Webdunia - Bharat's app for daily news and videos

Install App

ಮಕ್ಕಳಿಗೂ ಕಾಡುವ ಅಸಿಡಿಟಿ ಹೊಟ್ಟೆನೋವು, ಏನೇನು ಮಾಡಬೇಕು?

Webdunia
ಮಂಗಳವಾರ, 10 ಜನವರಿ 2017 (12:39 IST)
ಬೆಂಗಳೂರು: ಒಂದು ಕಾಲದಲ್ಲಿ ಅಸಿಡಿಟಿ ಸಮಸ್ಯೆ ಕೇವಲ ವಯಸ್ಕರಿಗೆ ಮಾತ್ರ ಎಂಬಂತಿತ್ತು. ಆದರೆ ಈಗ ಮಕ್ಕಳಲ್ಲೂ ಇದು ಸಾಮಾನ್ಯವಾಗಿ ಬಿಟ್ಟಿದೆ.


ಇದಕ್ಕೆ ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯೇ ಕಾರಣ.  ಇದಕ್ಕೆ ವೈದ್ಯರ ಔಷಧಿ ಸೇವಿಸುವ ಬದಲು ನಾವೇ ನಮ್ಮ ಮಕ್ಕಳಿಗೆ ಆಹಾರ ನೀಡುವ ಕ್ರಮವನ್ನು ಬದಲಾಯಿಸಿಕೊಂಡು ನಿಯಂತ್ರಣಕ್ಕೆ ತರಬಹುದು.

ಹೆಚ್ಚು ಹೊತ್ತು ಹಸಿದಿರದಂತೆ ನೋಡಿಕೊಳ್ಳಿ. ಒಂದೇ ಸಮನೆ ತಿಂದು ಮತ್ತೆ ಸುಮಾರು ಹೊತ್ತು ಖಾಲಿ ಹೊಟ್ಟೆಯಲ್ಲಿರುವುದೂ ಒಳ್ಳೆಯದಲ್ಲ. ಅದರ ಬದಲಿಗೆ ನಿಯಮಿತವಾಗಿ ಆಹಾರ ಕೊಡುತ್ತಾ  ಹೊಟ್ಟೆ ಖಾಲಿ ಇರದಂತೆ ನೋಡಿಕೊಳ್ಳುವುದು ಮುಖ್ಯ. ತುಂಬಾ ಎಣ್ಣೆ, ಖಾರ, ಹುಳಿ ಪದಾರ್ಥಗಳನ್ನು ನೀಡಬೇಡಿ.

ಮಕ್ಕಳಿಗೆ ನೀಡುವ ಆಹಾರದಲ್ಲಿ ಹೆಚ್ಚು ಹಸಿರು ತರಕಾರಿ, ಹಣ್ಣು ಇರುವಂತೆ ನೋಡಿಕೊಳ್ಳಿ.  ಇದರಿಂದ ಹೊಟ್ಟೆ ಹಾಳಾಗಲ್ಲ. ಶೇಖರಿಸಿಟ್ಟ ಜ್ಯೂಸ್ ಮತ್ತಿತರ ಪಾನೀಯದ ಬದಲು ಫ್ರೆಶ್ ಜ್ಯೂಸ್ ಮನೆಯಲ್ಲೇ ಮಾಡಿಕೊಡಿ. ಎಲ್ಲಕ್ಕಿಂತ ಹೆಚ್ಚು ನೀರು ಸಾಕಷ್ಟು ಕುಡಿಸಿ.

ಹೊಟ್ಟೆಯಲ್ಲಿ ಅಸಿಡಿಟಿ ಹೆಚ್ಚಿಸುವಂತಹ ಕೋಲಾ ಡ್ರಿಂಕ್ಸ್ ಗಳು ಮತ್ತು ಚಾಕಲೇಟ್ ಗಳನ್ನು ನೀಡಬೇಡಿ. ಇದರಲ್ಲಿ ಕೆಫೈನ್ ಅಂಶ ಹೆಚ್ಚಿರುತ್ತದೆ. ಇದು ಅಸಿಡಿಟಿಗೆ ಒಳ್ಳೆಯದಲ್ಲ. ತೆಳ್ಳಗಿನ ಮಜ್ಜಿಗೆ, ಬಾಳೆ ಹಣ್ಣು ತಿನ್ನಲು ಕೊಡಿ.

ಚಿಕ್ಕ ವಯಸ್ಸಿನ ಮಕ್ಕಳಿಗೆ ಆದಷ್ಟು ಈ ಸಮಸ್ಯೆಗೆ ಮನೆ ಮದ್ದು ಮಾಡುವುದೇ ಒಳ್ಳೆಯದು. ಜೀರಿಗೆ ಕಷಾಯ ಮಾಡಿ ಕುಡಿಯುವುದು, ತೆಳ್ಳಗಿನ ಮಜ್ಜಿಗೆಗೆ ಜೀರಿಗೆ ಅಥವಾ ಇಂಗು ಹಾಕಿ ಸೇವಿಸುವುದು ಇತ್ಯಾದಿ ಮನೆ ಔಷಧವೇ ಉತ್ತಮ.  ಮುಖ್ಯವಾಗಿ ಮಕ್ಕಳಿಗೇ ಆಗಲಿ ವಯಸ್ಸಾದವರಿಗೇ ಆಗಲಿ ಚೆನ್ನಾಗಿ ಬೇಯಿಸಿದ ಆಹಾರ ಸೇವನೆ ಜೀರ್ಣಕ್ರಿಯೆಗೂ ಸಹಕಾರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಆಹಾರದಲ್ಲಿ ಕಿವಿ ಹಣ್ಣು ಸೇರಿಸಲು 5 ಕಾರಣಗಳು

ಕ್ರಿಸ್ಮಸ್ 2024: ಹೆಚ್ಚು ಖರ್ಚು ಮಾಡದೆ ಸೀಕ್ರೆಟ್ ಸಾಂಟಾ ಉಡುಗೊರೆ ಆಯ್ಕೆಗೆ ಇಲ್ಲಿದೆ ಸಲಹೆ

ತೂಕ ಇಳಿಸಿಕೊಳ್ಳಲು ಸರ್ಕಸ್‌ ಮಾಡುತ್ತಿರುವವರು ಈ ರೀತಿ ಮಾಡಿ

ಚಳಿಗಾಲದಲ್ಲಿ ಇಡ್ಲಿ ಹಿಟ್ಟು ಹುದುಗು ಬರಲು ಇಲ್ಲಿದೆ ಕೆಲ ಟಿಪ್ಸ್‌

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಳಿಗಾಲದ ಆಹಾರಗಳು

ಮುಂದಿನ ಸುದ್ದಿ
Show comments