Select Your Language

Notifications

webdunia
webdunia
webdunia
webdunia

ಅರಿಶಿನ ಪುಡಿಯನ್ನು ಪರೀಕ್ಷಿಸಲು ಈ ವಿಧಾನ ಬಳಸಿ!

ಅರಿಶಿನ ಪುಡಿಯನ್ನು ಪರೀಕ್ಷಿಸಲು ಈ ವಿಧಾನ ಬಳಸಿ!
ಬೆಂಗಳೂರು , ಮಂಗಳವಾರ, 24 ಸೆಪ್ಟಂಬರ್ 2019 (08:28 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕಲಬೆರಕೆಯ ಸಮಸ್ಯೆ ಹೆಚ್ಚಾಗಿದೆ. ಈ ವಸ್ತುಗಳನ್ನು ಸೇವಿಸುವುದರಿಂದ ಆರೋಗ್ಯದ ಬದಲು ಅನಾರೋಗ್ಯವೇ ಹೆಚ್ಚು ಕಾಡುತ್ತದೆ. ಅದರಲ್ಲಿ ಅರಶಿನ ಕೂಡ ಒಂದು. ಈ ಅರಶಿನ ಪುಡಿ ಕಲಬೆರಕೆಯೇ? ಅಥವಾ  ಅಲ್ಲವೇ ಎಂಬುದನ್ನು ಹೀಗೆ ತಿಳಿಯಿರಿ.




* ಒಂದು ಪೇಪರ್ ಮೇಲೆ ಅರಶಿಣದ ಬೇರನ್ನು ಇಟ್ಟು ಅದರ ಮೇಲೆ ನೀರು ಸುರಿಯರಿ, ಅದೇನಾದರೂ ಬಣ್ಣ ಬಿಡಲು ಪ್ರಾರಂಭಿಸಿದರೆ ಅದು ಕಲಬೆರಕೆ ಅದಕ್ಕೆ ಹೊಳಪು ಬರಲು ರಾಸಾಯನಿಕ ಬಳಸಿದ್ದಾರೆ ಎಂದು ಅರ್ಥ.


* ಒಂದು ಸಣ್ಣ ಗಾಜಿನ ಲೋಟದಲ್ಲಿ ಸ್ವಲ್ಪ ಅರಶಿಣ ಅದಕ್ಕೆ ಹೈಡ್ರೋಕ್ಲೋರಿಕ್ ಆ್ಯಸಿಡ್ ಮತ್ತು ನೀರು ಸೇರಿಸಿ ಮಾಡಿ ಚೆನ್ನಾಗಿ ಅಲುಗಾಡಿಸಿ ಮಿಶ್ರ ಮಾಡಿ. ಈಗ ಈ ಮಿಶ್ರಣ ಗುಲಾಬಿ ಬಣ್ಣಕ್ಕೆ ತಿರುಗುದರೆ ಅದರಲ್ಲಿ ಮೆಥಾನಿಲ್ ಹಳದಿ ಸೇರಿಸಿದ್ದಾರೆಂದು ಅರ್ಥ.


* ಒಂದು ಸಣ್ಣ ಗಾಜಿನ ಲೋಟದಲ್ಲಿ ಸ್ವಲ್ಪ ಅರಶಿಣ ಅದಕ್ಕೆ ಹೈಡ್ರೋಕ್ಲೋರಿಕ್ ಆ್ಯಸಿಡ್ ಮತ್ತು ನೀರು ಸೇರಿಸಿ ಮಾಡಿ ಚೆನ್ನಾಗಿ ಅಲುಗಾಡಿಸಿ ಮಿಶ್ರ ಮಾಡಿ. ಈಗ ದ್ರವದಿಂದ ಗುಳ್ಳೆಗಳು ಎದ್ದರೆ ಅದರಲ್ಲಿ ಚಾಕ್ ಪೌಡರ್ ಸೇರಿಸಿದ್ದಾರೆಂದು ಅರ್ಥ.


* ಒಂದು ಗ್ಲಾಸ್ ನಲ್ಲಿ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಅರಶಿಣದ ಪುಡಿಯನ್ನು ಉದುರಿಸಿ. ಇದನ್ನು ನೀರಿನೊಂದಿಗೆ ಮಿಶ್ರ ಮಾಡಬೇಡಿ. ನೀರಿನ ಮೇಲೆ ಉದುರಿಸಿ 20 ನಿಮಿಷ ಹಾಗೇ ಬಿಟ್ಟು ನಂತರ ಪರೀಕ್ಷಿಸಿ. ಈಗ ಅರಶಿಣ ಅಥವಾ ಅದರ ಅಣುಗಳು ನೀರಿನ ಕೆಳಗೆ ಹೋಗಿ ಮೇಲೆ ಕೇವಲ ಸ್ವಚ್ಛವಾದ ನೀರು ಮಾತ್ರವಿದ್ದರೆ ಈ ಅರಶಿಣ ಉತ್ತಮ ಗುಣಮಟ್ಟದ್ದು ಎಂದರ್ಥ. ಅದರ ಬದಲಾಗಿ ಅರಶಿಣ ನೀರಿನ ಜೊತೆ ಕರಗಿ ನೀರಿನ ಬಣ್ಣ ಬದಲಾಗಿದ್ದರೆ ಅದು ಕಲಬೆರಕೆ ಅರಶಿಣ ಎಂದು.


Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಸೌಂದರ್ಯವನ್ನು ಕಾಪಾಡಲು ರಾತ್ರಿ ಮಲಗುವ ಮುಂಚೆ ತಪ್ಪದೇ ಈ ಕೆಲಸ ಮಾಡಿ