Select Your Language

Notifications

webdunia
webdunia
webdunia
webdunia

ಅವಲಕ್ಕಿ ತಿನ್ನುವುದು ಎಷ್ಟು ಆರೋಗ್ಯಕರ ಗೊತ್ತಾ?

ಅವಲಕ್ಕಿ ತಿನ್ನುವುದು ಎಷ್ಟು ಆರೋಗ್ಯಕರ ಗೊತ್ತಾ?
Bangalore , ಗುರುವಾರ, 20 ಜುಲೈ 2017 (08:54 IST)
ಬೆಂಗಳೂರು: ನಮ್ಮ ಬೆಳಗಿನ ಉಪಾಹಾರದಲ್ಲಿ ಅವಲಕ್ಕಿ ಒಂದು ಅವಿಭಾಜ್ಯ ಅಂಗವೇ ಆಗಿ ಬಿಟ್ಟಿದೆ. ಸುಲಭವಾಗಿ ಮಾಡಲು ಸಾಧ್ಯವಾಗುವ ತಿಂಡಿಗಳಲ್ಲಿ ಅವಲಕ್ಕಿ ಉಪ್ಪಿಟ್ಟು ಕೂಡಾ ಒಂದು. ಆದರೆ ಇದು ಎಷ್ಟು ಆರೋಗ್ಯಕರ ಗೊತ್ತಾ?


ವಿದೇಶದಿಂದ ಬಂದ ಓಟ್ಸ್,ನೂಡಲ್ಸ್ ನಂತಹ  ಆಹಾರ ವಸ್ತುಗಳು ಭಾರತದಲ್ಲಿ ಜನಪ್ರಿಯವಾಗುವ ಮೊದಲೇ ಅವಲಕ್ಕಿಯೇ ನಂ.1 ಸ್ಥಾನದಲ್ಲಿತ್ತು. ಅವಲಕ್ಕಿ ತಿನ್ನುವುದು ನಮ್ಮ ದೇಹಕ್ಕೆ ಓಟ್ಸ್ ನಷ್ಟೇ ಉತ್ತಮ. ಅವಲಕ್ಕಿಯಲ್ಲಿ ಶೇ. 76 ರಷ್ಟು ಕಾರ್ಬೋಹೈಡ್ರೇಟ್ ಅಂಶವಿದೆ. 23 ಶೇ. ಕೊಬ್ಬಿನಂಶವಿದೆ.

ಇದರಲ್ಲಿ ವಿಟಮಿನ್ ಬಿ ಅಂಶ ಹೇರಳವಾಗಿರುವುದರಿಂದ ಮಧುಮೇಹ ನಿಯಂತ್ರಿಸುವ ಗುಣ ಹೊಂದಿದೆ.  ಅವಲಕ್ಕಿಯಲ್ಲಿ ಪೋಷಕಾಂಶಗಳು ಏನೂ ಇಲ್ಲದಿದ್ದರೂ, ಅದಕ್ಕೆ ಕೊಂಚ ತರಕಾರಿ ಹಾಕಿ ಉಪ್ಪಿಟ್ಟು ಮಾಡಿಕೊಂಡು ತಿನ್ನುವುದರಿಂದ ರುಚಿಕರ ಮತ್ತು ಆರೋಗ್ಯಕರವಾಗುವುದು ಅಕ್ಕಿ ಬಳಸಿ ಮಾಡುವುದರಿಂದ ಇದು ಬೇಗನೇ ಜೀರ್ಣವಾಗುವುದು.

ಇದರಲ್ಲಿ ವಿಟಮಿನ್ ಬಿ ಜತೆಗೆ ವಿಟಮಿನ್ ಎ, ಕಬ್ಬಿಣದಂಶ, ಕ್ಯಾಲ್ಶಿಯಂ, ಪೋಸ್ಪರಸ್ ಇರುವುದರಿಂದ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಮತ್ತೇಕೆ ತಡ? ಬೆಳಗಿನ ಉಪಾಹಾರಕ್ಕೆ ಚಿಂತೆಯಿಲ್ಲದೆ ಉಪ್ಪಿಟ್ಟು ಮಾಡಿ ತಿನ್ನಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಿನವೊಂದಕ್ಕೆ ಮಹಿಳೆಯರು ಸೆಕ್ಸ್ ಬಗ್ಗೆ ಅದೆಷ್ಟು ಬಾರಿ ಯೋಚಿಸುತ್ತಾರೆ ಗೊತ್ತೇ?