Daily Horoscope
✕

ಈ ಆಹಾರ ಸೇವಿಸುತ್ತಿದ್ದರೆ ನಿಮ್ಮ ಹೊಟ್ಟೆ ಕರಗುವುದು ಖಂಡಿತಾ!

Webdunia
ಬುಧವಾರ, 30 ಆಗಸ್ಟ್ 2017 (08:40 IST)
ಬೆಂಗಳೂರು: ದಪ್ಪ ಹೊಟ್ಟೆ ಎಂಬ ಚಿಂತೆಯೇ? ಹೇಗಾದರೂ ಅದನ್ನು ಕರಗಿಸಬೇಕೆಂದು ಕಸರತ್ತು ಮಾಡುತ್ತಿದ್ದೀರಾ? ಅದಕ್ಕೆ ಈ ಆಹಾರ ವಸ್ತುಗಳನ್ನು ನಿತ್ಯವೂ ಸೇವಿಸಿದರೆ ಸಾಕು.

 
ಓಂ ಕಾಳು
ಓಂ ಕಾಳಿಗೆ ವಿಶಿಷ್ಟ ಸುವಾಸನೆಯಿದೆ. ಇದನ್ನು ಹಲವು ಆರೋಗ್ಯದ ಸಮಸ್ಯೆಗಳಿಗೂ ಬಳಸಲಾಗುತ್ತದೆ. ಉಸಿರಾಟದ ತೊಂದರೆಯಿದ್ದರೆ, ಅಜೀರ್ಣವಾಗಿದ್ದರೆ ಇದು ಒಳ್ಳೆಯದು. ಆದರೆ ಇದು ಬೊಜ್ಜು ಕರಗಿಸುವುದಕ್ಕೂ ರಾಮ ಬಾಣ ಎಂದು ನಿಮಗೆ ಗೊತ್ತಿದೆಯೇ? ಒಂದು ಟೇಬಲ್ ಸ್ಪೂನ್ ಓಂ ಕಾಳುಗಳನ್ನು ಕುದಿಸಿದ ನೀರಿಗೆ ಹಾಕಿಕೊಂಡು ದಿನವಿಡೀ ಕುಡಿಯುತ್ತಿದ್ದರೆ ಹೊಟ್ಟೆ ತೆಳ್ಳಗಾಗಬಹುದು.

ಹೆಸರು ಬೇಳೆ
ಹೆಸರು ಬೇಳೆ ಪಾಯಸ, ಕೋಸಂಬರಿ ಮಾಡುವುದಕ್ಕಷ್ಟೇ ಅಲ್ಲ. ಇದರಲ್ಲಿ ಹೇರಳವಾಗಿ ಕ್ಯಾಲ್ಶಿಯಂ, ನಾರಿನಂಶ ಇದ್ದು ಕೊಬ್ಬು ಕರಗಿಸುವ ಗುಣವಿದೆ. ಸಾಕಷ್ಟು ಕ್ಯಾಲೊರಿ ನೀಡುವುದರಿಂದ ಬೇಗನೇ ನಮ್ಮ ಹೊಟ್ಟೆ ತುಂಬುತ್ತದೆ.

ಸೋರೆಕಾಯಿ
ಸೋರೆಕಾಯಿಯಲ್ಲಿ ವಿಟಮಿನ್ ಎ, ಸಿ, ಕ್ಯಾಲ್ಶಿಯಂ, ಮ್ಯಾಗ್ನಿಶಿಯಂ, ಪೋಸ್ಪರಸ್ ಮತ್ತು ಪೊಟೇಷಿಯಂ ಹೇರಳವಾಗಿದೆ.  ಇದರಲ್ಲಿ ಕೇವಲ 73 ಕ್ಯಾಲೊರಿ ಇದ್ದು ಡಯಟ್ ಗೆ ಹೇಳಿ ಮಾಡಿಸಿದ ತರಕಾರಿ. ಇದರಲ್ಲಿರುವ ವಿಟಮಿನ್ ಗಳು ಬೊಜ್ಜು ಕರಗಿಸಲು ನೆರವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನಕ್ಕೆ ಎಷ್ಟು ಗಂಟೆ ಇಯರ್ಫೋನ್ ಬಳಸಬಹುದು, ಹೆಚ್ಚು ಬಳಸಿದರೆ ಏನಾಗುತ್ತದೆ ಗಮನಿಸಿ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಮುಂದಿನ ಸುದ್ದಿ
Show comments