Select Your Language

Notifications

webdunia
webdunia
webdunia
webdunia

ಎಣ್ಣೆ ಚರ್ಮದ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆ...?!

ಎಣ್ಣೆ ಚರ್ಮದ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆ...?!

ನಾಗಶ್ರೀ ಭಟ್

ಬೆಂಗಳೂರು , ಶುಕ್ರವಾರ, 29 ಡಿಸೆಂಬರ್ 2017 (12:19 IST)
ಎಣ್ಣೆ ಚರ್ಮ ಹಲವು ಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ಅದರಲ್ಲೂ ಮಹಿಳೆಯರಿಗೆ ಇದು ಬಹಳ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಇದರಿಂದ ಮುಖವು ತುಂಬಾ ಡಲ್ ಆಗಿ ಕಾಣಿಸುತ್ತದೆ ಮತ್ತು ಮೊಡವೆಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

ಯಾವ ಮೇಕಪ್ ಮಾಡಿಕೊಂಡರೂ ಸರಿಯಾಗುವುದೇ ಇಲ್ಲ. ಇದರಿಂದಾಗಿ ಹಲವರು ಫೇಸ್‍‌-ವಾಶ್‌ಗಳು, ಕ್ರೀಮ್‌ಗಳು ಮತ್ತು ಲೋಶನ್‌ಗಳ ಮೊರೆ ಹೋಗುತ್ತಾರೆ. ಆದ್ದರಿಂದ ನೀವು ಅದರ ಬದಲು ಮನೆಯಲ್ಲಿಯೇ ಕೆಲವು ಸಲಹೆಗಳನ್ನು ಪಾಲಿಸಿ ಎಣ್ಣೆ ಚರ್ಮದ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬಹುದು. ಹೇಗೆ ಎಂದು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.
 
* ನಿಂಬೆ ರಸ ಮತ್ತು ಜೇನಿನ ಮಿಶ್ರಣ ಎಣ್ಣೆ ಚರ್ಮದವರಿಗೆ ತುಂಬಾ ಸುಲಭವಾದ ಮತ್ತು ಪರಿಣಾಮಕಾರಿಯಾದ ಔಷಧವಾಗಿದೆ. 2 ಚಮಚ ನಿಂಬೆ ರಸ ಮತ್ತು 1 ಚಮಚ ಜೇನನ್ನು ಬೆರೆಸಿ ಕಾಟನ್ ಬಾಲ್‌ನಿಂದ ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ. ನಂತರ 4-5 ನಿಮಿಷ ಚೆನ್ನಾಗಿ ಮಸಾಜ್ ಮಾಡಿಕೊಂಡು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಇದು ನಿಮ್ಮ ಮುಖದಲ್ಲಿರುವ ಹೆಚ್ಚಿನ ಎಣ್ಣೆಯ ಅಂಶ ಮತ್ತು ಧೂಳನ್ನು ತೆಗೆಯುತ್ತದೆ. ಮೊಡವೆಯಿಂದ ರಕ್ಷಿಸಿ ಮೃದುವಾದ ಚರ್ಮ ನಿಮ್ಮದಾಗುವಂತೆ ಮಾಡುತ್ತದೆ.
 
* ದಿನವೂ ಬೆಳಿಗ್ಗೆ ಮುಖ ತೊಳೆದಾದ ಮೇಲೆ 3-4 ಐಸ್ ಕ್ಯೂಬ್‌ಗಳನ್ನು ಒಂದು ಕಾಟನ್ ಬಟ್ಟೆಯಲ್ಲಿ ಕಟ್ಟಿಕೊಂಡು ಅದರಿಂದ 4-5 ನಿಮಿಷ ಮಸಾಜ ಮಾಡಿಕೊಳ್ಳಿ. ಇದು ಮುಖದ ಚರ್ಮದಲ್ಲಿರುವ ರಂಧ್ರಗಳನ್ನು ಸಂಕುಚಿಸುವಂತೆ ಮಾಡುತ್ತದೆ, ಮೊಡವೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ, ರಕ್ತದ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
 
* ಶ್ರೀಗಂಧದ ಪುಡಿಗೆ ರೋಸ್ ವಾಟರ್ ಅನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಅದನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿಕೊಂಡು 10-15 ನಿಮಿಷ ಬಿಟ್ಟು ತಣ್ಣನೆಯ ನೀರಿನಿಂದ ತೊಳೆಯಿರಿ. ಶ್ರೀಗಂಧ ಚರ್ಮದ ಬಣ್ಣವನ್ನು ತಿಳಿಯಾಗಿಸಿ ಕಾಂತಿಯುತವನ್ನಾಗಿ ಮಾಡುತ್ತದೆ.
 
