬುಧವಾರ, 24 ಆಗಸ್ಟ್ 2016 (09:29 IST)
ಈ ಔಷಧಿಯನ್ನು ಅತ್ಯುತ್ತಮ ಆರೋಗ್ಯಕರ ಔಷಧಿ ಅಂತ ಹೇಳಲಾಗುತ್ತದೆ. ಇದರಿಂದ ಹಲವು ಆರೋಗ್ಯದ ಉಪಯೋಗಗಳು ಪಡೆದುಕೊಳ್ಳಬಹುದು. ಬಿಕ್ಕಳಿಕೆ, ಹೊಟ್ಟೆ ಸಮಸ್ಯೆ, ಗಟಲಿನ ಸಮಸ್ಯೆ, ಉಸಿರುಗಟ್ಟಿಸುವ ಮೂಗು ಹೀಗೆ ಎಲ್ಲಾ ಸಮಸ್ಯೆಗಳಿಗೆ ಈ ಔಷಧಿ ರಾಮಬಾಣವಿದ್ದಂತೆ. ಸೇಬುಹಣ್ಣಿನಿಂದ ತಯಾರಿಸಿದ ವಿನೆಗರ್ ಔಷಧೀಯ ಗುಣಗಳನ್ನು ಹೊಂದಿದೆ. ಬಿಆರೋಗ್ಯಕ್ಕಾಗಿ ಬಳಸಲಾಗುತ್ತದೆ. ಆಪಲ್ ಸೈಟರ್ ವಿನೆಗರ್‌ನಿಂದ ಹಲವು ಪ್ರಯೋಜನಗಳು ಇಲ್ಲಿವೆ.
 
ಬಿಕ್ಕಳಿಕೆ ನಿವಾರಿಸಬಲ್ಲದು ಆಪಲ್ ವಿನೆಗರ್
ಬಿಕ್ಕಳಿಕೆ ಸಮಸ್ಯೆ ಎದುರಾದ್ರೆ ಆಪಲ್ ವಿನೆಗರ್ ಔಷಧಿಯಂತೆ ಚಿಕಿತ್ಸೆ ನೀಡುತ್ತದೆ. ಅಲ್ಲದೇ ಜೀರ್ಣಕ್ರಿಯೆಗೂ ಇದು ಪರಿಣಾಮ ಬೀರಬಲ್ಲದ್ದು. ಬಿಕ್ಕಳಿಕೆ ಸಮಸ್ಯೆ ನಿಮಗಿದ್ರೆ ವಿನೆಗರ್ ಸೇವಿಸುವುದು ಉತ್ತಮ.
 
ಹೊಟ್ಟೆ ಸಮಸ್ಯೆಗೆ..
ಹೊಟ್ಟೆ ಅಪ್ಸೆಟ್ ಆಗಿದ್ದರೆ ಆಪಲ್ ವಿನೆಗರ್ ಅತ್ಯಂತ ಪರಿಣಾಮಕಾರಿ ಔಷಧಿಗಳಲ್ಲಿ ಒಂದು. ಇದರಲ್ಲಿ ಆಂಟಿಬಯೋಟಿಕ್ ಗುಣಗಳು ಇರುವುದರಿಂದ ಶೀರ್ಘದಲ್ಲೇ ಹೊಟ್ಟೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಲ್ಲದೇ ಹೊಟ್ಟೆಯಲ್ಲಿರುವ ಬ್ಯಾಕ್ಟೇರಿಯಾಗಳ ಸೋಂಕನ್ನು ಸಹ ನಿವಾರಿಸುವ ಗುಣ ಹೊಂದಿದೆ. 
 
ಗಟಲಿನ ಸಮಸ್ಯೆಗೆ ವಿನೆಗರ್..
ನೋಯುತ್ತಿರುವ ಗಂಟಲಿಗೆ ಈ ವಿನೆಗರ್ ಮನೆ ಔಷಧಿಯಂತೆ ಕೆಲಸ ಮಾಡುತ್ತದೆ. ಗಂಟಲು ಕಫ್, ಹಾಗೂ ಗಂಟಲಿನ ಸಮಸ್ಯೆಗೆ ಇದು ರಾಮಬಾಣವಿದ್ದಂತೆ. 1/4 ಕಪ್ ಆಪಲ್ ಸೈಡರ್ ವಿನೆಗರ್ ತೆಗೆದುಕೊಂಡು ಅದರಲ್ಲಿ 1/4ರಷ್ಟು ಬೆಚ್ಚಗಿನ ನೀರು ಸೇರಿಸಿ ಬಾಯಿ ಮುಕ್ಕಳಿಸಬೇಕು.
 
ಉಸಿರುಗಟ್ಟಿಸುವ ಮೂಗು..
ಮೂಗು ಉಸಿರುಗಟ್ಟುತ್ತಿದ್ದರೆ ಆಪಲ್ ವಿನೆಗರ್ ಪರಿಣಾಮಕಾರಿ ಚಿಕಿತ್ಸೆ ನೀಡಬಲ್ಲದ್ದು.. ಕೋಲ್ಡ್ ಆಗಿದ್ದರೆ ನಿಮ್ಮ ಹತ್ತಿರ ಆಪೆಲ್ ಸೈಡರ್ ವಿನೆಗರ್‌ನ್ನು ಇಟ್ಟುಕೊಂಡಿರಬೇಕು. ವಿನೆಗರ್‌ನಲ್ಲಿ ಪೋಟ್ಯಾಶಿಯಂ, 
 
ತೂಕ ಇಳಿಕೆ
ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ತೂಕ ಇಳಿಕೆ ಮಾಡಲು ಸಹಾಯಕಾರಿಯಾಗುತ್ತದೆ. ವಿನೆಗರ್‌ನಲ್ಲಿ ಆ್ಯಸ್ಟಿಕ್ ಆ್ಯಸಿಡ್ ಎಂಬ ಅಂಶವಿರುವುದರಿಂದ ಪದೇ ಪದೇ ಹಸಿವು ಆಗುವುದನ್ನು ಇದು ನಿವಾರಿಸುತ್ತದೆ. ನಿಮ್ಮ ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಸರಿಯಾಗಿ ನಿದ್ದೆ ಬರುತ್ತಿಲ್ಲವೇ?.. ಇದನ್ನು ಓದಿ