Select Your Language

Notifications

webdunia
webdunia
webdunia
webdunia

ಮನೆಯಲ್ಲಿಯೇ ತಯಾರಿಸಿ ಮಕ್ಕಳಿಗೆ ಪ್ರಿಯವಾದ ಬಿಸ್ಕೆಟ್

ಮನೆಯಲ್ಲಿಯೇ ತಯಾರಿಸಿ ಮಕ್ಕಳಿಗೆ ಪ್ರಿಯವಾದ ಬಿಸ್ಕೆಟ್
ಬೆಂಗಳೂರು , ಸೋಮವಾರ, 13 ಜುಲೈ 2020 (07:57 IST)
ಬೆಂಗಳೂರು : ಮಕ್ಕಳು ಬಿಸ್ಕೆಟ್ ತುಂಬಾ ಇಷ್ಟಪಡುತ್ತಾರೆ. ಆದಕಾರಣ ಮಾರುಕಟ್ಟೆಯಿಂದ ಬಿಸ್ಕೆಟ್ ಗಳನ್ನು ತಂದುಕೊಡುವ ಬದಲು ಮನೆಯಲ್ಲಿಯೇ ಬಿಸ್ಕೆಟ್ ಮಾಡಿಕೊಡಿ.

ಬೇಕಾಗುವ ಸಾಮಾಗ್ರಿಗಳು : ½ ಕೆಜಿ ಮೈದಾಹಿಟ್ಟು, ½ ಕೆಜಿ ತುಪ್ಪ, ½ ಚಮಚ ಉಪ್ಪು, ½ ಚಮಚ ಅರಶಿನ ಪುಡಿ, ½ ಚಮಚ ಓಂಕಾಳು, ½ ಗ್ಲಾಸ್ ನೀರು.

ಮಾಡುವ ವಿಧಾನ : ಮೊದಲಿಗೆ ಒಂದು ಪಾತ್ರೆಗೆ ಮೈದಾ ಹಿಟ್ಟು, ಸ್ವಲ್ಪ ತುಪ್ಪ, ಅರಶಿನ ಪುಡಿ, ಓಂಕಾಳು, ½ ಗ್ಲಾಸ್ ನೀರನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. 5 ನಿಮಿಷ ಬಿಟ್ಟು ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಲಟ್ಟಿಸಿಕೊಳ್ಳಿ. ಅದರ ಮೇಲೆ ಚಿಕ್ಕ ಚಿಕ್ಕ ರಂಧ್ರಗಳನ್ನು ಮಾಡಿ. ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಂಡು ಅದು ಕಾದ ಬಳಿಕ  ಲಟ್ಟಿಸಿದ ಹಿಟ್ಟನ್ನು ಬಿಡಿ. ಕಂದು ಬಣ್ಣ ಬರುವವರೆಗೂ ಕರಿಯಿರಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಳಿ ಕೂದಲಿನ ಸಮಸ್ಯೆ ನಿಮ್ಮನ್ನ ಕಾಡುತ್ತಿದ್ದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