* 1 ಚಮಚ ಆ್ಯಪಲ್ ಸೈಡರ್ ವಿನೆಗರ್ ಮತ್ತು 2-3 ಚಮಚ ಸೌತೆಕಾಯಿ ರಸವನ್ನು ಸೇರಿಸಿ 3-4 ನಿಮಿಷ ನಿಮ್ಮ ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಇದು ಚರ್ಮವನ್ನು ಸ್ವಚ್ಛಗೊಳಿಸಿ ಕಾಂತಿಯುತವನ್ನಾಗಿ ಮಾಡುತ್ತದೆ.
 
* ದಿನವೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ 1 ಚಮಚ ಜೇನು ಮತ್ತು 1/2 ನಿಂಬೆ ರಸವನ್ನು ಹಿಂಡಿಕೊಂಡು ಕುಡಿಯುತ್ತಾ ಬನ್ನಿ. ಇದು ನಿಮ್ಮ ದೇಹದಲ್ಲಿರುವ ಜಿಡ್ಡಿನ ಅಂಶವನ್ನು ತೆಗೆದುಹಾಕಿ ನಿಮ್ಮ ತ್ವಚೆ ಒಳಗಿನಿಂದಲೇ ಸ್ವಚ್ಛವಾಗಿ, ತಿಳಿಯಾಗಿ ಮತ್ತು ಕಾಂತಿಯುತವಾಗಿರುವಂತೆ ಮಾಡುತ್ತದೆ.
 
* ನಿಮ್ಮ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ನಂತರ ಸಮುದ್ರದ ಉಪ್ಪು ಮತ್ತು ಜೇನನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದರಿಂದ 3-4 ನಿಮಿಷ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಇದು ನಿಮ್ಮ ತ್ವಚೆಯನ್ನು ಮೃದು, ಸ್ವಚ್ಛ ಮತ್ತು ಕಾಂತಿಯುತವನ್ನಾಗಿ ಮಾಡುತ್ತದೆ.
 
* ನಿಮ್ಮ ತ್ವಚೆಗೆ ದಿನವೂ ಮಾಯಿಶ್ಚುರೈಸರ್‌ಗಳನ್ನು ಬಳಸಿ. ಕೇವಲ ಒಣ ಚರ್ಮಗಳಿಗಷ್ಟೇ ಅಲ್ಲ ಎಣ್ಣೆ ಚರ್ಮಗಳಿಗೂ ಮಾಯಿಶ್ಚುರೈಸರ್‌ಗಳ ಅಗತ್ಯವಿರುತ್ತದೆ. ನೀವು ಬಳಸುವ ಕ್ರೀಮ್ ಅಥವಾ ಲೋಶನ್‌ಗಳಲ್ಲಿ ಅಧಿಕ ಎಣ್ಣೆಯ ಅಂಶಗಳು ಇರದಂತೆ ನೋಡಿಕೊಳ್ಳಿ.
 
* ಚರ್ಮದ ವ್ಯಾಧಿಗಳನ್ನು ದೂರವಿಡಲು ದಿನವೂ ಹೆಚ್ಚು ಹೆಚ್ಚು ನೀರು, ಫ್ರೆಶ್ ಜ್ಯೂಸ್‌ಗಳು ಮತ್ತು ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುವ ಆಹಾರಗಳನ್ನು ಸೇವಿಸಿ.
 
* ಹೆಚ್ಚು ಬಾರಿ ಮುಖ ತೊಳೆಯುವುದನ್ನು ಅಥವಾ ಸ್ಕ್ರಬ್ ಮಾಡಿಕೊಳ್ಳಲು ಒರಟಾದ ಸ್ಕ್ರಬರ್ ಅನ್ನು ಬಳಸುವುದನ್ನು ಕಡಿಮೆ ಮಾಡಿ. ಏಕೆಂದರೆ ಅದು ಚರ್ಮ ಹೆಚ್ಚು ಎಣ್ಣೆಯನ್ನು ಹೊರಹಾಕಲು ಕಾರಣವಾಗುತ್ತದೆ.
 
ಈ ಸರಳವಾದ ಸಲಹೆಗಳನ್ನು ಪಾಲಿಸಿ ನೀವೂ ಉತ್ತಮ ತ್ವಚೆಯನ್ನು ನಿಮ್ಮದಾಗಿಸಿಕೊಂಡು ಅಂದವಾಗಿ ಕಾಣಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಊಟದ ಜೊತೆ ರುಚಿಯಾದ ಮಾವಿನಕಾಯಿ ಪದಾರ್ಥಗಳು...!!!