Select Your Language

Notifications

webdunia
webdunia
webdunia
webdunia

ಮುಟ್ಟಿನ ಸಮಯದಲ್ಲಿ ಬರುವ ನೋವಿಗೆ ಇದನ್ನು ಸೇವಿಸಿ!

ಮುಟ್ಟಿನ ಸಮಯದಲ್ಲಿ ಬರುವ ನೋವಿಗೆ ಇದನ್ನು ಸೇವಿಸಿ!
ಬೆಂಗಳೂರು , ಸೋಮವಾರ, 22 ಜೂನ್ 2020 (09:41 IST)
ಬೆಂಗಳೂರು: ಮುಟ್ಟಿನ ಸಮಯದಲ್ಲಿ ಯುವತಿಯರಿಗೆ ಹೊಟ್ಟೆ ನೋವಿನ ಸಮಸ್ಯೆ ಹೊಸದೇನಲ್ಲ. ಇಂದು ಇದು ಸಾಮಾನ್ಯವಾಗಿದೆ. ಆದರೆ ಈ ಸಮಯದಲ್ಲಿ ನೋವು ಕಡಿಮೆಯಾಗಬೇಕಾದರೆ ಏನು ಮಾಡಬೇಕು ಗೊತ್ತಾ?

 

ಬೆಲ್ಲ ಅಥವಾ ಬೆಲ್ಲದಲ್ಲಿ ಮಾಡಿದ ಸಿಹಿ ತಿನಿಸನ್ನು ಸೇವಿಸುತ್ತಿದ್ದರೆ ಉತ್ತಮ.  ಅದೇ ರೀತಿ ಎಳ್ಳಿನ ಪದಾರ್ಥಗಳು, ಖಾದ್ಯಗಳನ್ನು ಆದಷ್ಟು ಸೇವಿಸಿ. ಜೀರಿಗೆ ಹುರಿದುಕೊಂಡು ಕಷಾಯ ಮಾಡಿ ಅದಕ್ಕೆ ಸ್ವಲ್ಪ ತುಪ್ಪ ಹಾಕಿಕೊಂಡು ಸೇವಿಸುತ್ತಿರಿ.

ಈ ಸಮಯದಲ್ಲಿ ಆದಷ್ಟು ಮಸಾಲೆಯುಕ್ತ ಆಹಾರ ಸೇವನೆ ಮಾಡುವುದು ಬೇಡ. ಆದಷ್ಟು ದೈಹಿಕ ಶ್ರಮ ಸಿಗುವ ಕೆಲಸ ಮಾಡದೇ ಇದ್ದರೆ ಉತ್ತಮ. ಹೆಚ್ಚು ಎಡಬದಿಗೆ ಹೊರಳಿ ಮಲಗುವುದರಿಂದ ಹೊಟ್ಟೆ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಮಲಗುವ ಮೊದಲು ನೀರು ಕುಡಿಯುವುದರಿಂದ ಏನಾಗುತ್ತದೆ?